ಈ ಸಲವೂ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲಿ ಶಾಸಕ ಡಾ. ಅಜಯ್ ಸಿಂಗ್ ನಿರ್ಧಾರ

0
9

ಜೇವರ್ಗಿ: ಅತಿವೃಷ್ಟಿ, ನೆರೆ ಹಾವಳಿ ಹಾಗೂ ಕೋವಿಡ್ ಕಾರಣದಿಂದಾಗಿ ಜನತೆ ಸಂಕಷ್ಟದಲ್ಲಿದ್ದಾರೆಂದು ಕಳೆದ 2 ವರ್ಷಗಳಿಂದ ತಮ್ಮ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳದ ಜೇವರ್ಗಿ ಶಾಸಕರು ಹಾಗೂ ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಈ ಬಾರಿಯೂ ಇದೇ ಜನೇವರಿ 29 ರ ಶನಿವಾರಂದು ಇರುವ ತಮ್ಮ 48 ನೇಯ ಜನ್ಮ ದಿನವನ್ನು ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ.

ಕೋವಿಡ್ 3 ನೇ ಅಲೆ ತೀವ್ರಗತಿಯಲ್ಲಿ ಪಸರಿಸುತ್ತಿದೆ, ಅತಿವೃಷ್ಟಿಯಿಂದ ಜನ ಹಾನಿ ಅನುಭವಿಸಿದ್ದಾರೆ. ಹೀಗೆ ಜನತೆ ಸಂಕಷ್ಟದಲ್ಲಿರುವಾಗ ತಾವು ಹುಟ್ಟುಹಬ್ಬ ಆಚರಿಸುವುದು ಸರ್ವಥಾ ಸರಿಯಾದ ಕ್ರಮವಲ್ಲ. ಆದ್ದರಿಂದ ಯಾರೂ ದುಂದುವೆಚ್ಚ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಅದ್ದೂರಿಯಿಂದ ಆಚರಿಸುವುದು ಬೇಡವೆಂದು ತಮ್ಮೆಲ್ಲ ಕಾರ್ಯಕರ್ತರು, ಅಭಿಮಾನಿ ಬಳಗ ಹಾಗೂ ಪಕ್ಷದ ಮುಖಂಡರುಗಳಿಗೆ ಡಾ. ಅಜಯ್ ಸಿಂಗ್ ವಿನಿಮ್ರ ಪೂರ್ವಕ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಹುಟ್ಟುಹಬ್ಬ ಆಚರಣೆ ನಮ್ಮ- ನಿಮ್ಮ ನಡುವಿನ ಸ್ನೇಹ ಬಾಂಧವ್ಯದ ಸಂಕೇತ, ಇರುವಷ್ಟು ದಿನ ನಿಮ್ಮೆಲ್ಲರ ಬೆಂಬಲ, ಅಭಿಮಾನದೊಂದಿಗೆ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಜನಸೇವೆ ಮಾಡುವ ಬಯಕೆ ತಮ್ಮದು ಎಂದಿರುವ ಡಾ. ಅಜಯ್ ಸಿಂಗ್ ಈ ಬಾರಿಯೂ ಜನ್ಮದಿನ ಆಚರಣೆ ಮಾಡಿಕೊಳ್ಳುವುದು ಬೇಡವೆಂಬ ತಮ್ಮ ನಿರ್ಧಾರಕ್ಕೆ ಬೆಂಬಲಿಸುವಂತೆ ಕಾರ್ಯಕರ್ತರು ಅಭಿಮಾನಿಗಳಲ್ಲಿ ಕೋರಿದ್ದಾರೆ.

ಜ. 29 ರ ತಮ್ಮ 48 ನೇ ಜನ್ಮದಿನದ ದಿನ ಜೇವರ್ಗಿ, ಕಲಬುರಗಿ, ಬೆಂಗಳೂರಿಗೆ ಅಭಿಮಾನಿಗಳು, ಕಾರ್ಯಕರ್ತರು ಬಂದು ತಮಗೆ ಶುಭ ಕೋರುವುದಾಗಲಿ, ಹಾರ ಹಾಕಿ ಅಭಿಮಾನ ತೋರುವುದಾಗಲಿ, ಶಾಲು ಹೊದಿಸುವಂಹ ಯಾವುದೇ ಆಚರಣೆ ಮಾಡುವುದು ಬೇಡ. ಅದರ ಬದಲಾಗಿ ತಾವುಗಳು ಇದ್ದಲ್ಲಿಯೇ, ನಿಮ್ಮನಿಮ್ಮ ವ್ಯಾಪ್ತಿಯಲ್ಲಿಯೇ ಸಮಾಜದಲ್ಲಿರುವ ಬಡವರು, ನಿರ್ಗತಿಕರಿಗೆ, ಕೋವಿಡ್ ಸಂತ್ರಸ್ತರಿಗೆ , ಬಡ ರೋಗಿಗಳಿಗೆ ಕೈಲಾದ ಸಹಾಯ- ಸಹಕಾರ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಅಲ್ಲಿಂದಲೇ ತಮಗೆ ಶುಭ ಕೋರುವಂತೆಯೂ, ದೀರ್ಘಾಯುಷಿಯಗುವಂತೆ ಹರಸುವಂತೆಯೂ ಶಾಸಕರಾದ ಡಾ. ಅಜಯ್  ಸಿಂಗ್ ಜೇವರ್ಗಿ ಮತಕ್ಷೇತ್ರದ ಜನತೆಯಲ್ಲಿಯೂ, ತಮ್ಮೆಲ್ಲ ಅಭಿಮಾನಿ ಕಾರ್ಯಕರ್ತರು ಹಾಗೂ, ಪಕ್ಷದ ಮುಖಂಡರಲ್ಲಿ ಕೋರಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here