ಸುರಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಂಸ್ಥೆಯಿಂದ ನಗರದ ಕುಂಬಾರಪೇಟೆಯಲ್ಲಿ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರ ಆರಂಭಿಸಲಾಗಿದೆ.ಬುಧವಾರ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಮಲ್ಲಣ್ಣ ಹುಬ್ಬಳ್ಳಿ ಹಾಗು ಎಲ್‌ಐಸಿ ಪ್ರತಿನಿಧಿ ಭೀಮಣ್ಣ ಕುಂಬಾರ ಭಾಗವಹಿಸಿ ಕೇಂದ್ರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಯೋಜನಾಧಿಕಾರಿ ಸಂತೋಷ ಮಾತನಾಡಿ,ಇಂದು ಪ್ರತಿಯೊಬ್ಬರು ತಮ್ಮ ಸರಕಾರಿ ದಾಖಲೆಗಳಾದ ಆಧಾರ್ ರೇಷನ್ ಕಾರ್ಡ್ ಸೇರಿದಂತೆ ಅನೇಕ ದಾಖಲೆಗಳ ತಿದ್ದುಪಡಿಗಾಗಿ ಅಲೆದಾಟ ನಡೆಸುತ್ತಿದ್ದಾರೆ.ಇದನ್ನು ಅರಿತುಕೊಂಡು ನಮ್ಮ ಸಂಸ್ಥೆಯು ಪೂಜ್ಯ ಡಾ: ವೀರೇಂದ್ರ ಹೆಗ್ಗಡೆಜಿಯವರ ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಂತ ೧೯ ಈ ರೀತಿಯ ಡಿಜಿಟಲ್ ಸೇವಾ ಕೇಂದ್ರವನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು.ಅಲ್ಲದೆ ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನೋಡಲ್ ಅಧಿಕಾರಿ ರಮೇಶ ಕದಂ ಕೇಂದ್ರದ ವಿಎಲ್‌ಇ ಪೂಜಾ,ನಾಗರಾಜ ಸೇವಾಪ್ರತಿನಿಧಿಗಳಾದ ಶೋಭಾ,ಪದ್ಮಾವತಿ,ಗಂಗಮ್ಮ,ದೀಪಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.