ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ದಲ್ಲಿ ಇಂದು ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಚಾಲನೆಯನ್ನು ಡಾ. ಜ್ಯೋತಿ ಮುಳು ಜೆ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆಯನ್ನು ನೀಡಿದ್ದರು. ತದನಂತರ ಹೆಣ್ಣು ಮಗುವಿನ ಮಹತ್ವವನ್ನು ಕುರಿತು ಅಜಿಮ್ ಪ್ರೇಮ್ಜಿ ವ್ಯವಸ್ಥಾಪಕರಾದ ಉದಯ ಬೇಕಲ್ ರವರು ಮಾಹಿತಿ ನೀಡಿದರು. ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಬಳೆ ಹೆಣ್ಣು ಮಗುವನ್ನು ಓದಿಸಿ ಬೆಳೆಸಿ ಉಳಿಸಿ ಪ್ರೋತ್ಸಾಹಿಸಿ ಎಂದು ತಿಳಿಸಿದರು.
ನಂತರ ಆಶಾ ಸುಗಮ ಕಾರರು ಲಕ್ಷ್ಮಿ ಅವರು ಮಾತನಾಡಿ ಹೆಣ್ಣುಮಕ್ಕಳಿಗೆ ಇನ್ನು ಅವಕಾಶಗಳಲ್ಲಿ ವಂಚಿತಳಾಗಿದ್ದಾಳೆ, ಅವಳಿಗೆ ರಕ್ಷಣೆ, ಹಾಗೂ ಸೌಲಭ್ಯಗಳು ಇನ್ನು ದೊರೆಯಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿಗಳು, ಅಜಿಮ್ ಪ್ರೇಮ್ಜಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಭಾಗವಹಿಸಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.