ಕಲಬುರಗಿ: ಬದಲಾವಣೆ ಜಗದ ನಿಯಮ. ಅದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಗಬೇಕಿದೆ. ಅದನ್ನು ಮತದಾರರು 21.11.2021ರಂದು ನಿರ್ಣಯ ತೊಗೋಬೇಕಾಗಿದೆ ತಗೆದುಕೊಳ್ಳುತ್ತಾರೆ ಕೂಡ!
ಜಿಲ್ಲಾ ಕಸಾಪ ಮತದಾರರು ಪ್ರಬುದ್ದರು ಬಿ.ಎಚ್. ನಿರಗುಡಿಗೆ ಮತ ಚಲಾಯಿಸುವ ಮೂಲಕ ಸಾಬೀತು ಮಾಡುವ ಘಳಿಗೆ ಬಂದೆ ಬಿಟ್ಟಿದೆ ಎಂದು ಶನಿವಾರ ರಾತ್ರಿ ನಗರದ ಹಿಂದಿ ಪ್ರಚಾರಸಭೆಯಲ್ಲಿ ಜರುಗಿದ ನಿರಗುಡಿ ಬೆಂಬಲಿಗರ ಸಭೆಯಲ್ಲಿ ಕೇಳಿ ಬಂದ ಪ್ರತಿಧ್ವನಿ.
ನಿರಗುಡಿ ಕನ್ನಡ ಸಾಹಿತ್ಯ ಪರಿಷತ ನಲ್ಲಿ ಕನ್ನಡ ಕಾರ್ಯಕ್ರಮ ಗಳು ಜರುಗಲು ಅನುವು ಮಾಡಿಕೊಡುತ್ತಾರೆ. ಕನ್ನಡ ಉಪನ್ಯಾಸಕರು, ಕನ್ನಡ ಸಂಘಟಕರು. ಈಗಾಗಲೇ ಒಂದು ಬಾರಿ ಕಸಾಪಗೆ ಗೌರವ ಕಾರ್ಯದರ್ಶಿಯಾಗಿ ಯಶಶ್ವಿ ಕಾರ್ಯಕ್ರಮ ಮಾಡುವ ಮೂಲಕ ನಾಡಿನ ತುಂಬೆಲ್ಲ ಪ್ರಸಿದ್ದಿ ಪಡೆದಿರುವ B. H. ನಿರಗುಡಿ ಅವರು ಸದಾ ಕ್ರಿಯಾಶೀಲರು ಪಾದ ರಸ ಗುಣ ಹೊಂದಿರುವ ಇವರನ್ನು ಆಯ್ಕೆ ಮಾಡುವ ಮೂಲಕ ಕನ್ನಡದ ಕ್ರಿಯಾತ್ಮಕ ಕಾರ್ಯಕ್ರಮ ಆಗಲು ಅನುವು ಮಾಡಿಕೊಡುತ್ತಾರೆ.
ಈ ಬಾರಿ ನೂತನ ಆಯ್ಕೆ ಜಿಲ್ಹಾ ಕಸಾಪಕ್ಕೆ ನಿರ್ಗುಡಿ ಅವರನ್ನು ಆಯ್ಕೆ ಮಾಡುತ್ತಾರೆ. ಜಿಲ್ಲೆಯ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿ ನಿರ್ಗುಡಿಗೆ ಜಿಲ್ಲಾ ಕಸಾಪ ಅಧ್ಯಕ್ಷರನ್ನಾಗಿ ಮಾಡಲು ಸರ್ವ ನಿರ್ಣಯ ತಗೆದುಕೊಳ್ಳುವ ಮೂಲಕ ಹೊಸ ಆಯ್ಕೆ ಬಯಸಿದ್ದಾರೆ.
ಬಹುತೇಕ ಮಠಾಧೀಶರು ನಿರ್ಗುಡಿ ಆಯ್ಕೆ ಬಯಸಿರುವುದು ಕೂಡಾ ನಿರ್ಗುಡಿ ಗೆಲುವು ಇನ್ನಷ್ಟು ಹತ್ತಿರ. ಸ್ವತಃ ನಿರ್ಗುಡಿ ಯವರೇ ಹೇಳಿದ್ದಾರೆ ಒಂದೆ ಒಂದು ಬಾರಿ ಮಾತ್ರ ಅವಕಾಶ ಕೊಡಿ ಎಂದಿರುವುದು ಕೂಡಾ ಅವರ ಕ್ರಿಯಾತ್ಮಕಕ್ಕೆ ಹಿಡಿದ ಕೈ ಗನ್ನಡಿ ಯಾಗಿದೆ.
ನಿರ್ಗುಡಿ ಯವರ ಸಂಘಟನೆಯ ಗೆಳೆಯರ ಮನಸ್ಸು ಅದನ್ನೆ ಬಯಸಿದ್ದು. ದೊಡ್ಡ ಗೆಳೆತನಕ್ಕೆ ಒಂದು ಹೆಸರು ಅಂದ್ರೆ ಅದೆ ನಿರ್ಗುಡಿ ಅಂದ್ರೆ ತಪ್ಪಿಲ್ಲ. ನಾವೆಲ್ಲರೂ ಮನಪೂರ್ವಕ ಹಾರೈಕೆ ಕೂಡಾ ನಿರ್ಗುಡಿ ಗೆಲ್ಲಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷ ರಾಗಲಿ ಎಂಬುದು ಸಭೆಯಲ್ಲಿದ್ದ ಹಲವರು ಅಭಿಪ್ರಾಯಪಟ್ಟರು. ಆದರೆ ಫಲಿತಾಂಶ ಏನಾಗುವುದೋ ಎಂಬುದು ಕಾದುನೋಡಬೇಕಾಗಿದೆ.