ವಾಗ್ದೇವಿ ಶಾಲೆಯ ಮಾನ್ಯತೆ ರದ್ದತಿಗೆ ಎಸ್ಎಫ್ಐ ಅಗ್ರಹ

0
17

ರಾಯಚೂರು: ಸರ್ಕಾರದ ಆದೇಶವನ್ನು ಉಲಂಘನೆ ಮಾಡಿದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ ವಾಗ್ದೇವಿ ವಿದ್ಯಾ ಮಂದಿರದ ಶಾಲಾ ಮಾನ್ಯತೆಯನ್ನು ರದ್ದುಗೊಳಿಸಿ ಅವರ ಮೇಲೆ ಸೂಕ್ತ ಕಾನೂನು ಕೈಗೊಳ್ಳಲು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಗಣರಾಜ್ಯೋತ್ಸವ ವನ್ನು ಆಚರಿಸಿ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ  ರಾಜ್ಯದ ಎಲ್ಲಾ ಸರ್ಕಾರಿ ಕಛೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೋಟೋ ವನ್ನು ಕಡ್ಡಾಯವಾಗಿ ಇಡಬೇಕೆಂದು ಹಾಗೂ ಕಚೇರಿಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಮತ್ತು ಗಾಂಧಿಯವರ ಪೋಟೋವನ್ನು ಕಾಣುವ ಸ್ಥಳದಲ್ಲಿ ಹಾಕಬೇಕೆಂದು ಕರ್ನಾಟಕ ಸರ್ಕಾರದ ಆದೇಶ ಇದ್ದರು ದೇವದುರ್ಗದ ಶಾಹಪುರ ರಸ್ತೆಯಲ್ಲಿ ಇರುವ  ವಾಗ್ದೇವಿ ವಿದ್ಯಾ ಮಂದಿರದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು  ಗಾಂಧಿಜೀ ಪೋಟೋ  ಇಡದೆ ಉದ್ದೇಶ ಪೂರ್ವಕವಾಗಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿ, ಸರ್ಕಾರದ ಆದೇಶವನ್ನು ಉಲಂಘನೆ ಮಾಡಿ ಉದ್ದಟತ ಮೆರೆದಿದ್ದಾರೆ.

Contact Your\'s Advertisement; 9902492681

ಇದನ್ನು ಪ್ರಶ್ನೆ ಮಾಡಲು ಹೋದವರ ಮೇಲೆಯೂ ದೌರ್ಜನ್ಯ ಎಸಗಿ ಶಾಲೆ ಸ್ಥಾಪನೆ ಆದಾಗನಿಂದ ಇಲ್ಲಿಯವರೆಗೆ ಕಳೆದ ಹತ್ತು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನದಂದು ನಾವು ಯಾರ ಪೋಟೋ ಇಡುವುದಿಲ್ಲ ಕೇವಲ ಭಾರತ ಮಾತೆಯ ಭಾವಚಿತ್ರವನ್ನು ಇಡುತ್ತೇವೆ ಎಂದು ಅಸಭ್ಯವಾಗಿ ಮತ್ತು ಹಗುರವಾಗಿ ಮಾತನಾಡಿದ್ದಾರೆ. ಇವರ ಈ ಕೃತ್ಯ ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ.

ಇದು ಇವರ ನಿಜವಾದ ಮುಖವಾಡ ಮತ್ತು ಮನಸ್ಥಿತಿಯನ್ನು ತಿಳಿಸಿದೆ ಆದ್ದರಿಂದ ಇವರ ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನು ರದ್ದು ಮಾಡಬೇಕು ಹಾಗೂ ಈ ಸಂಸ್ಥೆಯ ಮುಖ್ಯಸ್ಥರಾದ ಸಚಿನ್ ದೋಹವಾಟಿ ಮತ್ತು ಮುಖ್ಯೋಪಾಧ್ಯಾಯರ ಮೇಲೆ ದೇಶದ್ರೋಹದಂತಹ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ನ್ಯಾಯಾಧೀಶರ ಪ್ರಕರಣವನ್ನು ಕುರಿತು ಸಮಗ್ರ ನಡೆಸಿ ತಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಬರೆದ  ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ದೀನಸಮುದ್ರ, ಜಿಲ್ಲಾ ಮುಖಂಡರಾದ ಮೌನೇಶ ಬುಳ್ಳಾಪುರ, ಶಿವಕುಮಾರ, ಪವನ ಕುಮಾರ್, ಅಶೋಕ, ವಕೀಲರಾದ ಜುನೈದ್ ಮರ್ಚೇಡ್ ವೈಜನಾಥ್, ಎಂ.ಡಿ. ಶರೀಫ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here