ಡಾ. ಗವಿಸಿದ್ಧ ಪಾಟೀಲಗೆ ಗುಲ್ಬರ್ಗ ವಿವಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

0
33

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ವತಿಯಿಂದ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕಥೆಗಾರ, ವಿಮರ್ಶಕ, ಸಾಹಿತಿ ಡಾ. ಗವಿಸಿದ್ಧ ಪಾಟೀಲ ಅವರಿಗೆ ಕಥಾ ಸ್ಪರ್ಧೆಯಲ್ಲಿ “ಹೂ ಚಿವುಟದಿರಿ ” ಕಥೆಗೆ ದಿ. ಜಯತೀರ್ಥ ರಾಜ ಪುರೋಹಿತ ದತ್ತಿ ಬೆಳ್ಳಿ ಪದಕ ಪ್ರಶಸ್ತಿಯನ್ನು ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ತುಳಸಿಮಾಲ ಅವರು ಪ್ರದಾನ ಮಾಡಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಗವಿಸಿದ್ಧ ಪಾಟೀಲರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಜಯದೇವಿ ಗಾಯಕವಾಡ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ವಿಜಯಕುಮಾರ ಬಿಳಗಿ, ಡಾ. ಪಿರಪ್ಪ ಸಜ್ಜನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ರಾಜಕುಮಾರ ಎಂ. ದಣ್ಣೂರ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here