ಈದಮಿಲಾದ ಹಬ್ಬಕ್ಕೆ ಅನುಮತಿ ನೀಡುವಂತೆ ಸಚೀನ್ ಫರತಾಬಾದ ಒತ್ತಾಯ

0
20

ಕಲಬುರಗಿ: ಮುಸ್ಲಿಂ ಧರ್ಮದವರ ಪವಿತ್ರ ಹಬ್ಬವಾದ ಈದಮೀಲಾದ ಹಬ್ಬದ ಮರವಣಿಗೆ ಕೈಗೊಳ್ಳಲು ಜಿಲ್ಲಾಡಳಿತ ತಡೆಯಾಜ್ಞೆ ನೀಡಿದ್ದು,  ಕಲಬುರಗಿ ನಗರಕ್ಕೆ ಬರುವ  ರಾಜಕಾರಣೆಗಳು ಬಂದಾಗ  ಅಸಂಖ್ಯಾತ  ರಾಜಕೀಯ ಪಕ್ಷದ ಮುಖಂಡರು ಹಾಗೂ ಸಾವಿರಾರು ಜನರ ಮಧ್ಯೆ  ಅವರ ಅದ್ಧೂರಿ ಮೆರವಣಿಗೆ ನಮ್ಮ ಕಣ್ಣ ಮುಂದೆ ಇರುತ್ತದೆ.  ಆದ್ದರಿಂದ ಜಿಲ್ಲಾಡಳಿತವು ಒಂದು ಕಣ್ಣಿಗೆ ಬೆಣ್ಣಿ  ಇನ್ನೊಂದು ಕಣ್ಣಿಗೆ ಸುಣ್ಣ  ಹಚ್ಚುವ  ಕೆಲಸವನ್ನು ಬಿಟ್ಟು,   ಸದರಿ ಮುಸ್ಲಿಂ ಧರ್ಮದವರಿಗೆ ಈದಮಿಲಾದ  ಹಬ್ಬವನ್ನು ವಿಜೃಂಭಣೆ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ವತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಲಾಯಿತು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರತಾಬಾದ ತಿಳಿಸಿದರು.

ಕೋವಿಡ್-೧೯ ರೋಗದ ಲಕ್ಷಣಗಳು  ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಇಳಿಮುಖವಾಗಿದ್ದು, ಇದರಿಂದ ಎಲ್ಲಾ ರಾಜಕೀಯ ಪಕ್ಷಗಳು  ಹಾಗೂ ಇತರೇ ಇತರೆ  ಸಮಾಜದವರಿಗೆ ಮೆರವಣಿಗೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ, ಆದರೆ ಮುಸ್ಲಿಂ ಜನಾಂಗದವರ ಪವಿತ್ರ ಹಬ್ಬವಾದ ಈದಮಿಲಾದ್ ಹಬ್ಬದ ಮೆರವಣಿಗೆಗೆ ಜಿಲ್ಲಾಡಳಿತ ತಡೆಯಾಜ್ಞೆ ಆದೇಶ ನೀಡಿರುವುದು  ಖೇದಕರ ಸಂಗತಿಯಾಗಿದೆ ಇದನ್ನು ವೇದಿಕೆಯು ಉಗ್ರವಾಗಿ ಖಂಡಿಸುತ್ತದೆ ಎಂದು ಸಚೀನ್ ಫರತಾಬಾದ ಆಕೋಶವನ್ನು ವ್ಯಕ್ತಪಡಿಸಿದರು.

Contact Your\'s Advertisement; 9902492681

ಅಲ್ಲದೇ ಭಾರತದ ಅಲ್ಪಸಂಖ್ಯಾತರು ಭಾರತ ದೇಶವನ್ನು ಸ್ವತಂತ್ರಗೊಳಿಸಲು ಇವರ ಕೊಡುಗೆ ಇರುತ್ತದೆ. ಹೀಗಿದ್ದು,  ಇವರಿಗೊಂದು  ಭೇದ ಅವರಿಗೊಂದು ಭೇದ  ಮಾಡಿ,  ಭಾರತ ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಮೆರವಣಿಗೆ ಮಾಡುವ ಅವಕಾಶ ಕಲ್ಪಿಸಿರುತ್ತದೆ.  ಇದನ್ನು ಬಿಟ್ಟು  ಕೋವಿಡ್-೧೯ ನೆಪವೊಡ್ಡಿ ಅವರ ಧರ್ಮ ಸಂಸ್ಕೃತಿಗೆ ದ್ರೋಹ ಮಾಡಬಾರದು.  ಆದ್ದರಿಂದ ಸದರಿ ಜಿಲ್ಲಾಡಳಿತ ಕೂಡಲೇ ಈದಮಿಲಾದ  ಹಬ್ಬವನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲು ಹಾಗೂ ಕೋವಿಡ್-೧೯ ಕಟ್ಟುನಿಟ್ಟಿನ ಕ್ರಮಗಳನ್ನು ಸಮಾಜದವರಿಗೆ ಆದೇಶ ಮಾಡಿ,  ಇವರಿಗೆ ಮೆರವಣಿಗೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ವೇದಿಕೆಯ ವತಿಯಿಂದ  ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here