ಸುರಪುರ: ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ನೂತನ ಉಪಾಧ್ಯಕ್ಷರಾಗಿ ನೇಮಕವಾಗಿರುವ ಪ್ರಕಾಶ ಅಂಗಡಿ ಕನ್ನೆಳ್ಳಿ ಅವರನ್ನು ಶರಣ ಸೇವಾ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟ ಸುರಪುರ ತಾಲೂಕ ಘಟಕ ವತಿಯಿಂದ ರಂಗಂಪೇಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂದು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸುರಪುರ ನಗರಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ, ಯಾದಗಿರಿ ಜಿಲ್ಲೆಗೆ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಯುವ ಘಟಕದಲ್ಲಿ ಮಹತ್ತರವಾದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಜವಬ್ದಾರಿ ದೊರೆತಿರುವುದು ಹೆಚ್ಚು ಸಂತಸತಂದಿದೆ ಕಳೆದ ಒಂದು ದಶಕದಿಂದ ನಿರಂತರವಾಗಿ ಸಮಾಜದ ಸಂಘಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕ್ರೀಯಾಶಿಲವಾಗಿ ತೊಡಗಿಸಿಕೊಂಡಿರುವ ಪ್ರಕಾಶ ಅಂಗಡಿ ಅವರನ್ನು ಗುರುತಿಸಿರುವುದು ಸುರಪುರ ತಾಲೂಕಿಗೆ ಹೆಮ್ಮೆಯ ವಿಷಯ ಎಂದರು.
ವೀರಶೈವ ಲಿಂಗಾಯತ ಸಮುದಾಯ ಮುಖಂಡ ಶರಣಪ್ಪ ಕಲಿಕೇರಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ವಿರೇಶ ಹಳೀಮನಿ, ಜಯಕರ್ನಾಟಕ ತಾಲೂಕ ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ, ಶ್ರೀಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ, ಒಕ್ಕೂಟದ ಸುರಪುರ ತಾಲೂಕ ಅಧ್ಯಕ್ಷ ಹಣಮಂತ್ರಾಯ ದೇವತ್ಕಲ್, ಒಕ್ಕೂಟದ ಸಾಮಾಜಿಕ ಜಾಲತಾಣದ ಸಂಚಾಲಕ ದೇವರಾಜ ನಂದಗಿರಿ ಇದ್ದರು. ಸನ್ಮಾನ ಸ್ವಿಕರಿಸಿ ಮಾತನಾಡಿದ ಪ್ರಕಾಶ ಅಂಗಡಿ ಬರುವ ದಿನಗಳಲ್ಲಿ ಸಮಾಜದ ಸಂಘಟನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಲ್ಯಾಣ ಶೆಟ್ಟಿ ಅಂಗಡಿ ನಿರೂಪಿಸಿದರು, ಅಂಬಿಕಾ ಸಂಗಡಿಗರು ಪ್ರಾರ್ಥಿಸಿದರು, ಪ್ರವೀಣ ಜಕಾತಿ ಸ್ವಾಗತಿಸಿದರು, ಸಲೀಂ ಅಡ್ಡೊಡಗಿ ವಂದಿಸಿದರು. ಪ್ರಮುಖರಾದ ಮಂಜುನಾಥ ಹಿರೇಮಠ, ಸಂತೋಷ ಬಿಶೇಟ್ಟಿ, ಸತೀಶ ನಾಯಕ, ಬಲಭೀಮ ಪಾಟಿಲ್, ಸುಭಾಷ ಕಾಯಿ, ಬಸವರಾಜ ಹೆರುಂಡಿ, ಕೃಷ್ಣ ದೇವತ್ಕಲ್, ಗುರು ಹಾಲಭಾವಿ, ಸೇರಿದಂತೆ ಇತರರಿದ್ದರು.