ರಟಕಲ್ ಗ್ರಾಮಕ್ಕೆ ಸೂಕ್ತ ಬಸ್ ಸೌಕರ್ಯಕ್ಕೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

0
60

ಕಲಬುರಗಿ: ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮಕ್ಕೆ ಸೂಕ್ತ ಬಸ್ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಇಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸಾರಿಗೆ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಆಗುತ್ತಿಲ್ಲ ಒಂದು ಪಾಠ ತಪ್ಪುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಗೊಳು ಕೆಳೊರಿಲ್ಲದಂತಾಗಿದೆ. ಪ್ರತಿ ದಿನ ವಿದ್ಯಾರ್ಥಿಗಳು ಶಾಲಾ ಕಾಲೇಜು ತೆರಳಲು ತೊಂದರೆ ಅನುಭವಿಸುತ್ತಿದ್ದು, ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಕೂಡಲೇ ಅಧಿಕಾರಿಗಳು  ಚಿಂಚೊಳಿ ತಾಲ್ಲೂಕು ಬೆಳಿಗ್ಗೆ 8 ಗಂಟೆಗೆ ರಟಕಲ್‌ ವಾಯ ಬಸ್‌ ಓಡಿಸಬೇಕು,  ಚಿಂಚೊಳಿ ತಾಲ್ಲೂಕು ಮತ್ತು ಕಾಳಗಿ ತಾಲ್ಲೂಕು ಕೊಡ್ಲಿ ವಾಯ ರಟಕಲ್‌ ಮಾರ್ಗವಾಗಿ ಕಲಬುರಗಿ ಹೊಗಲು ಬೆಳಿಗ್ಗೆ 9 ಗಂಟೆಗೆ ಬಸ್ಸ್‌ ಓಡಿಸ ಬೇಕು.

ಮಧ್ಯಾಹ್ನ 3 ಗಂಟೆಗೆ ಕಲಬುರಗಿ ನೆಹರು ಗಂಜನಿಂದ ಮಹಾಗಾಂವ ಕ್ರಾಸ್‌ ವಾಯ ರಟಕಲ್‌ ಮಾರ್ಗವಾಗಿ ಮತ್ತು 5 ಗಂಟೆಗೆ ಬಸ್ಸ್‌ ಓಡಿಸಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಸಾರಿಗೆ ಸಂಸ್ಥೆಯ ಉಪ ವಿಭಾಗದ ವ್ಯವಸ್ಥಾಪಕರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪಾ ಮಮಶೆಟ್ಟಿ ನೇತೃತ್ವದಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here