ಸುರಪುರ:ಗೋಲ್ಡನ್ ಕೇವ್ ಬುದ್ಧ ವಿಹಾರ ಧಮ್ಮ ವಂದನಾ ಕಾರ್ಯಕ್ರಮ

0
11

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಹುಣ್ಣಿಮೆ ದಿನವಾದ ಸೋಮವಾರ ನಾಡಿನ ಶಾಂತಿಗಾಗಿ ತ್ರಿಸರಣ ಪಂಚಶೀಲ ಪಠಣ ಹಾಗು ಧಮ್ಮ ವಂದನೆ ಕಾರ್ಯಾಕ್ರಮ ನಡೆಸಲಾಯಿತು. ಬೌದ್ಧ ಅನುಯಾಯಿಗಳು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಗಳು, ಬೌದ್ಧ ಉಪಾಸಕರು, ಹಾಗೂ ಉಪಾಸಿಕಾ ರವರು ಮಕ್ಕಳೋಂದಿಗೆ ಹೂ, ಹಣ್ಣು ಮೇಣದ ಬತ್ತಿಯೊಂದಿಗೆ ಭಾಗವಹಿಸಿ ಬುದ್ದರ ಮೂರ್ತಿಗೆ ಪುಷ್ಫಾರ್ಚಣೆ ಮಾಡಿ ಮೇಣದ ಬತ್ತಿ ಹಚ್ಚಿ ವಂದಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಹಿಸಿದ್ದ ಉಪಾಸಕ ಮೂರ್ತಿ ಬೋಮ್ಮನಹಳ್ಳಿಯವರು ತ್ರೀಸರಣ ಪಂಚಶೀಲ ಪಠಿಸಿದರು, ಎಲ್ಲರು ಸಾಮೂಹಿಕವಾಗಿ ಶ್ರಧ್ಧೆಯಿಂದ ಪಾರ್ಥನೆಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸಿರುವ ಶಿವರಾಜ ಪಾಣೆಗಾಂವ್ ಇವರು ಮುಖ್ಯ ಪೇದೆಯಾಗಿ ಬಡ್ತಿ ಪಡೆದಿರುವ ಪ್ರಯುಕ್ತ ಮತ್ತು ಹುಣ್ಣಿಮೆಯ ದಿನದ ಅಂಗವಾಗಿ ಬುದ್ಧ ವಿಹಾರಕ್ಕೆ ಆಗಮಿಸಿದ ಎಲ್ಲರಿಗೂ ಸಿಹಿ ಊಟವನ್ನು ಪ್ರಸಾದ ವ್ಯವಸ್ಥೆ ಮಾಡಿದ ಭೀಮರಾಯ ಸಿಂದಗೇರಿ ದಂಪತಿಯವರಿಗೆ ಸನ್ಮಾನಿಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಟ್ರಸ್ಟ್ ಅದ್ಯಕ್ಷ ವೆಂಕಟೇಶ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ , ಶರಣಪ್ಪ ಗುಳಬಾಳ, ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ, ವೆಂಕಟೇಶ ಸುರಪುರಕರ್, ಮಲ್ಕಯ್ಯ ತೇಲ್ಕರ್ ಹಣಮಂತ ಭದ್ರಾವತಿ,,ಗುರುಪಾದಪ್ಪ ಹುಲಿಮನಿ ವಕೀಲರು, ಗೋಪಾಲ್ ವಜ್ಜಲ್, ಮರೆಪ್ಪ ತೆಲ್ಕರ್, ಶಂಕರ್ ಹೊಸಮನಿ, ಸಿದರಾಮ್ ಹಾಲಬಾವಿ, ಶರಣು ಹಸನಾಪುರ್ ಶ್ರೀಮಂತ ಚಲವಾದಿ, ರಾಜು ಬಡಿಗೇರ್, ರಾಯಪ್ಪ ಕಟ್ಟಿಮನಿ, ಸತಿಶ್ ಯಡಿಯಾಪೂರ್, ಹಣಮಂತ ರತ್ತಾಳ, ಹಣಮಂತ ತೆಲ್ಕರ್, ಉಪಾಸಿಕರಾದ ಭೀಮಂಬಾಯಿ ಕಲ್ಲದೆವನಹಳ್ಳಿ, ಮಂಜುಳಾ ಸುರಪೂರ್,ಬಸಮ್ಮ ಹುಲಿಮನಿ, ಶಿಲ್ಪಾ ಹುಲಿಮನಿ,ಬಾರತಿ ಸಿಂದಗೆರಿ, ಸುನಿತಾ ಕಿರದಳ್ಳಿ, ಯಲ್ಲಮ್ಮ ತೇಲಕ್ರ್, ರೇಣುಕಾ ಅರಕೇರಿ, ಗೌತಮಿ, ಮೇಘಾ,ಮಾಯಾ, ಖುತ್ಬಜಾ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here