ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಶಿಕ್ಷಕರ ಸಂಘದಿಂದ ಮನವಿ

0
20

ಶಹಾಬಾದ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಹಾಬಾದ ತಾಲೂಕಾ ಘಟಕದ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿ ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪದವೀಧರ ಶಿಕ್ಷಕರ ಸಮಸ್ಯೆ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಸೇರಿ ಮುಖ್ಯ ಶಿಕ್ಷಕರುಗಳಿಗೆ ೧೫, ೨೦, ೨೫ ವ?ಗಳ ವೇತನ ಬಡ್ತಿ ನೀಡಬೇಕೆಂದು ಆಗ್ರಹಿಸಿದರು. ಹಾಗೇ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಕಳೆದ ೩ ತಿಂಗಳ ಹಿಂದೆಯೇ ಈ ಕುರಿತು ಕಾಲಮಿತಿಯಲ್ಲಿ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಈಗಾಗಲೇ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಹೆಜ್ಜೆ ಹಾಕಿದ್ದೆವೆ.

Contact Your\'s Advertisement; 9902492681

ಈಗಾಗಲೇ ಮೊದಲ ಭಾಗವಾಗಿ, ಅಕ್ಟೋಬರ್ ೨೧ರಿಂದಲೇ ಅಕ್ಟೋಬರ್ ೨೯ರವರೆಗೆ ಕಪ್ಪು ಪಟ್ಟಿ ಧರಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯಲಿದ್ದೆವೆ. ತರಬೇತಿ ಬಹಿ?ರ, ಕಪ್ಪು ಬಟ್ಟೆ ಧರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಿಸಿದಾಗಲೂ ಸರ್ಕಾರ ಹಾಗೂ ಇಲಾಖೆ ಸ್ಪಂದಿಸದಿದ್ದರೆ ಮುಂದೆ ಅಕ್ಟೋಬರ್ ೩೦ರಿಂದ ನವೆಂಬರ್ ೧೦ರವರೆಗೆ ಮಧ್ಯಾಹ್ನದ ಬಿಸಿಯೂಟದ ಮಾಹಿತಿಯನ್ನು ಅಪಡೇಟ್ ಮಾಡದೇ, ಹಾಗೇ ಎಸ್‌ಎಟಿಎಸ್ ಮಾಹಿತಿಯನ್ನು ಅಪಲೋಡ್ ಮಾಡುವುದಿಲ್ಲ. ಸರ್ಕಾರ ಸಮಸ್ಯೆ ಬಗೆಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ತರಗತಿ ಬಹಿ?ರ, ಶಾಲಾ ಬಹಿ?ರವೂ ಮಾಡುವ ಎಚ್ಚರಿಕೆಯನ್ನು ಸಂಘದ ಸದಸ್ಯರು ನೀಡಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯಸ್ವಾಮಿ ರುದ್ನೂರ್ ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಹಾಬಾದ ತಾಲೂಕಾ ಘಟಕದ ಅಧ್ಯಕ್ಷ ಶಿವಪುತ್ರ ಕರಣಿಕ್,ಪ್ರಧಾನ ಕಾರ್ಯದರ್ಶಿ ಸಂತೋಷ ಸಲಗರ್,ಉಪಾಧ್ಯಕ್ಷೆ ಸುಲೋಚನಾ ಜಾಧವ,ಖಜಾಂಚಿ ಸಾವಿತ್ರಿ ಪಾಟೀಲ, ಅಂಜನಾ ದೇಶಪಾಂಡೆ, ಈರಮ್ಮ ಕಂಬಾನೂರ ಇತರ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here