ವಿದ್ಯೆ, ವಿನಯ ಮತ್ತು ಸಂಸ್ಕಾರ ಇಂದಿನ ಪೀಳಿಗೆಗೆ ಅವಶ್ಯಕ : ಪ್ರೊ.ಅಷ್ಠಗಿ

0
39

ಕಲಬುರಗಿ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲು,ವಿದ್ಯೆಯ ಜೊತೆಗೆ ವಿನಯ ಮತ್ತು ಸಂಸ್ಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಬಿಜೆಪಿ ಯುವ ಮುಖಂಡರಾದ ಪ್ರೊ ಯಶವಂತರಾಯ್ ಅಷ್ಠಗಿ ವ್ಯಾಖ್ಯಾನಿಸಿದರು.

ತಾಲೂಕಿನ ಸುಕ್ಷೇತ್ರ ಕಲಮೂಡ ಗ್ರಾಮದಲ್ಲಿ ಹಮ್ಮಿಕೊಂಡಿರುವ ದತ್ತ ದಿಗಂಬರ ಮಾಣಿಕೇಶ್ವರರ ಲಕ್ಷ ದೀಪೊತ್ಸವ ಕಾರ್ಯಕ್ರಮ ಅಂಗವಾಗಿ ಜರುಗುತ್ತಿರುವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣದ ಧಾರ್ಮಿಕ ಸಮಾರಂಭವದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದ ಜೊತೆ ಅತ್ಯುತ್ತಮವಾದ ಸಂಸ್ಕಾರ ನೀಡುವ ಮೂಲಕ ಗುರು ಹಿರಿಯರ ಮಾರ್ಗದರ್ಶನದೊಂದಿಗೆ ಸಮೃದ್ಧ, ಸುಸಂಸ್ಕೃತ ಹಾಗೂ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

Contact Your\'s Advertisement; 9902492681

ಸೋಂತ ಶ್ರೀಮಠದ ಬಾಲಯೋಗಿ ಅಭಿನವ ಶ್ರೀ ಶಂಕರಲಿಂಗ ಮಹಾರಾಜರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಪುಂಡಲೀಕರಾವ ಚಿರಡೆ, ಎಪಿಎಮಸಿ ಉಪಾಧ್ಯಕ್ಷರಾದ ರಾಜಕುಮಾರ ಕೋಟೆ, ಬಿಜೆಪಿ ಮುಖಂಡರಾದ ಜಗದೀಶ ಪಾಟೀಲ ಸಣ್ಣೂರ, ಬಸವರಾಜ ಕಲಶೇಟ್ಟಿ, ಶರಣು ಕೋರಿ ಸೊಂತ, ಶೋಭಾ ಡಂಬಳ, ಉಮಾದೇವಿ ಶಾಲಿವಾಹನ ಪಾಟೀಲ ದಿನಸಿ, ಪತ್ರಕರ್ತ-ಸಾಹಿತಿಗಳಾದ ಸುರೇಶ ಲೇಂಗಟಿ, ಯುವ ಪತ್ರಕರ್ತ ಸುಧಾಕರ ಲೇಂಗಟಿ, ಪುರಾಣಕಾರ ಶಿವಬಸವಯ್ಯ ಶಾಸ್ತ್ರಿ, ಸೇರಿದಂತೆ ಬೀದರ ಹಾಗೂ ಕಲಬುರಗಿ ಜಿಲ್ಲೆಯ ಸಹಸ್ರ ಸಹಸ್ರ ಸಂಖ್ಯೆಯ ಮಾಣಿಕೇಶ್ವರ ಮಹಾರಾಜರ ಭಕ್ತವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬರುವ ಮಹಾದಾಸೋಹಿ ಶರಣಬಸವೇಶ್ವರ ಮದುವೆ ನ್ನಿವೇಶದ ಪ್ರಯುಕ್ತ ಬಂದಂತಹ ಭಕ್ತಾದಿಗಳಿಗೆ ಮಹಾ ಪ್ರಸಾದ (ಹೋಳಿಗೆ-ತುಪ್ಪ) ದಾಸೋಹವನ್ನು ರಾಜಕುಮಾರ ಕೋಟೆ ದಂಪತಿಯಗಳು ನಡೆಸಿಕೊಟ್ಟರು.

ಪ್ರಕಾಶ ರೆಡ್ಡಿ, ಜಗನ್ನಾಥ ಕೋಟಿ, ರವೀಂದ್ರ ರೆಡ್ಡಿ ಮಾಸ್ಟರ್,ರವೀಂದ್ರ ಕರಿಕಲ್, ರಾಚಪ್ಪ ಕಲಕೋರಿ, ಮಲ್ಲಿಕಾರ್ಜುನ ಚಿಮ್ಮನಚೋಡ,ಮಾಣಿಕರಾವ ಡೋಣಿ,ಚಂದಾರೆಡ್ಡಿ,ಸಂಗಪ್ಪ ಕೂಡಂಗಲ್, ಉಮೇಶ ಪರೀಟ,ಅಶೋಕ ಜಲಸಂಗಿ,ಸುಭಾಷ ತಂಗಾ,ರೇವಣಸಿದ್ದಪ್ಪ ಚಕ್ರಕರ್,ಭೀಮರಾವ ಜಮಾದಾರ ಸೇರಿದಂತೆ ಇನ್ನೂ ಅನೇಕ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಅಶೋಕ ಕೋಟೆ ನಿರ್ವಹಿಸಿದರು.

ಲಕ್ಷ ದೀಪೊತ್ಸವ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲಮೂಡ ಗ್ರಾಮದ ಶ್ರೀ ಮಾಣಿಕೇಶ್ವರರ ವೈಭವ ನಾಡಿಗೆ ಪರಿಚಯಿಸುವ ಉದ್ದೇಶ ಹೊಂದಿದ್ದೇವೆ. – ರಾಜಕುಮಾರ ಕೋಟೆ ಕಲಮೂಡ, ಎಪಿಎಮಸಿ ಉಪಾಧ್ಯಕ್ಷರು,ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here