ಕಲಬುರಗಿ: ಹಿಂದುಳಿದ ವರ್ಗಗಳ(obc)ಜಾತಿ ಆಧಾರಿತ ಜನಗಣತಿ ನಡೆಸಲು ಒತ್ತಾಯಿಸಿ ಬಹುಜನ ಕ್ರಾಂತಿ ಮೋರ್ಚಾದಿಂದ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಭಾರತ ಮುಕ್ತಿ ಮೋರ್ಚಾ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗ ಒಬಿಸಿ ಮೋರ್ಚಾ ಸಹಯೋಗದಲ್ಲಿ ಇತರೆ ಹಿಂದುಳಿದ ವರ್ಗಗಳ ಒಬಿಸಿ ಜಾತಿಯಾಧರಿತವಾಗಿ ಜನಗಣತಿ ನಡೆಸಲು ಹಾಗೂ ವಿವಾದಿತ ಮೂರು ಕೃಷಿ ಕಾಯ್ದೆ ಹಿಂಪಡೆಯುವಂತೆ ಹೋರಾಟಗಾರರು ಆಗ್ರಹಿಸಿದರು.
ಇ.ವಿ.ಎಮ್ ಮೂಲಕ ಹೋರಬರುವ ಪೇಪರ್ ಟ್ರೈಲನ್ನು ಪ್ರತಿಶತ ನೂರರಷ್ಟು ಹೊಂದಾಣಿಕೆ ಮಾಡವುದು ಅಥವಾ ಮತಪತ್ರದಿಂದ ಚುನಾವಣೆ ನಡೆಸುವಂತೆ ಒತ್ತಾಯಿಸಿ ಇಂದು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಠ್ರಪತಿಗಳಿಗೆ ಮನವಿ ಸಲ್ಲಿಸುವ ಭಾರತ ಮುಕ್ತಿ ಮೋರ್ಚಾ ಸಂಘಟನೆ ನವದೆಹಲಿ ಆದೇಶದಂತೆ ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಬೇಡಿಕೆಗಳು ಈಡೇರದಿದ್ದರೆ ಮತ್ತೆ ಅಕ್ಟೋಬರ್ 29. ನವ್ವೆಂಬರ 12 ಜೈಲ್ ಬರೋ ಚಳುವಳಿ ಹಾಗೂ ಡಿಸೆಂಬರ್ 10 ರಂದು ಸಂಪೂರ್ಣವಾಗಿ ಭಾರತ್ ಬಂದ್ ಮಾಡಲಾಗುವುದೆಂದು ಸರ್ಕಾರಕ್ಕೆ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಗೋಪಾಲ ಗಾರಂಪಳ್ಳಿ, ಮಹ್ಮದ್ ಶಫಿ, ಡಾ.ಮಹೇಶ್, ಮಾರುತಿ ಜಾಧವ್, ಮೌನೇಶ್ ಗಾರಂಪಳ್ಳಿ, ಶಾಮರೆಡ್ಡಿ, ಮಾರುತಿ ಗಂಜಗಿರಿ, ವಿಷ್ಣುವರ್ಧನ್ ಮುಂತಾದವರು ಉಪಸ್ಥಿತರಿದ್ದರು.