ವಿಧಾನ ಪರಿಷತ್ ಚುನಾವಣೆ: ಸುರಪುರ ತಾಲೂಕಿನಾದ್ಯಂತ ಶೇ ೯೯.೭೭ ಮತದಾನ

0
31

ಸುರಪುರ: ಕಲಬುರ್ಗಿ ಯಾದಗಿರಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ ಶುಕ್ರವಾರ ತಾಲೂಕಿನಾದ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿದೆ.

ತಾಲೂಕಿನಾದ್ಯಂತ ಒಟ್ಟು ೨೪ ಮತಗಟ್ಟೆಗಳಲ್ಲಿ ಚುನಾವಣೆ ನಡೆದು ಮದ್ಹ್ಯಾನದ ವೇಳೆಗೆ ಬಹುತೇಕ ಕಡೆಗಳಲ್ಲಿ ಚುನಾವಣೆ ಪೂರ್ಣಗೊಂಡಿತ್ತು.ಸುರಪುರ ನಗರಸಭೆಯಲ್ಲಿನ ಮತಗಟ್ಟೆ ಸಂಖ್ಯೆ ೩೭೩ರಲ್ಲಿ ಶೇ ೯೭.೩೦ ಹೊರತು ಪಡಿಸಿದರೆ ಇನ್ನುಳಿದಂತೆ ತಾಲೂಕಿನ ದೇವರಗೋನಾಲ,ಪೇಠ ಅಮ್ಮಾಪುರ,ವಾಗಣಗೇರಾ,ದೇವಾಪುರ,ಆಲ್ದಾಳ ಬಾದ್ಯಾಪುರ,ಖಾನಾಪುರ ಎಸ್.ಹೆಚ್,ಹೆಮನೂರು,ದೇವಿಕೇರಾ,ಅರಕೇರಾ ಕೆ ಸೇರಿದಂತೆ ಎಲ್ಲಾ ೨೩ ಗ್ರಾಮ ಪಂಚಾಯತಿಗಳಲ್ಲಿನ ಮತಕೇಂದ್ರಗಳಲ್ಲಿ ಶೇ ೧೦೦ ರಷ್ಟು ಮತದಾನವಾಗಿದೆ.ಶುಕ್ರವಾರ ಬೆಳಿಗ್ಗೆ ೮ ಗಂಟೆಯಿಂದ ಆರಂಭವಾದ ಮತದಾನ ಬೆಳಿಗ್ಗೆ ಮಂದಗತಿಯಲ್ಲಿ ಆರಂಭಗೊಂಡಿತ್ತು,ಆದರೆ ೧೨ ಗಂಟೆ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಕೊನೆಯ ಹಂತಕ್ಕೆ ತಲುಪಿತ್ತು.

Contact Your\'s Advertisement; 9902492681

ಒಟ್ಟಾರೆಯಾಗಿ ತಾಲೂಕಿನಾದ್ಯಂತ ೧೯೭ ಜನ ಪುರುಷ ಮತ್ತು ೨೪೧ ಜನ ಮಹಿಳಾ ಮತದಾರರು ಸೇರಿದಂತೆ ಒಟ್ಟು ೪೩೮ ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here