ನ್ಯಾಯಾಧೀಶರ ವರ್ತನೆ ವಿರುದ್ಧ ಕ್ರಮಕ್ಕೆ ಆಗ್ರಹ

0
14

ಜೇವರ್ಗಿ: ಗಣರಾಜ್ಯೋತ್ಸವದ ದಿನಾಚರಣೆಯ ಸಮಾರಂಭದಲ್ಲಿ ಭಾರತರತ್ನ ಸಂವಿಧಾನಶಿಲ್ಪಿ ಎಂದು ಹೆಸರು ಪಡೆದಿರುವ ಡಾ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ಧ್ವಜಾರೋಹಣದ ಸಮಯದಲ್ಲಿ ತೆಗೆಯಲು ಹೇಳಿದ್ದು ,ನಿಜಕ್ಕೂ ಅವಮಾನಕರ ಸಂಗತಿ ಯಾಗಿದೆ.

ಇದು ನಮ್ಮ ಭಾರತ ದೇಶದ ರಾಷ್ಟ್ರ ನಾಯಕರಿಗೆ ನ್ಯಾಯಾಧೀಶರು ಗೌರವ ತೋರುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಸಮುದಾಯ ಹಾಗೂ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ .ಇಂತಹ ಘಟನೆಗಳು ಮತ್ತು ಕಳಿಸುವುದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ .ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಮಾಜ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜು ವಿ ಮುದ್ದಡಗಿ ತಿಳಿಸಿದ್ದರು.

Contact Your\'s Advertisement; 9902492681

ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಚೆನ್ನಯ್ಯ ವಸ್ತ್ರದ್ ಮಾತನಾಡಿ ಭಾರತ ದೇಶಕ್ಕೆ ಸ್ವಾತಂತ್ರ ಬಂದ ನಂತರ ನಮ್ಮನ್ನು ನಾವು ಗಣರಾಜ್ಯ ಮಾಡಿಕೊಂಡು ಸುಸೂತ್ರವಾಗಿ ಆಡಳಿತ ನಡೆಸಲು ಹೊಸ ಸಂವಿಧಾನದ ಮೂಲಕ ದೇಶಕ್ಕೆ ಮಾದರಿ ಕಾನೂನು ರಚಿಸಿಕೊಟ್ಟ ಭಾರತದ ಮಹಾನ್ ಮೇಧಾವಿ ಹಾಗೂ ವಕೀಲರೂ ಆಗಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಗಣರಾಜ್ಯೋತ್ಸವದ ವೇದಿಕೆಯಿಂದ ತೆಗೆಯಲು ಹೇಳಿದ್ದು ಸರಿಯಲ್ಲ. ಇದರಿಂದಾಗಿ ಸಮಾಜ ಹಾಗೂ ಸಮುದಾಯದ ಜನರಿಗೆ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ.

ನ್ಯಾಯಾಧೀಶರು ನಡೆ ಖಂಡನೀಯ .ಈ ಸಂಬಂಧಪಟ್ಟಂತೆ ಧ್ವಜಾರೋಹಣ ಕಾರ್ಯಕ್ರಮದ ಆಯೋಜಕರು ಹಾಗೂ ಸಂಬಂಧಪಟ್ಟಂತೆ ಸಂಪೂರ್ಣ ಘಟನೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ಕುರಿತಂತೆ ರಾಜ್ಯಪಾಲರಿಗೆ ಜೇವರ್ಗಿ ತಶಿಲ್ದಾರ್ ಇವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮನವಿ ಪತ್ರವನ್ನು ಸಲ್ಲಿಸುವಾಗ ವೇದಿಕೆಯ ಲಕ್ಷ್ಮಣ್ ಪವಾರ್, ಕಂಟು ಮಳಗಿ, ರಾಮು, ಮುನಿರ್, ಮಹಾಲಕ್ಷ್ಮಿ ಹಾಲಬಾವಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here