ಯಕ್ಷಿಂತಿ ಗ್ರಾಮದಲ್ಲಿ ಸಂವಿಧಾನ ಸಮರ್ಪಣ ದಿನಾಚರಣೆ

0
74

ಶಹಾಪುರ: ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ವಿಶ್ವರತ್ನ ಡಾ,, ಬಾಬ ಸಾಹೇಬ ಅಂಬೇಡ್ಕರ ಅವರ ಬಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಧ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಓದಿಸುವದರ ಮುಖಾಂತರ ಸಂವಿಧಾನ ಸಮರ್ಪಣ ದಿನಾಚರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನಿಂಗಣ್ಣ ಕರಡಿ ಭಾರತ ದೇಶದ ಸಂವಿಧಾನವು ರಾಷ್ಟ್ರಕ್ಕೆ ಮಾರ್ಗದರ್ಶಿ ಪುಸ್ತಕವಾಗಿದೆ ನಮ್ಮ ಸಂವಿಧಾನವು ಮೂಲಭೂತ ಹಕ್ಕುಗಳ ಕರ್ತವ್ಯಗಳ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಚನೆಯ ಆಧಾರವಾಗಿದೆ ಭಾರತದ ಸಂವಿಧಾನವನ್ನು ಸಮರ್ಪಿಸಿಕೊಂಡು ಅಂಗಿಕರಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ ೨೬ ರಂದು ಭಾರತದಲ್ಲಿ ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ ಭಾರತದ ಸಂವಿಧಾನವು ವಿಶ್ವದ ಎಲ್ಲಾ ಸಂವಿಧಾನಗಳಿಗಿಂತ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ನಂತರ ಮಾತನಾಡಿದ ನಾಗರಾಜ ಚಲುವಾದಿ ಹಲವು ದೇಶದ ಸಂವಿಧಾನ ಅರಿತುಕೊಂಡಿರುವ ಸಾಮಾಜಿಕ ಸುಧಾರಕ ಶಿಕ್ಷಣ ತಜ್ಞ ನ್ಯಾಯಶಾಸ್ತ್ರಜ್ಞ ಶ್ರೇಷ್ಠ ಅರ್ಥಶಾಸ್ತ್ರತಜ್ಞ ರಾಜಕಾರಣಿ ಮತ್ತು ಕಾನುನು ತಜ್ಞರಾದ ಡಾ,, ಅಂಬೇಡ್ಕರ ಅವರನ್ನು ಆಗಸ್ಟ ೨೯ ೧೯೪೭ರಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕಮಾಡುತ್ತಾರೆ ೨ ವರ್ಷ ೧೧ ತಿಂಗಳು ೧೮ ದಿನಗಳಲ್ಲಿ ಬರೆದ ಭಾರತ ಸಂವಿಧಾನವು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ನವೆಂಬರ್ ೨೬ ೧೯೪೯ರಂದು ದೇಶಕ್ಕೆ ಅರ್ಪಿಸಿದರು.

ನಮ್ಮ ದೇಶದಲ್ಲಿ ಅಭಿವೃದ್ದಿ ಹೊಂದಲು ನಮ್ಮ ಸಂವಿಧಾನ ಭ್ರಾತೃತ್ವ ಸಹೊದರತೆ ಸಮಾನತೆಯ ನೆಲೆಯಿಂದ ಕೂಡಿದೆ ಮಹಿಳೆಯರು ದಲಿತರು ಬುಡಕಟ್ಟು ಸಮುದಾಯ ಎಲ್ಲಾ ವರ್ಗಿಯ ಜನರ ತಲೆಎತ್ತಿ ಬದುಕಲು ಸಂವಿಧಾನ ಅವಕಾಷ ಕಲ್ಪಿಸಿಕೊಟ್ಟಿದೆ ಸಂವಿಧಾನವು ಧ್ವನಿ ಇರದವರಿಗೆ ಧ್ವನಿಯಾಗುವು ಮೂಲಕ ಅವರ ಹಕ್ಕುಗಳನ್ನು ತಂದುಕೊಟ್ಟಿದೆ ಇಂತ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ,, ಅಂಬೇಡ್ಕರ ಅವರಿಗೆ ಭಾರತಿಯರಾದ ನಾವೆಲ್ಲರು ಸದಾ ಋಣಿಯಾಗಿರಬೇಕು.

ಈ ದಿನದ ಪ್ರಾಮುಖ್ಯತೆಯನ್ನು ವಿಧ್ಯಾರ್ಥಿಗಳಿಗೆ ತಿಳಿಸಿಕೊಡುವುದು ಪ್ರತಿಯೊಬ್ಬ ಶಿಕ್ಷಕರ ಉಪನ್ಯಾಸಕರ ಕರ್ತವ್ಯ ನಮ್ಮ ಸಂವಿಧಾನ ನಮ್ಮೆಲ್ಲರ ರಕ್ಷಿಸುವ ಬಹುದೊಡ್ಡ ಕಾನೂನ ಎಂದು ಹೇಳಿದರು ಈ ಸಂದರ್ಬದಲ್ಲಿ ದೇವಪ್ಪ ಅನಸೂರ ಭೀಮರಾಯ ದೊಡ್ಮನಿ ನಿಂಗಪ್ಪ ತಳವಾರ ನಿಂಗಣ್ಣ ಪೂಜಾರಿ ವೆಂಕಟೇಶ ತಳವಾರ ಹಾಗೂ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here