ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಪ್ರತಿಭಟನೆ

0
55

ಶಹಾಬಾದ: ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಕುರಿತು ಸಂಸದ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆ ಖಂಡಿಸಿ, ಪ್ರತಾಪ್ ಸಿಂಹ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಭಂಕೂರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡ ಅಜಿತ್‍ಕುಮಾರ ಪಾಟೀಲ ಮಾತನಾಡಿ, ಶಾಸಕರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಕ್ತಾರ ಪ್ರಿಯಾಂಕ್ ಖರ್ಗೆಯವರು ಬಿಟ್ ಕಾಯಿನ್ ಕುರಿತು ದಾಖಲೆಗಳ ಸಮೇತ ಆರೋಪ ಮಾಡಿದ್ದು ಬಿಜೆಪಿ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ. ಅದನ್ನು ಸಹಿಸಿಕೊಳ್ಳದೇ ಮೈಸೂರು- ಕೊಡಗು ಸಂಸದ ಪ್ರತಾಪಸಿಂಹ ಅವರು ವೈಯಕ್ತಿಕ ಚಾರಿತ್ರ್ಯವಧೆಯಲ್ಲಿ ತೊಡಗಿದ್ದಾರೆ ಎಂದು ಮುಖಂಡರು ಆಕ್ರೋಶ ಹೊರಹಾಕಿದರು.

Contact Your\'s Advertisement; 9902492681

ಸಂಸದ ಪ್ರತಾಪ್ ಸಿಂಹ,ನಿನಗೆ ಪ್ರಿಯಾಂಕ್ ಎಂಬ ಪದಕ್ಕೆ ಅರ್ಥವನ್ನು ತಿಳಿದಿಲ್ಲ. ನಿನಗೆ ಸಾಮಾನ್ಯ ಜ್ಞಾನವೇ ಇಲ್ಲದಿರುವುದು ನಿನ್ನ ವರ್ತನೆಯಿಂದ ಗೊತ್ತಾಗುತ್ತಿದೆ. ನೀವು ಅರೆ ಹುಚ್ಚರಾಗಿ, ಅಜ್ಞಾನಿಯಾಗಿ ಮಾತನಾಡಿರುವುದನ್ನು ನೋಡಿದರೆ ನಿಮ್ಮಂತಹ ಸಂಸದರಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಅದೇ ಸೂಕ್ತವಾದ ಸ್ಥಳ. ಈ ವೆಚ್ಚವನ್ನು ಕೂಡ ಕಾಂಗ್ರೆಸ್ ಭರಿಸುತ್ತದೆ ಎಂದು ಕಿಡಿಕಾರಿದರು.
ಮುಖಂಡ ಸುರೇಶ ಮೆಂಗನ್ ಮಾತನಾಡಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಲಗೆ ಹರಿಬಿಡುತ್ತಿದ್ದಾರೆ. ಹಂಸಲೇಖ ವಿಚಾರದಲ್ಲೂ ಇದನ್ನೇ ಮುಂದುವರೆಸಿದ್ದಾರೆ. ಎಲ್ಲವನ್ನೂ ಜನರು ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸಲಿದ್ದಾರೆ ಅಂತ ಆಕ್ರೋಶ ಹೊರಹಾಕಿದರು.ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ರಾಜಕೀಯ ಮುತ್ಸದ್ಧಿ. ಅವರು ಕಟ್ಟಾ ಬುದ್ಧ – ಬಸವ – ಅಂಬೇಡ್ಕರ್ ಅನುಯಾಯಿ. ಒಂದು ಸಲ ಅವರ ಜೀವನ ಚರಿತ್ರೆ ಮತ್ತು ಇತಿಹಾಸದ ಬಗ್ಗೆ ತಿಳಿಯಿರಿ. ಒಂದು ಸಲ ಗುಲ್ಬರ್ಗಕ್ಕೆ ಹೋಗಿ ಬನ್ನಿ, ಅಲ್ಲಿರುವ ಬುದ್ದ ವಿಹಾರ, ಇ. ಎಸ್. ಐ ಹಾಸ್ಪಿಟಲ್, ಸೆಂಟ್ರಲ್ ಯೂನಿವರ್ಸಿಟಿ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಕೊಡುಗೆ ಹಾಗೂ ಇನ್ನು ಅನೇಕ ಅಭಿವೃದ್ಧಿ ಕೆಲಸಗಳನ್ನು ಆ ಭಾಗಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ಖರ್ಗೆ ಅವರು ನೀಡಿದ್ದಾರೆ ಎಂದು ಪ್ರತಿಭಟನಾಕಾರರು ವಿವರಿಸಿದರು.

ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಮುಜಾಹಿದ್ ಹುಸೇನ್, ಭರತ್ ಧನ್ನಾ ಮಾತನಾಡಿದರು. ಮುನ್ನಾ ಪಟೇಲ್,ಮಲ್ಲಿಕಾರ್ಜುನ ಜಲಂಧರ್,ಈರಣ್ಣ ಗುಡೂರ, ಮಹೇಶ ಎಸ್ ಧರಿ, ಮೃತುಂಜಯ ಹೀರೆಮಠ, ಗುರುನಾಥ ಕಂಠಿ, ವಿನೋದ ಮರತೂರ, ಮಲ್ಲಿಕಾರ್ಜುನ ಧರಿ , ಅಣ್ಣಪ್ಪ ಸರಡಗಿ , ಗ್ರಾಪಂ ಸದಸ್ಯರಾದ ಶರಣಬಸಪ್ಪ ಧನ್ನಾ, ಹಣಮಂತ ಪೂಜಾರಿ , ಸಿದ್ದಲಿಂಗ ಮರತೂರ , ಮರಲಿಂಗ ಕಮರಡಗಿ , ಭರತ ರಾಠೋಡ , ನಿಂಗಪ್ಪ ಹೂಗೊಂಡ, ಪ್ರಭುಲಿಂಗ ಪೂಜಾರಿ , ರಾಹುಲ್ ಜಿರಕಲ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here