ಕನಕ ಮೂರ್ತಿ ಪ್ರತಿಷ್ಠಾಪನೆಗೆ ಅನುದಾನ ನೀಡಲು ಮನವಿ

0
14

ಶಹಾಬಾದ: ನಗರದ ಕನಕ ವೃತ್ತದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕನಕ ವೃತ್ತದ ಅಭಿವೃದ್ಧಿಗೋಸ್ಕರ ಸುಮಾರು ೫೦ ಲಕ್ಷ ರೂ. ಅನುದಾನ ಒದಗಿಸಬೇಕೆಂದು ಆಗ್ರಹಿಸಿ ತಾಲೂಕಿನ ಕುರುಬ ಸಮಾಜದ ಮುಖಂಡರು ಸಚಿವರಾದ ಕೆ.ಎಸ್.ಈಶ್ವರಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು.

ಅವರು ನಗರದಿಂದ ತೊನಸನಹಳ್ಳಿ(ಎಸ್) ಗ್ರಾಮದಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮಕ್ಕೆ ಹೋಗುವ ಮಧ್ಯೆ ನಗರದ ಕನಕ ವೃತ್ತದಲ್ಲಿ ಕುರುಬ ಸಮಾಜದ ಮುಖಂಡರು ಮನವಿ ಸಲ್ಲಿಸಿದಲ್ಲದೇ, ಅನೇಕ ವರ್ಷಗಳಿಂದ ಕನಕ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ಸ್ಥಳ ನೀಡದೇ ಇರುವುದು, ಜಾಗಕ್ಕಾಗಿ ಪರದಾಡುವಂತಾಗಿದೆ.ಅಲ್ಲದೇ ಮೂತಿ ಪ್ರತಿಷ್ಠಾಪನೆಗೆ ಹಾಗೂ ಕನಕ ವೃತ್ತ ಅಭಿವೃದ್ಧಿಪಡಿಸಲು ತಾವು ಅನುದಾನ ಒದಗಿಸಿದರೇ, ಇಲ್ಲಿನ ಸೌಂದರ್ಯಿಕರಣವೂ ಹೆಚ್ಚುತ್ತದೆ.ಆದ್ದರಿಂದ ತಾವುಗಳು ಅನುದಾನ ಒದಗಿಸಬೇಕೆಂದು ಮನವಿ ಸಲ್ಲಿಸಿದರು.

Contact Your\'s Advertisement; 9902492681

ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕುರುಬ ಸಮಾಜದ ಅಧ್ಯಕ್ಷ ಮಲ್ಕಣ್ಣ ಮುದ್ದಾ, ಗೊಂಡ ಕುರುಬ ಸಮಾಜದ ಅಧ್ಯಕ್ಷ ಸಾಯಬಣ್ಣ ಕೊಲ್ಲೂರ್, ಮಲ್ಲಿಕಾರ್ಜುನ ಪೂಜಾರಿ, ಮರಲಿಂಗ ಕಮರಡಗಿ, ಶಿವಯೋಗಿ ಕುಂಟನ್, ನಿಂಗಣ್ಣ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here