ಕಸಾಪ ಚುನಾವಣೆ: ನಿರುಗುಡಿಗೆ ಸಂಚಲನ ಬೆಂಬಲ

0
98

ವಾಡಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಚುನಾವಣೆ ಪ್ರಚಾರ ಕಣ ರಂಗೇರಿದ್ದು, ಸಾಹಿತ್ಯ ಚಳುವಳಿ ಮತ್ತು ಕನ್ನಡ ಕಟ್ಟುವ ಚರ್ಚೆಗಳು ಗೌಣವಾಗಿವೆ. ಅಭ್ಯರ್ಥಿಗಳ ವೈಯಕ್ತಿ ಟೀಕೆಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಬರಹ ಲೋಕದ ಮೇಲೆ ಹೆಚ್ಚು ಅಭೀಮಾನ ಹೊಂದಿರುವ ಸಾಹಿತಿ ಪ್ರೋ.ಬಿ.ಎಚ್.ನಿರುಗುಡಿ ಅವರನ್ನು ಬೆಂಬಲಿಸಲು ಸಂಚಲನ ಸಾಹಿತ್ಯ ವೇದಿಕೆ ತೀರ್ಮಾನಿಸಿದೆ ಎಂದು ವೇದಿಕೆಯ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ ತಿಳಿಸಿದರು.

ಶುಕ್ರವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಪ್ರಸಕ್ತ ಪರಸ್ಥಿತಿಯಲ್ಲಿ ಗಡಿನಾಡಲ್ಲಿ ಕನ್ನಡ ಸಾಹಿತ್ಯ ಸೊರಗುತ್ತಿದೆ. ಕನ್ನಡಿಗರ ಜೀವನ ಸ್ಥಿತಿಯ ಮೇಲೆ ಅನ್ಯ ಭಾಷೆಗಳ ಆಕ್ರಮಣವಾಗುತ್ತಿದೆ. ಕಸಾಪ ಚಟುವಟಿಕೆಗಳು ಜಿಲ್ಲಾಕೇಂದ್ರಕ್ಕೆ ಸೀಮಿತವಾಗುತ್ತಿವೆ.

Contact Your\'s Advertisement; 9902492681

ಗ್ರಾಮೀಣ ಭಾಗದ ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿಲ್ಲ. ಕಸಾಪ ಕಾರ್ಯ ಚಟುವಟಿಕೆ ವಾರ್ಷಿಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡೀ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಬೇಕು. ಬರೆದವರ ಸಾಹಿತ್ಯ ಬೆಳಕಿಗೆ ತರುವ ಕೆಲಸಕ್ಕೆ ಹೊಸ ಅಧ್ಯಕ್ಷರು ಮುಂದಾಗಬೇಕಿದೆ. ಅಂಥಹ ಸಾಮಥ್ರ್ಯ ಹೊಂದಿರುವ ಬಿ.ಎಚ್.ನಿರುಗುಡಿ ನಮ್ಮ ಆಯ್ಕೆಯಾಗಬೇಕಿದೆ ಎಂದರು.

ಸಂಚಲನ ಸಾಹಿತ್ಯ ವೇದಿಕೆ ಪ್ರಧಾನ ಕಾರ್ಯದರ್ಶಿ ದಯಾನಂದ ಖಜೂರಿ ಮಾತನಾಡಿ, ನಿರಂತರವಾಗಿ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಸಾಹಿತ್ಯ ಪ್ರೇಮಿ, ಕಸಾಪ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ.ಎಚ್.ನಿರುಗುಡಿ ಕಣದಲ್ಲಿರುವ ಮೂಲಕ ಪ್ರಗತಿಪರರ ಬೆಂಬಲ ಪಡೆದುಕೊಂಡಿದ್ದಾರೆ. ಈ ಬಾರಿ ಕಲಬುರಗಿ ಕಸಾಪಕ್ಕೆ ಸಾಹಿತಿ ಅಧ್ಯಕ್ಷನಾಗಿ ಕನ್ನಡ ತೇರು ಎಳೆಯುವುದನ್ನು ಜಿಲ್ಲೆಯ ಕಸಾಪ ಸದಸ್ಯರು ಮತ್ತು ಸಾಹಿತ್ಯಾಸಕ್ತರು ಉತ್ಸುಕರಾಗಿದ್ದಾರೆ.

ಇತರ ಅಭ್ಯರ್ಥಿಗಳ ಬಾಹ್ಯ ಪ್ರಚಾರಕ್ಕೆ ಮರುಳಾಗದೆ ಮತದಾರರು ಸಾಹಿತ್ಯ ಕ್ಷೇತ್ರವನ್ನು ಸಂಪತ್ಭರಿತವಾಗಿಸಬಲ್ಲ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ನ.21 ರಂದು ಚಿತ್ತಾಪುರ ತಾಲೂಕು ಕೇಂದ್ರದ ಮತಗಟ್ಟೆಗೆ ಬಂದು ನಿರುಗುಡಿಯವರಿಗೆ ಮತ ಚೆಲಾಯಿಸಬೇಕು ಎಂದು ಕಸಾಪ ಸದಸ್ಯರಲ್ಲಿ ಮನವಿ ಮಾಡಿದರು. ಬರಹಗಾರರು ಹಾಗೂ ಶಿಕ್ಷಕರೂ ಆದ ಮಲ್ಲೇಶ ನಾಟೀಕಾರ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here