ಪೂಜ್ಯ ಶ್ರೀ ಡಾ. ವೀರೇಂದ್ರ ಹೆಗಡೆ ರವರ ೫೪ನೇ ಪಟ್ಟಾಭಿಷೇಕ ಮಹೋತ್ಸವ

0
12

ಕಲಬುರಗಿ: ಸಮಾಜದ ಜನತೆಗೆ ಧಾರ್ಮಿಕ ಬೋಧನೆಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಪ್ರೇರೇಪಿಸುವ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ: ವೀರೇಂದ್ರ ಹೆಗಡೆ ಯವರ ಸೇವೆ ಇಂದಿನ ಯುವ ಜನತೆಗೆ ಮಾದರಿಯಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಶ್ರೀ ದತ್ತಾತ್ರೇಯ ಸಿ.ಪಾಟೀಲ ರೇವೂರ ರವರು ನುಡಿದರು.

ಜಿಲ್ಲಾ ಜೈನ ಸಮಾಜ ಹಾಗೂ ಭಾರತೀಯ ಜೈನ ಮಿಲನ್ ಕಲಬುರಗಿ ಜಿಲ್ಲಾ ಶಾಖೆ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಾ. ವೀರೇಂದ್ರ ಹೆಗಡೆ ರವರ ೫೪ನೇ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ನಗರದ ಗಾಜೀಪೂರ ಬಡಾವಣೆಯ ಶ್ರೀ ೧೦೦೮ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಆಯೋಜಿಸಿದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಧರ್ಮಸ್ಥಳವನ್ನು ಮೂಲಕೇಂದ್ರವನ್ನಾಗಿಸಿಕೊಂಡು ಅನ್ನ, ಅಕ್ಷರ, ಅರಿವು, ಆಶ್ರಯ, ಔಷಧಿ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಮೂಲಕ ವಿಶ್ವದ ಜನತೆಯ ಗೌರವಕ್ಕೆ ಪಾತ್ರರಾಗಿರುವ ಹೆಗಡೆಯವರು ಧರ್ಮಸ್ಥಳದ ಸಂಸ್ಥೆಯ ಮೂಲಕ ನಾಡಿನ ರೈತರ ಬದುಕು ಹಸನು ಮಾಡಲು, ಕೆರೆಗಳ ಹೂಳೆತ್ತುವ ಮೂಲಕ ನೀರು ಸಂಗ್ರಹಿಸಿ ಜಲವೃದ್ಧಿಗೆ ಕಾರಣರಾಗಿದ್ದಾರೆ.  ಇಂತಹ ಪುಣ್ಯ ಪುರುಷರನ್ನು ಪಡೆದ ನಾವೆಲ್ಲರೂ ಧನ್ಯರೆಂದು ನುಡಿದ ರೇವೂರ ರವರು ಮಹಿಳೆಯ ಆರ್ಥಿಕ ಸ್ವಾವಲಂಬನೆಗಾಗಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಜೈನ ಸಮಾಜದ ಅಧ್ಯಕ್ಷರಾದ ನಾಗನಾಥ ಚಿಂದೆ ಅಧ್ಯಕ್ಷತೆ ವಹಿಸಿದ್ದರು, ಕಲಬುರಗಿ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಅಪ್ಪು ಕಣಕಿ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ  ಸುರೇಶ ತಂಗಾ, ಜೈನ ಸಮಾಜದ ಹಿರಿಯರಾದ ದೀಪಕ ಪಂಡಿತ, ಭಾರತೀಯ ಜೈನ ಮಿಲನ್ ಅಧ್ಯಕ್ಷರಾದ ರಾಜೇಂದ್ರ ಕುಣಚಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ರಮೇಶ ಬೆಳಕೇರಿ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ವಿನೋದ ಬಬಲಾದ ವಂದಿಸಿದರು.

೫೪ ಜನ ಮುತ್ತೈದೆಯರಿಗೆ ಸಮಾರಂಭದಲ್ಲಿ ಉಡಿ ತುಂಬಲಾಯಿತು. ಸಮಾರಂಭದಲ್ಲಿ ಶ್ರೇಣಿಕ್ ಡೊಳ್ಳೆ, ಬಂಡುಕುಮಾರ ಕುಣಚಗಿ, ಭರಮ ಜಗಶೆಟ್ಟಿ, ವಿನೋದ ಪಾಟೀಲ, ಪಾರ್ಶ್ವನಾಥ ಚಿಂದೆ, ಪ್ರಕಾಶ ಜೈನ್, ರಾಜಕುಮಾರ ಕಿವಡೆ,  ಅನೀಲ ಭಸ್ಮೆ, ನಯನ ಚಿಂದೆ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here