ಸುರಪುರ:ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕ್ಯಾಥೋಲಿಕ್ ಚರ್ಚ್‌ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗಿದೆ.ಶುಕ್ರವಾರ ರಾತ್ರಿ ನಡೆದ ಆಚರಣೆಯಲ್ಲಿ ಮೊದಲಿಗೆ ಕ್ಯಾರಲ್ಸ್ ನಂತರ ಪವಿತ್ರ ಬಲಿ ಪೂಜೆಯನ್ನು ನಡೆಸಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫಾದರ್ ದೀಪಕ್ ಅವರು,ಯೇಶು ಎಂದರೆ ಸಾಕ್ಷಾತ್ ದೇವರ ಸ್ವರೂಪಿಯಾಗಿದ್ದಾನೆ.ದೇವರಾಗಿದ್ದ ಯೇಶು ಎಲ್ಲರಿಗಿಂತಲು ಹೆಚ್ಚು ಈ ಲೋಕವನ್ನು ಪ್ರೀತಿಸಿದ ಶಾಂತಿ ಧೂತನಾಗಿದ್ದಾನೆ.ಜಗತ್ತಿನ ಎಲ್ಲ ಮಾನವರು ಶಾಂತಿ ಸಹಬಾಳ್ವೆಯನ್ನು ನಡೆಸಬೇಕು ಎಂಬುದು ಆತನ ಸಂದೇಶವಾಗಿತ್ತು.ಇಂದು ನಾವೆಲ್ಲರು ಯೇಶುವಿನ ಜನನದ ದಿನವನ್ನು ತುಂಬಾ ಸಂಭ್ರಮದಿಂದ ಆಚರಿಸುವ ಮೂಲಕ ದೇವನು ಭೂಮಿಗೆ ಬಂದ ಪವಿತ್ರ ದಿನವನ್ನಾಗಿ ಆಚರಿಸೋಣ ಎಂದರು.
ಇದೇ ಸಂದರ್ಭದಲ್ಲಿ ಫಾದರ್ ರಾಬರ್ಟ್ ಅವರು ಕೂಡ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಿಸ್ಟರ್ ಅನಿತಾ,ಸಿಸ್ಟರ್ ರೀಮಾ,ಚರ್ಚ್ ಉಪಾಧ್ಯಕ್ಷರಾದ ರಾಯಪ್ಪ ಕೆ. ಹಾಗು ಕಾರ್ಯದರ್ಶಿ ಸ್ಟಿಫನ್ ದೊಡ್ಮನಿ ಹಾಗು ಚರ್ಚ್‌ನ ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.