ಶಹಾಬಾದ: :ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೆನೆ ಎಂದು ಪರಕೀಯರ ವಿರುದ್ಧ ತೊಡೆ ತಟ್ಟಿ ನಿಂತು ಭಾರತ ಮಾತೆಯನ್ನು ದಾಸ್ಯದಿಂದ ಪಾರು ಮಾಡುವ ಸಂಕಲ್ಪಗೈದು ಅದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಭಾರತದ ವೀರ ಸೇನಾನಿ ನೇತಾಜಿ ಸುಭಾಷಚಂದ್ರ ಬೋಸರು ಎಂದು ಎ.ಐ.ಡಿ.ವಾಯ್.ಓ ಜಿಲ್ಲಾಧ್ಯಕ್ಷ ಜಗನ್ನಾಥ.ಎಸ್.ಹೆಚ್ ಹೇಳಿದರು.
ಅವರು ರವಿವಾರ ಬಸವೇಶ್ವರ ನಗರದಲ್ಲಿ ಎಐಡಿವೈಓ ವತಿಯಿಂದ ಆಯೋಜಿಸಲಾದ ನೇತಾಜಿ ಸುಭಾಷಚಂದ್ರ ಬೋಸ್ ರವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರು ತಮ್ಮ೨೩ ನೇ ವಯಸ್ಸಿನಲ್ಲಿಯೇ ಐಸಿಎಸ್ ಪರೀಕ್ಷೆ ಪಾಸು ಮಾಡಿದ ಇವರಿಗೆ ದೇಶದಲ್ಲಿಯೇ ಅತೀ ಉನ್ನತವಾದ ಅಧಿಕಾರವುಳ್ಳ ನೌಕರಿ,ಅದರ ಜೊತೆಗೆ ಹಲವಾರು ಸರಕಾರಿ ಸೌಲಭ್ಯಗಳು ಮತ್ತು ವೈಭಯುತವಾದ ಜೀವನ ಸಿಗುತ್ತಿತ್ತು.ಆದರೆ ಅವರಿಗೆ ಈ ಎಲ್ಲ ವೈಭೋಗಗಳು ಭಾರತದ ಸ್ವಾತಂತ್ರ್ಯದ ಮುಂದೆ ತೃಣ ಸಮಾನವಾಗಿ ಕಂಡವು.ಭಾರತ ಮಾತೆಯನ್ನು ದಾಸ್ಯದ ದಂಕೋಲೆಗಳಿಂದ ಪಾರು ಮಾಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರ ಸ್ಥಾನವನ್ನು ಪಡೆದವರು ಸುಭಾಷರು ಎಂದರು.
ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಇಬ್ರಾಹಿಂಪೂರ ಮಾತನಾಡಿ,ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಷ ಚಂದ್ರ ಬೋಸರರ ಪಾತ್ರ ಅವೀಸ್ಮರಣಿಯ. ಸರಕಾರವು ನೇತಾಜಿರವರ ವಿಚಾರ ಅವರ ತ್ಯಾಗ ಬಲಿದಾನ ಕುರಿತು ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂದರು.ಅವರು ವಿದ್ಯಾರ್ಥಿಗಳು ಸಿನೆಮಾ ಟಿ.ವಿ. ಮೋಬೈಲ್ ನಲ್ಲಿ ಸಮಯ ಕಳೆಯದೆ ನೇತಾಜಿರವರ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಮುಂದೆ ಬರಬೇಕೆಂದು ಹೇಳಿದರು.
ಸಂಘಟನೆಯ ಉಪಾಧ್ಯಕ್ಷ ತೇಜಸ್ ಆರ್ ಇಂಬ್ರಾಹಿಪುರ, ಭೀಮಶಾ.ಜಿ ,ರಘು ಮಾನೆ, ಪ್ರಕಾಶ ಯಲಗೋಡ್, ಕಿಶನ್, ಭೀಮು ಪೂಜಾರಿ, ವಿನೋದ ಸುಗಂದಹಿ, ಕಾಶಿ ತಳವಾರ, ರಮೇಶ ದೇವಕರ ಇತರರು ಇದ್ದರು.