ಸುರಪುರ: ನಗರದ ದೀವಳಗುಡ್ಡದ (ಜಾಂಬವ ನಗರ)ದಲ್ಲಿ ಭಾನುವಾರ ಶರಣ ಮಾದಾರ ಚೆನ್ನಯ್ಯನವರ ಜಯಂತಿ ಆಚರಣೆ ಮಾಡಲಾಯಿತು.ಕಾರ್ಯಕ್ರಮದ ಅಂಗವಾಗಿ ಶರಣ ಮಾದಾರ ಚೆನ್ನಯ್ಯನವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಜಯಘೋಷ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಬಸವ ಕುಲತಿಲಕರಾಗಿದ್ದ ಶರಣ ಮಾದಾರ ಚೆನ್ನಯ್ಯನವರು ೧೨ನೇ ಶತಮಾನದ ಬಸವಾದಿ ಶರಣರ ಜೊತೆಯಲ್ಲಿ ಅನುಭವ ಮಂಟಪದಲ್ಲಿ ಭಾಗವಹಿಸಿದ್ದ ಶರಣರು,ಅನೇಕ ವಚನಗಳನ್ನು ರಚನೆ ಮಾಡಿದ್ದಾರೆ.ಅವರು ಬರೆದ ವಚನಗಳು ಇಂದಿಗೂ ಪರಸ್ತುತವಾಗಿವೆ.ಬಸವಣ್ಣನವರೆ ಅನೇಕ ವಚನಗಳಲ್ಲಿ ಅಪ್ಪನು ನಮ್ಮ ಮಾದಾರ ಚೆನ್ನಯ್ಯ ಎಂದು ಸಾರುವ ಮೂಲಕ ಚೆನ್ನಯ್ಯನವರನ್ನು ಕರೆಯುತ್ತಿದ್ದರು,ಅಂತಹ ಚೆನ್ನಯ್ಯನವರ ಜಯಂತಿಯನ್ನು ಜಾತಿ ಮತ ಧರ್ಮ ಎನ್ನದೆ ಎಲ್ಲರು ನಿತ್ಯ ಸ್ಮರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಾಳೆಪ್ಪ ಹಾದಿಮನಿ,ಪಂಡೀತ ನಿಂಬೂರ,ನಿಂಗಣ್ಣ ಬುಡ್ಡಾ,ರಾಜು ತೊಳೆದ,ಚಂದ್ರು ದೊಡ್ಮನಿ,ಭೀಮಣ್ಣ ಸುರಪುರ,ಚಂದ್ರಕಾಂತ ಕಟ್ಟಿಮನಿ,ಚನ್ನರೆಡ್ಡಿ,ಪರಶುರಾಮ್ ಅಗ್ನಿ,ಪರಶುರಾಮ ಕಟ್ಟಿಮನಿ,ಮಹಾದೇವ ವೀರಗೋಟ,ಬಸವರಾಜ ಕಟ್ಟಿಮನಿ,ಮಲ್ಲಪ್ಪ ತೋಳನೂರು ಸೇರಿದಂತೆ ಅನೇಕರಿದ್ದರು.