ಮೈಲಾಪುರ ಮೈಲಾರಲಿಂಗೇಶ್ವರ ದರ್ಶನಕ್ಕೆ ಅವಕಾಶ ಮಾಡಿಕೊಡಿ: ಮಲ್ಲಿಕಾರ್ಜುನರಡ್ಡಿ

0
18

ಸುರಪುರ: ನಾಡಿನ ಜನರ ಆರಾಧ್ಯ ದೈವವಾಗಿರುವ ಮೈಲಾಪುರ ಮೈಲಾರಲಿಂಗೇಶ್ವರರ ಜಾತ್ರೆಯನ್ನು ಕೊರೊನಾ ಮತ್ತು ಒಮೈಕ್ರಾನ್ ಸೊಂಕು ಹರಡುತ್ತಿರುವುದರಿಂದ ಜಿಲ್ಲಾಡಳಿತ ರದ್ದು ಮಾಡಿದೆ.

ಆದರೆ ನಾಡಿನ ಎಲ್ಲಾ ಭಕ್ತರ ಆರಾಧ್ಯ ದೈವರಾದ ಮೈಲಾರಲಿಂಗೇಶ್ವರರನ್ನು ಪ್ರತಿ ಸಂಕ್ರಾಂತಿಯಂದು ದರುಶ ಪಡೆಯುವುದು ಧಾರ್ಮಿಕ ನಂಬಿಕೆಯಾಗಿದೆ.ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಜಾತ್ರೆ ರದ್ದುಗೊಳಿಸಿದ್ದಕ್ಕೆ ಭಕ್ತಾದಿಗಳ ಯಾವುದೇ ವಿರೋಧವಿಲ್ಲ.ಆದರೆ ಕೇವಲ ಒಬ್ಬೊಬ್ಬರಾಗಿ ಹೋಗಿ ದೇವರ ದರ್ಶನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮುಖಂಡ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ ಅಮ್ಮಾಪುರ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿರುವ ಅವರು,ದೇವರ ದರ್ಶನಕ್ಕೆ ನಿರ್ಬಂಧ ಹೇರುವಂತೆ ಸರಕಾರ ಯಾವುದೇ ಆದೇಶ ಮಾಡಿಲ್ಲ.ಜನಸಂದಣಿ ಉಂಟಾಗದಕ್ಕೆ ಜಾತ್ರೆ ಉತ್ಸವ ರದ್ದು ಮಾಡಿದೆ.ಆದರೆ ದೇವರ ದರ್ಶನಕ್ಕೆ ನಿರ್ಬಂಧ ಬೇಡ ಎಂದು ವಿನಂತಿಸುತ್ತೇವೆ.

ಪ್ರತಿ ವರ್ಷ ನಾವು ಪಾದಯಾತ್ರೆ ಮೂಲಕ ದೇವರ ದರ್ಶನಕ್ಕೆ ಹೋಗುತ್ತಿದ್ದೆವು,ಆದರೆ ಈಬಾರಿ ಪಾದಯಾತ್ರೆ ಮಾಡದಿದ್ದರು ದೇವರ ದರ್ಶನ ಪಡೆಯದೆ ಸಂಕ್ರಾಂತಿ ಆಚರಿಸುವುದಾದರು ಹೇಗೆ.ಆದ್ದರಿಂದ ಜಿಲ್ಲಾಧಿಕಾರಿಗಳು ಕೇವಲ ಒಬ್ಬೊಬ್ಬ ಭಕ್ತರಿಗಾದರು ಕೋವಿಡ್ ನಿಯಮಗಳ ಅಡಿಯಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here