ಕನ್ನಡದ ಸೇವೆ ಮಾಡಲು ತಮ್ಮ ಮತ ನೀಡಿ ಗೆಲ್ಲಿಸಿ- ಚನ್ನೇಗೌಡ

0
91

ಶಹಾಬಾದ: ಕನ್ನಡ ನಾಡು ನುಡಿಗಾಗಿ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ನನಗೆ, ಇನ್ನಷ್ಟ ಸೇವೆ ಮಾಡುವ ಸದಾವಕಾಶ ನೀಡಲು, ಕನ್ನಡದ ಕಸಾಪ ಮತದಾರರು ತಮ್ಮ ಅಮೂಲ್ಯ ಮತವನ್ನು ನೀಡಿ ಗೆಲ್ಲಿಸಬೇಕೆಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ವ.ಚ.ಚನ್ನೇಗೌಡ ಹೇಳಿದರು.

ಅವರು ರವಿವಾರ ನಗರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ವಾಡಿ ವೃತ್ತದಲ್ಲಿ ಕಸಾಪ ಮತದಾರರೊಂದಿಗೆ ಮಾತುಕತೆ ನಡೆಸಿ ಮತಯಾಚಿಸಿದರು.

Contact Your\'s Advertisement; 9902492681

ಕಳೆದ ನಾಲ್ಕು ದಶಕಗಳಿಂದ ನಾಡುನುಡಿಯ ಹಿತಕ್ಕಾಗಿ ನಾಡಿನ ಎಲ್ಲೆಡೆ ನಡೆಯುವ ಚಳುವಳಿಗಳಲ್ಲಿ ನಿರಂತರವಾಗಿ ಭಾಗವಹಿಸುತ್ತ ಬಂದಿದ್ದೇನೆ. ಈ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಡಳಿತವರ್ಗದ ಮನವೊಲಿಸಿ ಕನ್ನಡ ಸಾಹಿತ್ಯ ಪರಿ?ತ್ತಿನಲ್ಲಿ ೨೦೦೭ರಲ್ಲಿ ೧.೫ ಕೋಟಿ ರೂಪಾಯಿಗಳ ದತ್ತಿ ಸ್ಥಾಪಿಸಿ ಏಳು ಲಕ್ಷದ ಒಂದು ರೂಪಾಯಿ ಮೊತ್ತದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಪ್ರತಿ ವ? ನಾಡಿನ ಹಿರಿಯ ಸಾಹಿತಿಯೊಬ್ಬರಿಗೆ ನೀಡುವಂತೆ ಮಾಡಿರುವೆ.

೪೫ ವ?ದೊಳಗಿನ ಐವರು ಯುವ ಬರಹಗಾರರಿಗೆ .೨೫೦೦೦ ರೂ.ಗಳ ನಗದು ಪುರಸ್ಕಾರದೊಂದಿಗೆ ಮಯೂರ ವರ್ಮ ಪ್ರಶಸ್ತಿ ನೀಡಲಾಗುತ್ತಿದೆ. ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯಿಂದ ಪ್ರತಿವ? ಕರ್ನಾಟಕ ಚೂಡಾಮಣಿ ಪ್ರಶಸ್ತಿ,ಡಾಕ್ಟರ್ ರಾಜಕುಮಾರ್ ರಂಗ ಪ್ರಶಸ್ತಿ,ರಾಮಜಾಧವ ಗ್ರಂಥ ಪುರಸ್ಕಾರ ನೀಡಲಾಗುತ್ತಿದೆ.

ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಪರಿ?ತ್ತಿನ ಗೌರವ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಗೌರವಧನ ಏಳು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿ?ತ್ತಿನಲ್ಲಿ ಕನ್ನಡ ಕಾಯಕ ದತ್ತಿ ಪ್ರಶಸ್ತಿ ಸ್ಥಾಪಿಸಿ ಕನ್ನಡಪರ ಹೋರಾಟಗಾರರಿಗೆ, ಕನ್ನಡ ನಾಡು ನುಡಿ ಕುರಿತು ರಚಿತವಾದ ಕೃತಿಕಾರರಿಗೆ, ಕನ್ನಡ ರಂಗಭೂಮಿ ಕಲಾವಿದರಿಗೆ ತಲಾ ೧೦ ಸಾವಿರ ರೂಪಾಯಿಗಳ ಪ್ರಶಸ್ತಿಯನ್ನು ಪ್ರತಿವ? ನೀಡುವಂತೆ ಮಾಡಿರುವೆ. ಎಲ್ಲಾ ಅನುಭವವನ್ನು ಬಳಸಿಕೊಂಡು ಕನ್ನಡ ಸಾಹಿತ್ಯ ಪರಿ?ತ್ತಿನ ಸರ್ವ ಸದಸ್ಯರುಗಳ ಸಹಕಾರದೊಂದಿಗೆ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಂತಿರುವೆ. ನಿಮ್ಮ ಅಮೂಲ್ಯವಾದ ಮತ ನೀಡಿ ನನ್ನ ಗೆಲುವಿಗೆ ಶ್ರೀರಕ್ಷೆ ನೀಡಿದರೆ, ಇನ್ನ? ಕನ್ನಡ ಕಾಯಕ ಮಾಡುವ ಕೆಲಸಕ್ಕೆ ನೀರೆರದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಿಂಗಣ್ಣ ಹುಳಗೋಳಕರ್,ಲೋಹಿತ್ ಕಟ್ಟಿ,ನಾಗಣ್ಣಗೌಡ,ಮಲ್ಲಿಕಾರ್ಜುನ ಜಲಂಧರ್,ಬಸ್ಸುಗೌಡ, ಸುರೇಶ ಪಾಟೀಲ,ತಿಮ್ಮಣ್ಣ ಕುರುಡೆಕರ್,ಪರಮಾನಂದ ಯಲಗೋಡಕರ್, ಸಾಯಬಣ್ಣ, ವಿನೋದ ಶ್ರೀಮಂತ, ಸಿದ್ದು ಹರವಾಳ, ಶರಣಬಸಪ್ಪ ಕಡಗಂಚಿ, ಮರಲಿಂಗ ಯಾದಗಿರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here