ಶರಣರ ಜಾನಪದ ಗಾಯನ ಸ್ಪರ್ಧೆ ಉದ್ಘಾಟನೆ

0
11

ಭಾಲ್ಕಿ: ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ೧೩೨ನೇ ಜಯಂತ್ಯುತ್ಸವ ಭಾಗವಾಗಿ ಬಸವಾದಿ ಶರಣರ ಜೀವನ ಮತ್ತು ಸಾಧನೆ ವಿಷಯ ಕುರಿತಾದ ಲಿಂಗೈಕ್ಯ ಎಸ್.ಎಸ್.ತರಡಿ ಪ್ರಾಯೋಜಿತ ಜಾನಪದ ಗಾಯನ ಸ್ಪರ್ಧೆ ದಿ: ೧೯-೧೨-೨೦೨೧ ರವಿವಾರರಂದು ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ಏರ್ಪಡಿಸಲಾಗಿತ್ತು.

ಸ್ಪರ್ಧೆಯ ಉದ್ಘಾಟನಾ ಸಮಾರಂಭದ ದಿವ್ಯಸನ್ನಿಧಾನ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ವಹಿಸಿ, ಜಾನಪದ ಕಲೆ ಉಳಿಯಬೇಕು. ಬೆಳೆಯಬೇಕು. ಆ ಕಲಾವಿದರಿಗೆ ಪ್ರೋತ್ಸಾಹ ಸಿಗುವಂತಾಗಬೇಕು ಎಂಬುದು ಈ ಸ್ಪರ್ಧೆಯ ಆಶಯವಾಗಿದೆ ಎಂದರು. ಪೂಜ್ಯ ಶ್ರೀ ಭಂಗೂರು ಶ್ರೀಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಶರಣ ಶಿವಾಜಿ ಸಗರ ಅವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಶರಣೆ ಆಶಾ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಶರಣ ಹಣಮಂತಪ್ಪ ಚಿದ್ರೆ ಅವರಿಂದ ಬಸವಗುರು ಪೂಜೆ ನೆರವೇರಿಯಿತು. ನಿರ್ಣಾಯಕರಾಗಿ ಸಂಗಯ್ಯ ಸ್ವಾಮಿ, ರಾಜಕುಮಾರ ಹೂಗಾರ ಕಾರ್ಯನಿರ್ವಹಿಸಿದರು.

ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯಕ ವಿಭಾಗಗಳನ್ನು ಮಾಡಲಾಗಿತ್ತು. ಒಟ್ಟು ೨೫ ಜನ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ದೀಪಕ ಥಮಕೆ ಅವರು ನಿರೂಪಿಸಿದರು.

ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಶರಣೆ ಶಿವಮ್ಮ ಶೇಮಷಪೂರವಾಡಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ, ಶರಣೆ ಶ್ರೀದೇವಿ ಶಾಂತಯ್ಯ ಸ್ವಾಮಿ ಅವರು ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ ಹಾಗೂ ಶರಣೆ ಸುರೇಖಾ ರಮೇಶ ಲಾಧಾ ಅವರು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಪುರುಷ ವಿಭಾಗದಲ್ಲಿ ಶರಣ ದೀಪಕ ಥಮಕೆ ಅವರು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ, ಶರಣ ಚನ್ನಬಸವಾ ಅವರು ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಶರಣ ವಿಶ್ವನಾಥಪ್ಪ ಹುಗ್ಗೆ ಅವರು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದಿನಾಂಕ: ೨೨-೧೨-೨೦೨೧ ರಂದು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಬಹುಮಾನವನ್ನು ವಿತರಿಸಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here