ಗುರುನಾನಕ ಮಠದಲ್ಲಿ ಗುರು ಸೇವಕ್ ಕಾರ್ಯಕ್ರಮ

0
82

ಕಲಬುರಗಿ: ಭಾನುವಾರ ಪಂಜಾಬಿ, ಸಿಂಧಿಯಾ ಸಿಂಗ್ ಸಭಾದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ನಗರದ ಅಪ್ಪನ ಕೆರೆ ಸಮೀಪ ಇರುವ ಗುರುದ್ವಾರ ಶ್ರೀ ಗುರುನಾನಕ ಮಠದಲ್ಲಿ ಜಿಮ್ಸ್ ಆಸ್ಪತ್ರೆ ಹಾಗೂ ಪಂಜಾಬಿ ಮತ್ತು ಸಿಂಧಿಯಾ ಸಿಂಗ್ ಸಭಾದ ಆಶ್ರಯದಲ್ಲಿ ಭಾನುವಾರ ಚಾರ್ ಸಾಹಿಬ್ಜಡ್ಡೆ ಗುರು ಅವರ ಗುರು ಕೇ ಸೇವಕ್ ಕಾರ್ಯಕ್ರಮದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಸುಮಾರು ೫೦ಕ್ಕೂ ಹೆಚ್ಚು ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಪರೋಪಕಾರ ಮೆರೆದರು. ನಂತರ ಗುರುನಾನಕ ವಿಗ್ರಹಕ್ಕೆ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸೂಪರ್ ಮಾರ್ಕೆಟ್, ಶರಣಬಸವೇಶ್ವರ ದೇಗುಲ, ಖಾಜಾ ಬಂದೇನವಾಜ್ ದರ್ಗಾ, ವಿವಿಧ ಮಸೀದಿಗಳಲ್ಲಿ ತಂಗಿದ್ದ ಭಿಕ್ಷುಕರು, ನಿರ್ಗತಿಕರಿಗೆ ೨೦೦ ಹೊದಿಕೆಗಳನ್ನು ನೀಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗುರುನಾನಕ ಸಿಂಧಿಯ, ಪಂಜಾಬಿ ಸಭಾದ ಅಧ್ಯಕ್ಷ ಎಸ್. ಅಮರೀಕ್ ಸಿಂಗ್ ಚಬ್ರಾ, ಉಪಾಧ್ಯಕ್ಷ ಎಸ್. ವಿಜಯಕುಮಾರ ಸೇವಲಾನಿ, ಕಾರ್ಯದರ್ಶಿ ಎಸ್. ಕುಲದೀಪ ಸಿಂಗ್ ಬೇಡಿ, ಖಜಾಂಚಿ ದೇವೇಂದ್ರ ವಾಲಿಯಾ, ಜಂಟಿ ಕಾರ್ಯದರ್ಶಿ ಎಸ್. ರಾಜೇಂದ್ರ ಸಿಂಗ್ ಭಾಟೀಯಾ, ಡಾ. ಸುಖದೀಪ್ ಸಿಂಗ್, ಮನದೀಪ್ ಸಿಂಗ್ ಭಾಟೀಯಾ, ಡಾ. ಅಮರಿಂದ್ರ ಸಿಂಗ್, ಡಾ. ಗಿರೀಶ, ಹಮ್ರಿತ್ ಸಿಂಗ್, ಬಾಬು ಮತ್ತಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here