ಕಲಬುರಗಿ: ಶಹಾಬಾದ ತಾಲೂಕಿನಲ್ಲಿರುವ ಹಡಪದ ಅಪ್ಪಣ ದೇವಸ್ಥಾನದಲ್ಲಿ ಹಡಪದ ಕ್ಷೌರಿಕ ಬಂಧುಗಳಿಗೆ ಮತ್ತು ಮಹಿಳಾ ತಾಯಂದಿರಿಗೆ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಅಸಂಘಟಿತ ಹಡಪದ ಕ್ಷೌರಿಕ ಸಮಾಜದ ಜನತೆಗೆ ಇ-ಶ್ರಮ್ ಕಾರ್ಡ ನೊಂದಣಿ ಮಾಡಿ ಕಾರ್ಡ ವಿತರಣೆ ಕಾರ್ಯಕ್ರಮಕ್ಕೆ ಹಡಪದ ಕ್ಷೌರಿಕ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣಾ ಸಿ ಹಡಪದ ಸಣ್ಣೂರ ಅವರು ಚಾಲನೆ ನೀಡಿ ಮಾತನಾಡುತ್ತಾ ಇ-ಶ್ರಮ್ ಕಾರ್ಡನ ಸೌಲಭ್ಯಗಳು ಪ್ರತಿಯೊಬ್ಬರೊ ಈ ಕಾರ್ಡ ಪಡೆಯಿರಿ ಮತ್ತು ಈ-ಶ್ರಮ್ ಕಾರ್ಡ ಯೋಜನೆಯ ಜೊತೆ ಅನೇಕ ಸ್ಕಿಮ್‌ಗಳು ಈ ಯೋಜನೆಯು ಒಳಗೊಂಡಿದೆ ಎಂದು ಸಮಾಜದ ಜನತೆಗೆ ಹೇಳಿದ್ದರು.
ಶಹಬಾದನ ಶ್ರೀ ಬಾಲಬ್ರಹ್ಮಚಾರಿ ರಾಜಶೀವಯೋಗಿ ಮಹಾಸ್ವಾಮಿಜಿ, ಹಡಪದ ಕ್ಷೌರಿಕ ಸಮಾಜದ ಶಹಾಬಾದ ತಾಲೂಕು ಅಧ್ಯಕ್ಷ ಬಸವರಾಜ ಹಡಪದ ಹಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್, ರಾಜ್ಯ ಕಮಿಟಿ ಸದಸ್ಯ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ದತ್ತಾಂತ್ರೇಯ ಪಾಟೀಲ್, ಜೈತೀರ್ಥ ಜೋಶಿ, ಸಚಿನ ಮೂಲಿಮನಿ, ರಮೇಶ ನೀಲೂರ, ರುದ್ರಮಣಿ ಬಟಗೇರಾ, ಸುನೀಲಕುಮಾರ ಭಾಗಹಿಪ್ಪರಗಾ, ಮಲ್ಲಣ್ಣಾ ಪರಹತಬಾದ, ಚಂದ್ರಶೇಖರ ತೊನಸನಹಳ್ಳಿ, ವಿನೋದ ಅಂಬಲಗಾ, ಭಾಗು ಹಡಪದ ಮುತ್ತಕೂಡ, ಬಸವರಾಜ ಹಡಪದ ಮಾರಡಗಿ, ಭಾಗಣ್ಣ ಹಡಪದ ದಂಡಗುಂಡ, ಶಂಕರ ಹಡಪದ ಹರವಾಳ, ತೋಟೇಂದ್ರ ಮಾರಡಗಿ, ಸಂಗಮೇಶ ಮಾರಡಗಿ, ರಮೇಶ ಪೇಠಶಿರೂರ, ಧರ್ಮರಾಜ ಭಂಕೂರ, ಶಿವಲಿಂಗಪ್ಪ ಹಡಪದ ಹಾಗೂ ಹಡಪದ ಸಮಾಜದ ಮುಖಂಡರು, ಮಹಿಳಾ ತಾಯಂದಿರು, ಯುವಕರು ಇದ್ದರು.