ಸುರಪುರ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸುರಪುರ ತಾಲೂಕು ಸಾಮಾಜಿಕ ಜಾಲತಾಣದ ಸಂಚಾಲಕರನ್ನಾಗಿ ಪರಶುರಾಮ ನಾಯಕ ಮಂಗಿಹಾಳ ಅವರನ್ನು ನೇಮಕಗೊಳಿಸಲಾಗಿದೆ.
ಈ ಕುರಿತು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಅಧ್ಯಕ್ಷರಾದ ರಕ್ಷಾ ರಾಮಯ್ಯನವರ ಆದೇಶದ ಮೇರೆಗೆ ತಾಲೂಕು ಸಂಚಾಲಕರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ನೇಮಕದ ಕುರಿತು ಮಾತನಾಡಿದ ಪರಶುರಾಮ ನಾಯಕ ಅವರು,ನನ್ನ ಆಯ್ಕೆಗೆ ಕಾರಣಿಭೂತರಾದ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ರಾಜಾ ಕುಮಾರ ನಾಯಕರು,ಸುರಪುರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ನಾಯಕ ಅವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.