ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಕಪನೂರ ನಿರ್ಧಾರ

0
20

ಕಲಬುರಗಿ: ಫೆ,೦೩-ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದಾಗಿ ಜನತೆ ಸಂಕಷ್ಟದಲ್ಲಿದ್ದು, ಕಳೆದ ಹಲವು ವರ್ಷಗಳಿಂದ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ಆದರೆ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ರಾಜಕುಮಾರ ಎಚ್ ಕಪನೂರ ತಿಳಿಸಿದ್ದಾರೆ. ಈ ಬಾರಿಯೂ ಇದೇ ಫೆಬ್ರವರಿ ೦೫ರಂದು ನನ್ನ ೪೩ ನೇಯ ಜನ್ಮ ದಿನವನ್ನು ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದೇನೆ.

ಕಾರಣ ಕೋವಿಡ್ ೩ ನೇ ಅಲೆ ತೀವ್ರಗತಿಯಲ್ಲಿ ಪಸರಿಸುತ್ತಿದ್ದು, ಕೊರನಾದಿಂದ ಜನರು ಹಾನಿ ಅನುಭವಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಜನತೆ ಸಂಕಷ್ಟದಲ್ಲಿರುವಾಗ ನಾನು ಹುಟ್ಟುಹಬ್ಬವನ್ನು ಆಚರಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಅವರು ತಿಳಿಸಿದರು. ಆದ್ದರಿಂದ ಯಾರೂ ದುಂದುವೆಚ್ಚ ಮಾಡದೇ ಹುಟ್ಟುಹಬ್ಬ ಅದ್ದೂರಿಯಿಂದ ಆಚರಿಸುವುದು ಬೇಡವೆಂದು ಅವರು ತಮ್ಮ ಕಾರ್ಯಕರ್ತರು, ಅಭಿಮಾನಿ ಬಳಗ ಹಾಗೂ ಪಕ್ಷದ ಮುಖಂಡರುಗಳಿಗೆ ಪತ್ರಿಕಾ ಪ್ರಕಟಣೆ ಮೂಲಕ ವಿನಮ್ರವಾಗಿ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಹುಟ್ಟುಹಬ್ಬ ಆಚರಣೆ ನಮ್ಮ- ನಿಮ್ಮ ನಡುವಿನ ಸ್ನೇಹ ಬಾಂಧವ್ಯದ ಸಂಕೇತ, ಇರುವಷ್ಟು ದಿನ ನಿಮ್ಮೆಲ್ಲರ ಬೆಂಬಲ, ಅಭಿಮಾನದೊಂದಿಗೆ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಜನಸೇವೆ ಮಾಡುವ ಬಯಕೆ ತಮ್ಮದು ಎಂದಿರುವ ಅವರು ಈ ಬಾರಿಯೂ ಜನ್ಮದಿನ ಆಚರಣೆ ಮಾಡಿಕೊಳ್ಳುವುದು ಬೇಡವೆಂದು ನಿರ್ಧರಿಸಿ ಬೆಂಬಲಿಸುವಂತೆ ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿ ಬಳಗಕ್ಕೆ ಕೋರಿದ್ದಾರೆ.

ಫೆ-೦೫ ರ ನನ್ನ ೪೩ ನೇ ಜನ್ಮದಿನ ದಿವಸ ಕಲಬುರಗಿ ಜಿಲ್ಲೆಯ ಅಭಿಮಾನಿಗಳು, ಕಾರ್ಯಕರ್ತರು ಬಂದು ತಮಗೆ ಶುಭ ಕೋರುವುದಾಗಲಿ, ಹಾರ ಹಾಕಿ ಅಭಿಮಾನ ತೋರುವುದಾಗಲಿ, ಶಾಲು ಹೊದಿಸುವಂಹ ಯಾವುದೇ ಆಚರಣೆ ಮಾಡುವುದು ಬೇಡ. ಅದರ ಬದಲಾಗಿ ತಾವುಗಳು ಇದ್ದಲ್ಲಿಯೇ, ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿಯೇ ಸಮಾಜದಲ್ಲಿರುವ ಬಡವರು, ನಿರ್ಗತಿಕರಿಗೆ, ಕೋವಿಡ್ ಸಂತ್ರಸ್ತರಿಗೆ , ಬಡ ರೋಗಿಗಳಿಗೆ ಕೈಲಾದ ಸಹಾಯ- ಸಹಕಾರ ಮಾಡುವ ಮೂಲಕ ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಅಲ್ಲಿಂದಲೇ ನನಗೆ ಶುಭ ಕೋರಿ, ದೀರ್ಘಾಯುಷಿಯಾಗುವಂತೆ ಹರಸುವಂತೆಯೂ ಅವರು ತಮ್ಮೆಲ್ಲ ಅಭಿಮಾನಿ ಕಾರ್ಯಕರ್ತರು ಹಾಗೂ, ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here