ಒತ್ತಡಗಳಿಂದ ಹೊರಬರಲು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ: ಸಂಗಮನಾಥ ದೇವರು

0
102

ಶಹಾಬಾದ: ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕ ಒತ್ತಡಗಳಿಂದ ಮನುಷ್ಯ ದುಶ್ಚಟಗಳ ದಾಸನಾಗುತ್ತಿದ್ದು, ಅದರಿಂದ ಹೊರಬಂದು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಪುರಾಣ ಪ್ರವನಗಳು ಕೇಳುವುದು, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಅತಿ ಅವಶ್ಯಕ ಎಂದು ಅಳ್ಳೊಳ್ಳಿಯ ಸಾವಿರ ದೇವರ ಮಠದ ಪೂಜ್ಯರಾದ ಸಂಗಮನಾಥ ದೇವರು ಹೇಳಿದರು.

ಅವರು ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ಶರಣಬಸವೇಶ್ವರರ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಪ್ರತಿಯೊಬ್ಬರನ್ನು ಪ್ರೀತಿಸುವ ಹಾಗೂ ಪರರಿಗೆ ಕೇಡನ್ನು ಬಯಸದಿರುವ ಸಂಸ್ಕೃತಿಯನ್ನು ನಾವು ಬೆಳೆಸಿಕೊಂಡು ಬೆಳೆಯಬೇಕು.ತಪ್ಪು ಮಾಡದೇ ಆತ್ಮ ತೃಪ್ತಿಯಿಂದ ಕೆಲಸ ಮಾಡಬೇಕು.ಇದನ್ನೇ ಶರಣಬಸವೇಶ್ವರರು ತಮ್ಮ ಜೀವನದಲ್ಲಿ ನಡೆದುಕೊಂಡು ಬಂದಿದ್ದರು ಎಂದರು.
ಪ್ರವಚನಕಾರರಾದ ಸಿದ್ಧೇಶ್ವರ ಶಾಸ್ತ್ರಿಗಳು ಮಾತನಾಡಿ, ಶರಣಬಸವೇಶ್ವರರು ಕಾಯಕದಿಂದ ಸಂಪಾದಿಸಿದ್ದನ್ನು ಅನ್ನ ಹಾಗೂ ಜ್ಞಾನ ದಾಸೋಹದಲ್ಲಿ ತೊಡಗಿಸಿ ಸಮಾಜಸೇವೆಯನ್ನು ಮಾಡುತ್ತಾ ಬದುಕಬೇಕೆಂದು ಸಂದೇಶವನ್ನು ಸಾರಿ, ಅವರೂ ಅದೇ ರೀತಿಯಲ್ಲಿ ಬದುಕಿ ತೋರಿಸಿದ ಮಹಾತ್ಮರು ಎಂದು ಹೇಳಿದರು.

ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಮಹಿಳಯರು ಭಾಗವಹಿಸಬೇಕು.ಇದರಿಂದ ಮಾನಸಿಕ ಹಾಗೂ ಶಾರೀರಿಕ ಶಾಂತಿ ಲಭಿಸುತ್ತಿದೆ. ಇಂದಿನ ಶರಣಬಸವೇಶ್ವರ ತೊಟ್ಟಿಲೋತ್ಸವ ಸಂಭ್ರಮದಲ್ಲಿ ನಾನು ಪಾಲ್ಗೊಂಡಿರುವುದೇ ನನ್ನ ಭಾಗ್ಯ ಎಂದರು.

ನಂತರ ಶ್ರೀಶರಣ ಬಸವೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ಜನ್ಮದಿನೋತ್ಸವ ನಿಮಿತ್ತ ಶರಣಬಸವೇಶ್ವರರ ಹಾಗೂ ಅವರ ಗುರುಗಳ ತೊಟ್ಟಿಲೋತ್ಸವ ನಡೆಯಿತು.

ಬೆಳಗ್ಗೆ ಶರಣಬಸವೇಶ್ವರರರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ಸಂಜೆ ಶರಣಯ್ಯ ಮಠಪತಿ, ರಾಜಶೇಖರ ಘಂಟಿಮಠ ಅವರಿಂದ ತೊಟ್ಟಿಲೋತ್ಸವ ನಡೆಯಿತು. ಮುತೈದೆಯರಿಂದ ತೊಟ್ಟಿಲು ಪೂಜೆ, ತೊಟ್ಟಿಲೋತ್ಸವ ನಡೆಯಿತು.

ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಶಿವಕುಮಾರ ಇಂಗಿನಶೆಟ್ಟಿ, ಅಣವೀರ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ಡಾ.ವಿ.ಸಿ.ಇಂಗಿನಶೆಟ್ಟಿ, ಶರಣಬಸಪ್ಪ ನಂದಿ, ಭೀಮಾಶಂಕರ ಕುಂಬಾರ, ರತನಕುಮಾರ ತಿವಾರಿ, ಮಹಾಂತೇಶ ಅವಂಟಿ, ಬಸವರಾಜ ಹುಗ್ಗಿ, ವಿಜಯಕುಮಾರ ಮುಟ್ಟತ್ತಿ, ರಾಜು ಬೆಳಗುಂಪಿ, ಶರಣು ಜೇರಟಗಿ, ಮನೋಹರ್ ಮಾಟನಳ್ಳಿ, ಶರಣಯ್ಯ .ಎಮ್.ಆರ್, ಶಂಕರ ಕುಂಬಾರ, ಸಿದ್ರಾಮಪ್ಪ ಬೊಮ್ಮನಳ್ಳಿ,ರಾಜು ಕೋಬಾಳ,ರವಿಕುಮಾರ ಅಲ್ಲಂಶೆಟ್ಟಿ, ಅರುಣ ಪಟ್ಟಣಕರ್,ಶಿವಾನಂದ ಪಾಟೀಲ, ಬಸವರಾಜ ಸಾತ್ಯಾಳ, ಮಹಿಳಾ ಅಧ್ಯಕ್ಷೆ ಲಕ್ಷ್ಮಿಬಾಯಿ ರಾವೂರ,ಬಿಂದು ಕೋಬಾಳ, ಅಂಜನಾ ಸಿದ್ಧೇಶ್ವರ, ಜಗದೇವಿ ಕಡ್ಲಿ, ಶಕುಂತಲಾ ಪಾಟೀಲ, ನಾಗಮ್ಮ ಮುಗುಳನಾಗಾವ, ಬಸಮ್ಮ ಹುಗ್ಗಿ, ಕಾಶಿಬಾಯಿ ಸಾಲಿಮಠ, ರೂಪಾ ಆಂದೋಲಾ, ರೂಪಾ ದೇವನೂರ, ಪಾರ್ವತಿ ಜಾನವಾಡ, ವೇದಾ ಮರಗೋಳ, ರೇಖಾ ಹಲಕರ್ಟಿ, ಶೈಲಶ್ರೀ ಕೋಬಾಳ ಸೇರಿದಂತೆ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here