ಆಹಾರದ ಅಭದ್ರತೆ ಹೋಗಲಾಡಿಸಿದ ಬಾಬು ಜಗಜೀವನರಾಮ: ವಿಜಯಕುಮಾರ ರಾಮಕೃಷ್ಣ

0
50

ಶಹಾಬಾದ:ಹಸಿರು ಕ್ರಾಂತಿಯ ಹರಿಕಾರರು ಎಂದು ಕರೆಸಿಕೊಳ್ಳುವ ಬಾಬು ಜಗಜೀವನರಾಮ ಅವರು ಆಹಾರದ ಅಭದ್ರತೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿದರು.

ಅವರು ಸೋಮವಾರ ಮಾದಿಗ ಸಮಾಜ ತಾಲೂಕಾ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದ ಸಮೀಪದ ಬಾಬು ಜಗಜೀವನರಾಮ ಮಾರ್ಗ ಹಾಗೂ ಜೆಪಿ ಕಾರ್ಖಾನೆಯ ಹತ್ತಿರ ವೃತ್ತದ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಆಹಾರ ಸಮಸ್ಯೆ ವೀಪರಿತವಾಗಿತ್ತು.ಅದನ್ನು ಹೋಗಲಾಡಿಸಲು ನಮ್ಮ ಕೃಷಿಯಲ್ಲಿ ಬದಲಾವಣೆ ತರುವುದು ಮುಖ್ಯ ಎಂದು ಮನಗಂಡು ಆ ಸಮಯದಲ್ಲಿ ಕೃಷಿ ಸಚಿವರಾಗಿದ್ದ ಡಾ.ಬಾಬು ಜಗಜೀವನರಾಮ ಅವರ ಮಾಡಿದ್ದ ಕಾರ್ಯಗಳು ಪ್ರಶಂಸನೀಯ.ಹಾಗಾಗಿ ಅವರನ್ನು ನಾವು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತೆವೆ.ಹೀಗೆ ಕೊಟ್ಟಂತಹ ಜವಾಬ್ದಾರಿಯನ್ನು ತುಂಬಾ ಪ್ರಾಮಾಣಿಕವಾಗಿ ನಿರ್ವಹಿಸಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಾಣಾಕ್ಷತನವನ್ನು ಜಗಜೀವನರಾಮ ಹೊಂದಿದ್ದರು ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಪರಮೇಶ್ವರ ಮಾತನಾಡಿ, ದಲಿತಪರವಾಗಿ ಹೋರಾಟ ಮಾಡಿದವರಲ್ಲಿ ಪ್ರಮುಖವಾಗಿ ಅಂಬೇಡ್ಕರ್ ಮತ್ತು ಬಾಬುಜಗಜೀವನರಾಮ ಅವರ ಹೆಸರುಗಳು ಮುಂಚೂಣಿಗೆ ಸ್ಮರಿಸುವುದು ನಮ್ಮ ಕರ್ತವ್ಯ.ಆ ಮೂಲಕ ಅವರ ಕಾರ್ಯಗಳನ್ನು ಮೆಲಕು ಹಾಕಿ ಅಂತಹ ಕಾರ್ಯಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ದಲಿತ ಮಾದಿಗ ಸಮಾಜದ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್ ಮಾತನಾಡಿ, ಮಾದಿಗ ಸಮಾಜದ ಬಂಧುಗಳು ಸಮಾಜದ ಸಂಘಟನೆಯಲ್ಲಿ ತೊಡಗುವ ಮೂಲಕ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕಾಗಿದೆ.ಅದಕ್ಕಾಗಿ ಎಲ್ಲರೂ ಒಂದಾಗಿ ಪರಸ್ಪರ ಸಹಬಾಳ್ವೆಯ ಮೂಲಕ ಸಮಾಜವನ್ನು ಕಟ್ಟುವಂತ ಕೆಲಸಕ್ಕೆ ಮುಂದಾಗಬೇಕೆಂದು ಹೇಳಿದರು.

ಮಾದಿಗ ಸಮಾಜ ತಾಲೂಕಾ ಸಮಿತಿಯ ಅಧ್ಯಕ್ಷ ಡಿ.ಡಿ.ಓಣಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕರ್ಮಚಾರಿ ಸಫಾಯಿ ಕರ್ಮಚಾರಿ ಆಯೋಗದ ನಿರ್ದೇಶಕರಾದ ಗೀತಾ ರಾಜು ವಾಡೇಕರ,ಆದಿ ಜಾಂಭವ ಕಲ್ಯಾಣ ಸಂಘದ ಅಧ್ಯಕ್ಷ ಎ.ಹೆಚ್.ನಾಗೇಶ, ಉಪಾಧ್ಯಕ್ಷ ಎಚ್.ಎಸ್.ಮಟ್ಟಿ, ಅಂಬಾರಾಯ ಬೆಳಕೋಟೆ, ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ,ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್,ಡಾ.ರಶೀದ್ ಮರ್ಚಂಟ, ಗಿರೀಶ ಕಂಬಾನೂರ,ಪರಮೇಶ್ವರ ಖಾನಾಪೂರ,ರಾಜು ಜಂಬಗಿ,ಶರಣು ಪಗಲಾಪೂರ, ದಸಂಸ ಮುಖಂಡರಾದ ಡಾ.ಮಲ್ಲೇಶಿ ಸಜ್ಜನ್,ಮರಿಯಪ್ಪ ಹಳ್ಳಿ,ತಿಪ್ಪಣ್ಣ ನಾಟೇಕಾರ, ಭಗವಾನ ದಂಡಗುಲಕರ್, ನಾಗಪ್ಪ ಬೆಳಮಗಿ,ಲೋಹಿತ್ ಕಟ್ಟಿ,ಡಾ.ಅಹ್ಮದ್ ಪಟೇಲ್,ಮಲ್ಕಣ್ಣ ಮುದ್ದಾ,ಮಹಾದೇವಪ್ಪ ಬಳಿಚಡಿ, ಅಬಿಬ್ ಖಾನ ವೇದಿಕೆಯ ಮೇಲಿದ್ದರು.

ರವಿ ಬೆಳಮಗಿ ನಿರೂಪಿಸಿದರು, ಶಿವರಾಜ ಕೋರೆ ಸ್ವಾಗತಿಸಿದರು, ಶರಣು ಪಗಲಾಪೂರ ಪ್ರಾಸ್ತಾವಿಕ ನುಡಿದರು, ಸಂತೋಷ ಹುಲಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here