ಸುರಪುರ:ಪೊಲೀಸ್ ಠಾಣೆಯಲ್ಲಿ ಕುಂದು ಕೊರತೆ ಸಭೆ:ಬಹಿಷ್ಕರಿಸಿದ ದಲಿತ ಸಂಘಟಕರು

0
29

ಸುರಪುರ: ನಗರದ ಪೊಲೀಸ್ ಠಾಣೆಯಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸುರಪುರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕ ಡಾ:ದೇವರಾಜ್ ಬಿ,ಅವರ ನೇತೃತ್ವದಲ್ಲಿ ದಲಿತ ದಿನಾಚರಣೆ ಹಾಗು ಕುಂದು ಕೊರತೆ ಸಭೆಯನ್ನು ನಡೆಸಲಾಯಿತು.

ಬುಧವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸುರಪುರ ಶಹಾಪುರ ಹುಣಸಗಿ ತಾಲೂಕಿನ ಅನೇಕ ಜನ ದಲಿತ ಸಂಘಟನೆಗಳ ಮುಖಂಡರು ಸಭೆ ಆರಂಭಗೊಳ್ಳುತ್ತಿದ್ದಂತೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಸಭೆಯನ್ನು ಬಹಿಷ್ಕರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಮೂಲನಿವಾಸಿ ಅಂಬೇಡ್ಕರ್ ಸೇನೆ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ,ಕಳೆದ ಕೆಲ ದಿನಗಳ ಹಿಂದೆ ನಡೆದ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬುದ್ಧನ ಮೂರ್ತಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಇಲ್ಲಿಯವರೆಗೂ ಬಂಧಿಸಿಲ್ಲ.ಇನ್ನು ಚೌಡೇಶ್ವರಿಹಾಳ ಗ್ರಾಮದಲ್ಲಿ ಹತ್ಯೆಗೀಡಾಗಿರುವ ದಲಿತ ಮಹಿಳೆಯ ಹತ್ಯೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಬಂಧಿಸಿಲ್ಲ ಇದರಂತೆ ಚಟ್ನಳ್ಳಿ ಗ್ರಾಮದಲ್ಲಿನ ದಲಿತ ಮಹಿಳೆ ಮೇಲೆ ಹಲ್ಲೆ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ನಡೆದ ದಲಿತರ ಮೇಲಿನ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿಲ್ಲ,ಅಂದಮೇಲೆ ನಾವು ಕೇವಲ ಕಾಟಾಚಾರಕ್ಕೆ ನಡೆಯುವ ಸಭೆಯಲ್ಲಿ ಯಾಕೆ ಭಾಗವಹಿಸಬೇಕು ಎಂದು ಪ್ರಶ್ನಿಸಿದರು.

ಅಲ್ಲದೆ ಈಗ ಹೊಸದಾಗಿ ಡಿವೈಎಸ್ಪಿಯವರು ಬಂದಿದ್ದಾರೆ,ನಮಗೆ ಅವರ ಬಗ್ಗೆ ಯಾವುದೇ ಆರೋಪವಿಲ್ಲ.ಆದರೆ ಹಿಂದೆ ನಡೆದ ಎಲ್ಲಾ ಘಟನೆಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದಕ್ಕೆ ಬೇಸರವಿದೆ,ಆದ್ದರಿಂದ ಸಭೆಯನ್ನು ಬಹಿಷ್ಕರಿಸುವುದಾಗಿ ಹೇಳಿ ಎಲ್ಲರು ಹೊರ ನಡೆದ ಘಟನೆ ಜರುಗಿತು.

ಸಭೆಯಿಂದ ಹೊರಬಂದ ಸಂಘಟಕರನ್ನು ಶಹಾಪುರ ಸಿಪಿಐ ಶ್ರೀನಿವಾಸ ಅಲ್ಲಾಪುರ ಮತ್ತು ಚನ್ನಯ್ಯ ಹಿರೇಮಠ ಹಾಗು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿಯವರು ಪ್ರಯತ್ನಿಸಿದರಾದರು ಹೋರಾಟಗಾರರು ಮನ್ನಣೆ ನೀಡದೆ ಹೊರ ನಡೆದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವೆಂಕೋಬ ದೊರೆ ಬೊಮ್ಮನಹಳ್ಳಿ,ವೆಂಟಕೇಶ ಹೊಸ್ಮನಿ,ನಾಗಣ್ಣ ಕಲ್ಲದೇವನಹಳ್ಳಿ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಹಳ್ಳಿ,ಭೀಮರಾಯ ಹೊಸ್ಮನಿ,ಬುಚ್ಚಪ್ಪ ನಾಯಕ ಕಕ್ಕೇರಾ,ಭೀಮಾಶಂಕರ ಬಿಲ್ಲವ್,ಶಿವಲಿಂಗ ಹಸನಾಪುರ,ರಾಮಣ್ಣ ಶೆಳ್ಳಗಿ,ವೀರಭಧ್ರ ತಳವಾರಗೇರಾ,ತಿಪ್ಪಣ್ಣ ಶೆಳ್ಳಗಿ,ಮಲ್ಕಪ್ಪ ತೇಲ್ಕರ್,ಮರೆಪ್ಪ ಸಾದ್ಯಾಪುರ,ಮರೆಪ್ಪ ಕಾಂಗ್ರೆಸ್ ಸೇರಿದಂತೆ ಶಹಾಪುರ,ಕೆಂಭಾವಿ,ಹುಣಸಗಿ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸಿದ ಹೋರಾಟಗಾರರಿದ್ದರು.

ನಾವು ಸರಕಾರದ ಆದೇಶದಂತೆ ಸಭೆಯನ್ನು ನಡೆಸುತ್ತೇವೆ ಮತ್ತು ಸಂಘಟಕರು ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ.ಬಹಿಷ್ಕರಿಸಿದರೆ ನಾವು ಏನು ಮಾಡಲಾಗದು. ಬುದ್ಧನ ಮೂರ್ತಿ ಭಗ್ನಗೊಳಿಸಿದವರನ್ನು ಶೀಘ್ರದಲ್ಲಿ ಬಂಧಿಸುತ್ತೇವೆ ಮತ್ತು ಚೌಡೇಶ್ವರಿಹಾಳ ಗ್ರಾಮದಲ್ಲಿನ ಘಟನೆಗೆ ಸಂಬಂಧಿಸಿ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗುವುದು ಹಾಗು ಮುಂದೆ ಮತ್ತೆ ಸಭೆಯನ್ನು ಆಯೋಜನೆ ಮಾಡಿ ತಿಳಿಸುತ್ತೇವೆ: ಡಾ:ದೇವರಾಜ್ ಬಿ. ಡಿವೈಎಸ್ಪಿ ಸುರಪುರ ಉಪ ವಿಭಾಗ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here