ಕಲ್ಯಾಣ ಕರ್ನಾಟಕ ಪ್ರದೇಶದ ಕಲ್ಯಾಣ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಲಕ್ಷ್ಮಣ ದಸ್ತಿ

0
100

ಕಲಬುರಗಿ :  ಕಲ್ಯಾಣ ಕರ್ನಾಟಕವೆಂದು ಹೆಸರು ನಾಮಕರಣ ಮಾಡಿ ಕಲ್ಯಾಣದ ವಿಷಯಕ್ಕೆ ಸಂಪೂರ್ಣವಾಗಿ ನಿರ್ಲಕ್ಷ ಮಾಡುತ್ತಿರುವುದು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಮತ್ತೇ ನಿರಂತರ ಮಲತಾಯಿ ಧೋರಣೆ ಮಾಡುತ್ತಿರುವ ಸರಕಾರದ ಧೋರಣೆ ಖಂಡನೀಯವಾಗಿದೆ. ಸರಕಾರಕ್ಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲು ಆಗದಿದ್ದರೆ, ಕಲ್ಯಾಣ ಕರ್ನಾಟಕ  ಪ್ರತ್ಯೇಕ ರಾಜ್ಯ ಕೊಡಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಹೇಳಿದರು.

ಇಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಬೀದರ ನಗರದ ಎಂ.ಎಸ್. ಪಾಟೀಲ್ ಫಂಕ್ಷನ್ ಹಾಲ್ನ ಸಭಾಂಗಣದಲ್ಲಿ ಸಮಿತಿ ಹಮ್ಮಿಕೊಂಡ ಸರ್ವ ಸದಸ್ಯರ ಕಲ್ಯಾಣ ಕರ್ನಾಟಕ ಅಭಿವೃದ್ಧಿಪರ, ಚಿಂತಕರ, ಬುದ್ಧಿ ಜೀವಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ವಿಶೇಷ ಆಧ್ಯತೆ ನೀಡುವ ಬಗ್ಗೆ ನಿರಂತರತೆ ಭರವಸೆಗಳು ಮಾತ್ರ ನೀಡುತ್ತಿವೆ ಆದರೆ ಅನುಷ್ಠಾನವಾಗುತ್ತಿಲ್ಲ.

Contact Your\'s Advertisement; 9902492681

೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ ಕೇವಲ ಘೋಷಣೆಯಾಗಿ ಉಳಿದಿದೆ. ಕಲ್ಯಾಣ ಕರ್ನಾಟಕದ ಆಯಾ ಜಿಲ್ಲೆಗಳಲ್ಲಿ  ಉದ್ದಿಮೆಗಳ ಸ್ಥಾಪನೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರುವುದು ಸಹ ಘೋಷಣೆಯಾಗಿಯೇ ಉಳಿದಿವೆ. ಮಂತ್ರಿ ಮಂಡಲದಲ್ಲಿ ಸಿಗಬೇಕಾದ ಪ್ರಾತಿನಿಧ್ಯ ಇನ್ನೂ ಸಿಗದೇ ಅನ್ಯಾಯವಾಗಿದೆ.

ಮುಖ್ಯಮಂತ್ರಿಗಳು ಕಳೆದ ಸೆಪ್ಟೆಂಬರ್ ೧೭ ರಂದು ಕೆ.ಕೆ.ಆರ್.ಡಿ.ಬಿ.ಗೆ ೩೦೦೦ ಕೋಟಿ ಅನುದಾನ ನೀಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರುವದು, ಮೂರು ತಿಂಗಳಿಗೊಮ್ಮೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಬಗ್ಗೆ ಸಭೆ ನಡೆಸುವುದರ ಬಗ್ಗೆ ಮತ್ತು ೩೭೧ನೇ(ಜೆ) ಕಲಂ ನಿಯಮಗಳಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಚೇರಿಗಳು, ಕಲ್ಯಾಣ ಕರ್ನಾಟಕಕ್ಕೆ ಸ್ಥಳಾಂತರ ಮಾಡಿರುವ ವಿಷಯವಾಗಿ ಮಾಡಿರುವ ಘೋಷಣೆಗಳು ಹುಸಿಯಾಗಿವೆ.

ಒಂದು ಕಡೆ ರಾಜ್ಯ ಸರಕಾರ ಮಲತಾಯಿ ಧೋರಣೆ  ಮುಂದುವರೆಸಿದರೆ ಮತ್ತೊಂದು ಕಡೆ ಕೇಂದ್ರ ಸರಕಾರವೂ ಸಹ ನಮಗೆ ಮಂಜೂರಾದ ಹೆದ್ದಾರಿ ರಸ್ತೆಗಳು, ಕಲಬುರಗಿ ಮಹಾನಗರದ ರಿಂಗ್ ರಸ್ತೆ ನಿರ್ಮಾಣ ಸೇರಿದಂತೆ ಕಲಬುರಗಿ ವಿಭಾಗೀಯ ರೈಲ್ವೆ ಕಚೇರಿ ಅಸ್ತಿತ್ವದ ಬಗ್ಗೆ ಘೋಷಣೆಯಾಗಿಯೇ ಉಳಿದು ನಿರ್ಲಕ್ಷ ಮಲತಾಯಿ ಧೋರಣೆ ನಡೆದಿದೆ.  ಇದೇ ಸಂದರ್ಭದಲ್ಲಿ ಅವರು ಶಿವಸೇನೆಯ ಕೃಪಾಪೋಷಿತ ಎಂ.ಇ.ಎಸ್. ಕನ್ನಡ ವಿರೋಧಿ ಧೋರಣೆ ಮತ್ತು ಮಹಾಪುರುಷರ ಪುತ್ಥಳಿಗೆ ಅವಮಾನ ಮಾಡುತ್ತಿರುವ ಕೃತ್ಯಗಳ ಬಗ್ಗೆ ಬಲವಾಗಿ ಖಂಡಿಸಿದರು.

ಇಂತಹ ಸಂದರ್ಭದಲ್ಲಿ ನಮಗೆ ಏಕಮಾತ್ರ ಪರಿಹಾರವೆಂದರೆ ನಮ್ಮ ಅಭಿವೃದ್ಧಿಗೆ ಪ್ರತ್ಯೇಕ ಕಲ್ಯಾಣ ಕರ್ನಾತಕ ರಾಜ್ಯ ಬೇಡಿಕೆ ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಡಾ. ಆನಂದರಾವ, ವೀರಭದ್ರಪ್ಪ ಉಪ್ಪಿನ್, ಸಂತೋಷ ಶೆಟ್ಟಿ, ಶಿವಕುಮಾರ ಬೆಲ್ದಾಳ, ಚಂದ್ರಶೇಖರ ಪಾಟೀಲ್, ಮಹಮ್ಮದ ಅಸಿಫೋದ್ದೀನ್, ಮಹಮ್ಮದ ನಿಜಾಮೊದ್ದೀನ್, ಉದಯಕುಮಾರ ಅಷ್ಟೂರೆ, ಧನರಾಜ ರೆಡ್ಡಿ, ವಿಜಯಕುಮಾರ, ಕೃಷ್ಣಾರೆಡ್ಡಿ, ಬಕ್ಕಪ್ಪ, ಅನೀಲ್ ಹಮೀಲಪುರಕರ, ರಘುನಾಥರಾವ್, ರೋಹನಕುಮಾರ, ಘಾಳೆಪ್ಪ ಚಾಮಾ, ಸುಧಾಕರರಾವ ಪಾಟೀಲ್, ವಿದ್ಯಾಸಾಗರ, ಪ್ರಲ್ಹಾದ ದೇಸಾಯಿ, ವಿಶ್ವನಾಥ ಉಪ್ಪೆ, ಮಹೇಶ, ಅಣ್ಣೆಪ್ಪ ಸಿರ್ಸಿ, ಧನರಾಜ ಅಡ್ವೊಕೇಟ್, ಸೋಮಶೇಖರ, ವಿಶ್ವನಾಥ ಆಲೂರ ಸೇರಿದಂತೆ ಇತರರು ಸಭೆಯಲ್ಲಿ ತಮ್ಮ ವಿಚಾರವನ್ನು ಮಂಡಿಸಿ ಸರಕಾರಕ್ಕೆ ಕಲ್ಯಾಣ ಕರ್ನಾಟಕಕ್ಕೆ ಪ್ರಗತಿ ಮಾಡಲು ಇಲ್ಲವೇ ಪ್ರತ್ಯೇಕ ರಾಜ್ಯ ಕೇಳಲು ಬೃಹತ್ ಪ್ರತಿಭಟನೆ ಸಮಿತಿಯ ಕಡೆಯಿಂದ ಹೋರಾಟ ಹಮ್ಮಿಕೊಳ್ಳಲು ಆಗ್ರಹಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದಂತಹ ಬೀದರ ಜಿಲ್ಲಾ ಅಧ್ಯಕ್ಷರಾದ ಅನಂತರೆಡ್ಡಿಯವರು ಮಾತನಾಡಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರ ಸಲಹೆಯಂತೆ ಬರುವ ಜನೇವರಿ ಎರಡನೇ ವಾರದಲ್ಲಿ ಬೀದರನಲ್ಲಿ ಕಲ್ಯಾಣ ಕರ್ನಾಟಕದ ಹಕ್ಕಿಗಾಗಿ ಪ್ರಗತಿ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೃಹತ್ ಪ್ರತಿಭಟನೆ ನಡೆಸಲು ದಿನಾಂಕ ನಿರ್ಧರಿಸಲಾಗುವದೆಂದು ತಿಳಿಸಿದರು.

ಅದರಂತೆ ಗೋದಾವರಿ ಜಲಾನಯನ ಪ್ರದೇಶದ ಕಾರಂಜಾ ಯೋಜನೆ ಕಾಲಮಿತಿಯಲ್ಲಿ ಮುಗಿಸಲು ಮತ್ತು ಜಮೀನು ಕೊಟ್ಟ ರೈತರಿಗೆ ಸಮರ್ಪಕ ಪರಿಹಾರ ನೀಡುವದು ಸೇರಿದಂತೆ ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬೇಡಿಕೆಗಳನ್ನು ಸಹ ಸರಕಾರದ ಮುಂದೆ ಇಡಲಾಗುವದೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here