ಪಶು,ಪಕ್ಷಿಗಳಿಗೆ ದಾಹ ನೀಗಿಸಿದ ಶರಣ ಸಿದ್ಧರಾಮೇಶ್ವರ

0
11

ಶಹಾಬಾದ : ಕೆರೆ ಕುಂಟೆಗಳನ್ನು ಕಟ್ಟುವ ಮೂಲಕ ಪ್ರಕೃತಿಯಲ್ಲಿನ ಪಶು,ಪಕ್ಷಿಗಳಿಗೆ ದಾಹ ನೀಗಿಸುವ ಕಾಯಕವನ್ನು ಮಾಡಿದವರು ಸಿದ್ಧರಾಮೇಶ್ವರ ಶರಣರೇ ಮೊದಲಿಗರು ಎಂದು ಭೋವಿ ಸಮಾಜದ ತಾಲೂಕಾಧ್ಯಕ್ಷ ಭೀಮರಾವ ಸಾಳುಂಕೆ ಹೇಳಿದರು.

ಅವರು ಶುಕ್ರವಾರ ಭೋವಿ ವಡ್ಡರ್ ಸಮಾಜದ ವತಿಯಿಂದ ನಗರದ ವಡ್ಡರ ಸಂಘದಲ್ಲಿ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಕಾಯಕಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ವಿಶ್ವದ ಎಲ್ಲಾ ಜೀವರಾಶಿಗಳಿಗೆ ಹೊಟ್ಟೆ ತುಂಬಿಸುವ ಕಾರ್ಯ ಕಾಯಕದಿಂದ ಮಾತ್ರ ಸಾಧ್ಯ. ಕಾಯಕ ಸತ್ಯ ಮತ್ತು ಶುದ್ಧವಾಗಿರಬೇಕು.ಯಾವುದೇ ಅನಾಚಾರದ ಮೂಲಕ ಗಳಿಸುವ ಹಣ ಸತ್ಪಾತ್ರಕ್ಕೆ ಸಲ್ಲುವುದಿಲ್ಲ. ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾಯಕ ಮಾಡುವ ಸಂಸ್ಕೃತಿಯನ್ನು ಬೆಳೆಸಿದವರು ಶರಣರು.

ಬೋವಿ ಸಮಾಜದ ಪ್ರ.ಕಾರ್ಯದರ್ಶಿ ದೇವದಾಸ ಜಾಧವ ಮಾತನಡಿ, ಸಿದ್ಧರಾಮೇಶ್ವರ ಮಹಾ ಶರಣರ ಜಯಂತಿ ಆಚರಿಸುವುದು ಸಂತೋಷದ ವಿಷಯ.ಆದರೆ ಇದು ಕೇವಲ ವರ್ಷಕ್ಕೊಮ್ಮೆ ಎಂಬಂತೆ ಕಾಟಾಚಾರಕ್ಕಾಗಿ ಆಚರಿಸದೇ, ಅವರ ನಿಜವಾದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಶರಣರು ಕಂಡಂತಹ ಕಲ್ಯಾಣ ರಾಜ್ಯವನ್ನು ಮತ್ತೆ ಮರು ಸ್ಥಾಪಿಸಬಹುದು ಎಂದು ಹೇಳಿದರು.

ವಾಡಿ=ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ,ರಾಮು ಕುಸಾಳೆ,ಶಂಕರ ಕುಸಾಳೆ,ಸಿದ್ರಾಮ ಕುಸಾಳೆ,ವಡ್ಡರ ಸಂಘ ಅಧ್ಯಕ್ಷರಾದ ಗೋವಿಂದ ಸ್ವಾಮಿ ಕುಸಾಳೆ,ಪ್ರ.ಕಾರ್ಯದರ್ಶಿ ಅಭಿ?ಕ ದೇವಕರ,ಸುರೆಶ ದಂಡಗುಲಕರ,ದಿನೇಶ ಕುಸಾಳೆ,ಅಮ್ಮು ಮಾನೆ,ಶ್ರೀನಿವಾಸ ಚೌಧರಿ,ಪ್ರಸನ್ನ ಕುರ್ಡೆಕರ,ಬಾಬ ಬಾತ್ಕರ,ವೇಂಕಟೆಶ ದೋತ್ರೆ,ಶಿವು ಲಿಂಗೆರಿ,ಕೋಳ್ಳಪ್ಪ,ಅಮರ ಗೋಟೆಕರ,ಆದರ್ಶರೆಡ್ಡಿ,ಹನುಮಾಜು ಕುಸಾಳೆ,ಲಕ್ಷ್ಮಣ ಬೋರ್ಗಿ,ಬಾಬು ನಿಡಗುಂದಿ,ಸುನಿಲ ದೋತ್ರೆ,ಶಾಂತಯ್ಯಸ್ವಾಮಿ,ಸಂಜು ದೋತ್ರೆ,ಮಂಜುನಾಥ ಕ್ಯಾತನೂರ,ಅನೀಕೇತ ಬೋರಗಾಂವಕರ,ವಿಶ್ವ,ದಂಡಗುಲಕರ,ಗೋಪಾಲ ನಿಂಬಾಳಕರ,ರಾಜು,ಅನಿಲ ಹಳ್ಳಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here