15 ರಿಂದ 18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ

0
6

ಬೆಂಗಳೂರು: ರಾಜ್ಯದಾದ್ಯಂತ 15-18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣ ಕಾರ್ಯಕ್ರಮದ ಅಂಗವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಎಸ್. ಬೊಮ್ಮಾಯಿ ರವರು ನಗರದ ಭೈರವೇಶ್ವರ ನಗರದಲ್ಲಿರುವ ಪಾಲಿಕೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 16 ವರ್ಷದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯಾದ ಕೀರ್ತಿ ಕೊಕಾಟಿ ಮೊದಲ ಡೋಸ್ ಲಸಿಕೆ ಪಡೆದ ಬಳಿಕ ಹೂ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾಂಕೇತಿಕವಾಗಿ ಮೊದಲ ಡೋಸ್ ಪಡೆದ ಎಸ್‌.ಎಸ್‌.ಎಲ್.ಸಿ ವಿದ್ಯಾರ್ಥಿಗಳು:

Contact Your\'s Advertisement; 9902492681

1. ಕೀರ್ತಿ ಕೊಕಾಟಿ(16 ವರ್ಷ)
2. ಅನ್ವರ್ ಲಾಲ್ಮಿಯ(16 ವರ್ಷ)
3. ಲಾವಣ್ಯ(16 ವರ್ಷ)
4. ಮೊಹ್ಮದ್ ಅಫ್ ನಾನ್(16 ವರ್ಷ)
5. ಪ್ರಶಾಂತ್.ಜಿ.ಎಲ್( 16 ವರ್ಷ)
6. ರಾಹುಲ್ ಆನಂದ್ ಬಡಿಗೇರ್( 16 ವರ್ಷ )
7. ಪ್ರತುಶಾ(16 ವರ್ಷ)
8. ವಿಶ್ವಾರಾಧ್ಯ(16 ವರ್ಷ)

ಬಿಬಿಎಂಪಿ ವ್ಯಾಪ್ತಿಯಲ್ಲಿ 15-18 ವರ್ಷದೊಳಗಿನವರಿಗೆ ಇಂದಿನ ಲಸಿಕಾಕರಣದ ವಿವರ:

ಶಾಲಾ-ಕಾಲೇಜುಗಳ ಸಂಖ್ಯೆ: 255
ಲಸಿಕಾಕರಣ ಗುರಿ: 62,706

ಭೈರವೇಶ್ವರ ನಗರ ಪಾಲಿಕೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಚಾಲನೆ:

ಎಸ್.ಎಸ್.ಎಲ್.ಸಿಯಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ- 240(ಇಂದು 42 ಲಸಿಕೆ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ)

ಪದವಿ ಪೂರ್ವ ಕಾಲೇಜಿನಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ – 395(ಇಂದು 50 ಲಸಿಕೆ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ)

ಕಾರ್ಯಕ್ರಮದಲ್ಲಿ ಮಾನ್ಯ ಸಚಿವರುಗಳಾದ ಶ್ರೀ ವಿ.ಸೋಮಣ್ಣ, ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಡಾ. ಕೆ.ಸುಧಾಕರ್, ಶ್ರೀ ಭೈರತಿ ಬಸವರಾಜು, ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್, ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ ಗುಪ್ತಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here