ನಿಮ್ಮನರಿದ ಜ್ಞಾನವೇ ಪರಮಜ್ಞಾನ

0
37

ವಚನ, ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟ ಜ್ಞಾನವೆಂಬ ಜ್ಞಾನತ್ರಯಂಗಳೇನಾದವು?! ಅಂತು ತ್ರಿಕಾಲಜ್ಞಾನಂಗಳಿಂದೇನಹುದು? ಕೂಡಲಸಂಗಮದೇವಾ, ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ..! ದೇವರ ಸ್ವರೂಪವನ್ನು ತಿಳಿಯದ, ಅರಿಯದ ಜ್ಞಾನ ಸುಜ್ಞಾನವಾಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ಧಾರೆ ಬಸವಣ್ಣನವರು.

ಕೇವಲ ಶಾಸ್ತ್ರ ಜ್ಞಾನವಷ್ಟೇ ಅಲ್ಲ, ತ್ರಿಕಾಲಜ್ಞಾನವೂ ನಿಜವಾದ ಜ್ಞಾನವಲ್ಲ, ಸಮ್ಯಗ್ ಜ್ಞಾನವಲ್ಲ, ಪರಾವಿಧ್ಯೆಯಲ್ಲ , ಆದರೆ ಕೂಡಲ ಸಂಗಮದೇವಾ ನಿಮ್ಮನರಿದ ಜ್ಞಾನವೇ ಪರಮಜ್ಞಾನ. ಅದೇ ಪರಾವಿಧ್ಯೆ, ಎಂಬ ಬಸವಣ್ಣನವರ ವಚನದಲ್ಲಿ ಮತ್ಸ್ಯ ನುಂಗಿದ ಮಾಣಿಕ್ಯದಂತೆ ಹೊಳೆಯುತ್ತದೆ.

Contact Your\'s Advertisement; 9902492681

ಹೊರಗೆ ಮುಗಿಲು, ಒಳಗೆ ಮಿಂಚು, ಮಾನವನ ಮರೆಯ ಈ ಮಿಂಚು, ಸಾಧಕನ ಜೀವಜಾತಿಯ ಬೆಳಗಿನ ಬೆಳಗು, ಈ ಬೆಳಗನ್ನು ಬೆಳಗಿನಲರಿಯಬೇಕು, ಅಂದರೆ ಜೀವಜಾತಿಯ ಸಾರವಾದ ಮಾನವ ತನ್ನ ಬೆಳಗಿನಿಂದ, ತನ್ನ ಅರಿವಿನ ಕಣ್ಣಿಂದ ಆರಿಸಬೇಕು. ಕಾಣಬೇಕು. ಈ ಮಹಾಬೆಳಗನ್ನು ಕಂಡು ಬೆಳಗು ನಡೆಸಿದಂತೆ ನಡೆಯಬೇಕು. ಇರಿಸಿದಂತೆ ಇರಬೇಕು. ಬೆಳಗಿನ ಬೆಳಗಿನಲ್ಲಿ ಬೆಳಕಾಗಿ ಇರುವುದೇ ದಿವ್ಯ ಜೀವನ. ಈ ಮಹಾಬೆಳಗು ನಿರೂಪಿಸಿದಂತೆ, ಪ್ರೇರೇಪಿಸಿದಂತೆ ವರ್ತಿಸುವುದೇ ದಿವ್ಯಾಚರಣೆ. ಅದೇ ಬೆಳಗಿನಾಚರಣೆ. ಬೆಳಗಿನಲ್ಲಿ ಎಚ್ಚೆತ್ತು ಬೆಳಗಾದ ಅರಿವು ಆಚರಣೆಯಾಗಿ ಸರವಾಂಗದಿಂದ ಹರಿದರೆ ಅದೇ ಪರಿಪೂರ್ಣ ದಿವ್ಯಜೀವನ.

ಈ ದಿವ್ಯಜೀವನದಲ್ಲಿ ಅಂತರಂಗದ ಅರಿವು ಬೇರಲ್ಲ, ಬಹಿರಂಗದ ಆಚರಣೆ ಬೇರಲ್ಲ, ಅರಿವು ಆಚಾರದ ಪ್ರಾಣ; ಆಚಾರ ಅರಿವಿಗೆ ಅಂಗ, ದೇಹದಲ್ಲಿ ಪ್ರಾಣ ಚೈತನ್ಯ ತುಂಬಿರುವಂತೆ, ಕ್ರಿಯಾಚರಣೆಯೆಲ್ಲ ಅರಿವುಮಯ. ಅರಿವಿನ ಬೆಳಗುಮಯ, ಈ ಪರಿಪೂರ್ಣ ದಿವ್ಯ ಜೀವನವೆಂದರೆ ದಿವ್ಯಜ್ಞಾನ. ದಿವ್ಯ ಶಕ್ತಿ,ದಿವ್ಯಯೋಗ. ದಿವ್ಯ ಭಕ್ತಿ. ದಿವ್ಯ ಪೂಜೆ.

ಈ ಜ್ಞಾನ ಭಕ್ತಿ ಶಕ್ತಿ ಪೂಜೆ ಧ್ಯಾನ ಯೋಗ. ಒಳಹೊರಗೆ ತೆರಹಿಲ್ಲದೆ ವ್ಯಾಪಿಸಿ ಹಗಲು ರಾತ್ರಿ ಎನ್ನದೆ ನಿತ್ಯ ನಿರಂತರವಾಗಿ ನಡೆಯುತ್ತದೆ. ಈ ದಿವ್ಯ ಜೀವನದಲ್ಲಿ, ದೇಹ ಕರಣೇಂದ್ರಿಯಗಳ ಕತ್ತಲೆಯನ್ನು ಕಳೆದು, ರಾಗ ದ್ವೇಷ ಬೇಕು ಬೇಡಗಳ ಸೀಮೆಯ ದಾಟಿ, ದಿವ್ಯ ಸಾಮ್ರಾಜ್ಯದಲ್ಲಿ ನೆಲೆಯಾಗಿ ನಿಂದಿರುವ ಈ ದಿವ್ಯ ಜೀವನದ ವಿಶುದ್ಧಿಯಲ್ಲಿ, ಇದ್ಧರೆ ಆತ ಮಹಾ ಜ್ಞಾನಿ. ಜೀವನ ಸಾಧನೆಯಲ್ಲಿ ವಿಸ್ತಾರದಲ್ಲಿ ಕತ್ತಲೆಯ ಕುನ್ನಿಗಳಾದ ಅನೀತಿ , ಅತ್ಯಾಚಾರ, ಅನಾಚಾರ, ಅನ್ಯಾಯ, ಆಲಸ್ಯ, ಪರಪೀಡೆ, ಪರಶೋಷಣೆ, ಧರ್ಪ, ಮೋಸ, ವಂಚನೆ, ಇದ್ದಲ್ಲಿ ಅತನಲ್ಲಿರುವ ಜ್ಞಾನವೆಲ್ಲ ಶ್ವಾನಜ್ಞಾನವಾಗುತ್ತದೆ. ಅಮೃತ ಸಾಗರದಲ್ಲಿ ಬೇವಿನ ಬೀಜ ವುಂಟೆ.!? ಎಂದು ಹೇಳಿದರು ಶರಣರು..!

  • # ಶ್ರೀ ಬಸವಾಂಜಲಿದೇವಿ ಮಾತಾಜೀ
  • ಪೀಠಾಧ್ಯಕ್ಷರು, ಶ್ರೀ ಬಸವಜ್ಞಾನ ಮಂದಿರ, ಮೈಸೂರು
  • # ನಿರೂಪಣೆ — ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here