ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಲಿ ಡಾ ಶರಣಪ್ಪ ಚಲವಾದಿ

0
9

ಕಲಬುರಗಿ :ಸ್ಲಂ ಜನಾಂದೋಲನ ಸಂಘಟನೆ ಜಿಲ್ಲಾ ಘಟಕವತಿಯಿಂದ ಆಯೋಜಿಸಿದ ಸಂವಿಧಾನ ಓದು ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ರಘುವೀರ್ ತೌಡೆ ಪಂಚಶೀಲ ಹೇಳುವದರ ಮೂಲಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಮಾಲಾರ್ಪಣೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ರಾಯಚೂರ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಶರಣಪ್ಪ ಚಲವಾದಿಯವರು ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೂ ಬೋದಿಸಿ ಮಾತಾನಾಡುತ್ತಾ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಪರಿಶ್ರಮದಿಂದಾಗಿ ನವೆಂಬರ್ ೨೬ -೧೯೪೯ ರಲ್ಲಿ ಭಾರತ ಸಂವಿಧಾನವನ್ನು ರಚಿಸಿ ಕರಡು ಪ್ರತಿಯನ್ನು ಸಂಸತ್ ಗೆ ಸಮರ್ಪಿಸಿದ ದಿನವನ್ನು ಸಂವಿಧಾನ ಸಮರ್ಪಣೆ ದಿನವನ್ನಾಗಿ ಆಚರಿಸುತ್ತಿದ್ದೇವೆ.

Contact Your\'s Advertisement; 9902492681

ಮಹಾ ಮೇಧಾವಿ ಆಗಿದ್ದ ಡಾ. ಅಂಬೇಡ್ಕರ್ ಅವರು ಭಾರತದ ರಾಷ್ಟ್ರಪತಿಯಿಂದ ಹಿಡಿದು ಸಮಾಜದ ಕಟ್ಟಕಡೆಯ ವೆಕ್ತಿಗೆ ಸ್ವಾತಂತ್ರ್ಯ ಸಮಾನತೆ ಆದರದ ಮೇಲೆ ಬಹುತ್ವದ ಭಾರತವನ್ನು ಕಟ್ಟಲು ಶ್ರಮಿಷಿದ್ದಾರೆ. ಅವರು ಸಂವಿಧಾನದಾನದ ಪೀಠಿಕೆಯಲ್ಲಿ ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಾಭಾವದ ಪ್ರಜಾಸತಾತ್ಮಕ ಗಣರಾಜ್ಯದ ಪ್ರಸ್ತಾಪ ಮಾಡುತ್ತ ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ, ಧಾರ್ಮಿಕ ರಾಜಿಕೀಯ ನ್ಯಾಯದ ಬಗ್ಗೆ,ವಿಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಹೇಳಿದ್ದಾರೆ.

ಅಂಬೇಡ್ಕರ್ ಅನುಯಾಯಿಗಳಾದ ನಾವು ಸಂವಿಧಾನವನ್ನು ಓದಬೇಕು ಶಿಕ್ಷಣವಂತರಾಗಬೇಕು ಜಾಗ್ರತರಾಗಬೇಕು ಎಂದು ಹೇಳಿದರು ಇತ್ತೀಚಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ವಿಚಾರಗಳ ಮೇಲೆ ದಾಳಿಯನ್ನು ಮಾಡಲಾಗುತ್ತಿದೆ ಮುಂದೊಂದು ದಿನ ಸಂವಿಧಾನಕ್ಕೆ ಅಪಾಯವಾಗುವ ಮೊದಲೇ ನಾವೆಲ್ಲರೂ ಜಾಗೃತಿಯಿಂದ ಸಂವಿಧಾನ ರಕ್ಷಣೆಗೆ ಮಂದಾಗಬೇಕು ಎಂದು ಕರೆ ನೀಡಿದರು. ಅತಿಥಿಗಳಾಗಿ ಡಾ. ಪೀರಪ್ಪ ಭೂಷಣ ಡಾ. ಧಮ್ಮ ದೀಪ ಅವರು ಬಾಗವಹಿಸಿ ಮಾತನಾಡಿದರು.

ಪಂಚಶೀಲ ನಗರದ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಹುಲಿಗೆಪ್ಪ ಕನಕಗಿರಿ ಡಾ. ಅಂಬೇಡ್ಕರ್ ಜೀವನ ಮತ್ತು ಅವರ ಕಾರ್ಯ ನಮಗೆಲ್ಲ ಆದರ್ಶವಾಗಿದೆ ಎಂದು ತಿಳಿಸಿದರು.

ಅಜಿಮ್ ಪ್ರೇಮಜಿ ಪೌಂಡೆಷನ್ ಸಂಯೋಜಕರಾದ ಮಹದೇವ್ ಮೂಲಿಗೆ ಅತಿಥಿ ಸ್ಥಾನ ವಹಿಸಿದ್ದರು ಸ್ಲಮ್ ಜನಾಂದೋಲನ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುನಿತಾ ಕೊಲ್ಲೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ರಘುವೀರ್ ತೌಡೆ ಸ್ವಾಗತಿಸಿದರು ಕಾರ್ಯಕ್ರಮ ಆಯೋಜಿಸಿದ ಸ್ಲಮ್ ಜನಾಂದೋಲನ ಸಂಘಟನೆಯ ಸಂಚಾಲಕಿ ರೇಣುಕಾ ಸರಡಿಗಿ ನಿರೂಪಿಸಿದರು. ಸುನಿಲ್ ಆಳಂದಕರ್ ವಂದಿಸಿದರು ಕಾರ್ಯಕ್ರಮದಲ್ಲಿ ಪಂಚಶೀಲ ನಗರದ ಪುರೀಷರು ಮತ್ತು ಮಹಿಳೆಯರು ಸಂಘಟನೆಯ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here