ಕಲಬುರಗಿ: ಚಂದಿಗಡ ಮುನ್ಸಿಪಲ್ ಕಾರ್ಪೊರೇಶನ್ ನಲ್ಲಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ೨೭ ಸೀಟಗಳಲ್ಲಿ ೨೦ ಗೆದ್ದು
ಅಧಕಾರದಲ್ಲಿತ್ತು. ಈ ಸಲಾ ನಡೆದ ಚುನಾವಣೆ ದಿನಾಂಕ ೨೭ ಡಿಸೆಂಬರ್ ರಂದು ಫಲಿತಾಂಶ ಬಂದು ಆಮ್ ಆದ್ಮಿ ಪಕ್ಷ ೩೫
ರಲ್ಲಿ ೧೪ ಸೀಟ ಗೆದ್ದು ಪ್ರಥಮ ಸ್ಥಾನ ಪಡೆಯಿತು.
ಬಿಜೆಪಿ ೧೨ ಸೀಟ್ ಪಡೆದು ಎರಡನೆ ಸ್ಥಾನ, ಕಾಂಗ್ರೆಸ್ ೩ನೇ ಸ್ಥಾನಕ್ಕೆ ತಳಲ್ಪಟ್ಟಿತು. ಆಮ್ ಆದ್ಮಿ ಪಕ್ಷದ ಸಿದ್ದಾಂತ ಮತ್ತು ಶ್ರೀ ಅರವಿಂದ ಕೇಜರಿವಾಲ ರವರ ಶಿಕ್ಷಣ, ಅರೋಗ್ಯ, ಆಡಳಿತ, ಉಚಿತವಾಗಿ ವಿದ್ಯುತ ಕೊಡುವ ನೀತಿಗೆ ಜನರು ಮಚ್ಚಿ ಚಂದಿಗಡ ಮುನ್ಸಿಪಲ್ ಕಾರ್ಪೊರೇಶನ್ ನಲ್ಲಿ ಗೆಲ್ಲಿಸಿದಕ್ಕೆ ಆಮ ಆದ್ಮಿ ಪಕ್ಷ ಕಲಬುರಗಿ ವತಿಯಿಂದ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾಜಿ ಉಪಮೇಯರ್ ಹಾಗೂ ಎಎಪಿ ನಗರ ಅಧ್ಯಕ್ಷರಾದ ಸಯದ ಸಜ್ಜಾದ ಅಲಿ ಇನಾಮದಾರ ರವರ ನೇತೃತ್ವದಲ್ಲಿ ಸಿಹಿ ಹಂಚಿ ವಿಜೃಂಭಣೆಯಿಂದ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಅಧ್ಯಕ್ಷ ಕಿರಣ ರಾಠೋಡ, ಉತ್ತರ ಅಧ್ಯಕ್ಷ ಮೂಹಸಿನ ಅಲಿ, ಡಾ. ಇಮ್ರಾನ್ ಅಹ್ಮದ, ಗುಲಾಮ
ರಸೂಲ್ ಸಾಬ ನಿವೃತ ಮ್ಯಾನೇಜರ್, ಅಲ್ಪಸಂಖ್ಯಾತ ಅಧ್ಯಕ್ಷ ಸುಲೆಮಾನ ಅಲಿ, ಶರಣಬಸಪ್ಪಾ ಐಟಿ, ಡಾ. ರಾಘವೇಂದ್ರ
ಚಿಂಚನಸೂರ, ಇಸಾಮುದ್ದಿನ, ಶೇಖ ಮಲಂಗ, ಮೇಘರಾಜ ಮುಕ್ತದೀರ ಖಾನ, ಶಾಹೀದ, ಆಸಿಫ ಖಾನ, ಗುಲಾಮ ನಬಿ, ಸಯದ
ಅಶ್ಫಾಕ ಅಲಿ ಇನಾಮದಾರ, ಶಫಿ, ಕಲೀಮ ಅಹ್ಮದ, ದಸ್ತಗೀರ, ಬಾಬು ಟಾಕಲಿ, ಮಹಿಳಾ ಘಟಕದ ಚಂದ್ರಲೀಲಾ, ತಜಸ್ವಿನಿ,
ಸಂಗೀತಾ, ಅಫರೋಜ ಬಾದಲ, ವಸಂತ, ವೇದಮೊಹನ, ತಾಹಿರಪಾಶಾ, ಶಫಿ, ಅಬ್ದಲ ಖಯುಮ, ರಿಯಾಜ ಪಾಟೇಲ ಮತ್ತು
ಇತರರು ನೂರಾರು ಜನರು ಉಪಸ್ಥಿತರಿದ್ದರು.