ಕಲಬುರಗಿ: ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಉಮ್ರಾಣಿಯವರು ಮಾತನಾಡುತ್ತ ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯಂತ ಮುಖ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಅಂಕಗಳಿಕೆಗಾಗಿ, ನೌಕರಿ ಹಿಡಿಯುವದಕ್ಕಾಗಿ ಓದದೆ, ಸಾರ್ಥಕ ಬದುಕಿಗಾಗಿ ಓದಬೇಕು. ವಿಜ್ಞಾನ ಓದುವುದರ ಜೊತೆಗೆ ಅದ್ಯಾತ್ಮಿಕ ಸಾಧನೆ ಮುಖ್ಯವಾಗಿದೆ, ಶಿಕ್ಷಣದ ಉದ್ದೇಶ ಕೇವಲ ನೌಕರಿ ಹಿಡಿಯುದಕ್ಕಾಗಿ ಅಲ್ಲ. ಸರ್ ಎಮ್. ವಿಶ್ವೇಶ್ವರಯ್ಯನವರಂತೆ ಮಹಾನ್ ವ್ಯಕ್ತಿಗಳಾಗುವುದಕ್ಕಾಗಿ ಶಿಕ್ಷಣ ಬೇಕು. ವ್ಯಕ್ತಿ ತನ್ನ ಶಕ್ತಿ ಸಾಮರ್ಥಗಳನ್ನು ದುರುಪಯೋಗ ಮಾಡಿಕೊಂಡರೆ ಹಾಳಾಗುತ್ತಾನೆ, ಸದ್ಬಳಕೆ ಮಾಡಿಕೊಂಡರೆ ಮಹಾನ್ ವ್ಯಕ್ತಿಯಾಗುತ್ತಾನೆ.
ಪಿ.ಯು.ಸಿ. ಹಂತದಲ್ಲಿ ವಿದ್ಯಾರ್ಥಿಗಳು ಸದ್ಗುಣ ಕಲಿತರೆ ಜೀವನ ನಿರ್ಮಾಣವಾಗುತ್ತದೆ- ಇಲ್ಲವಾದರೆ ನಿರ್ನಾಮವಾಗುತ್ತದೆ. ಮನಸ್ಸಿದ್ದರೆ-ಮಾರ್ಗ ಎಂಬಂತೆ ಜೀವನದ ಸಾಧನೆಗೆ ಮನಸ್ಸು ಮಾಡಬೇಕು,ಶಿಕ್ಷಣ ಉದ್ಯೋಗಕ್ಕಾಗಿ ಅಲ್ಲ ಜೀವನದ ಉನ್ನತೀಕರಣಕ್ಕಾಗಿ, ಸಬಲೀಕರಣಕ್ಕಾಗಿ. ಓದುವ ಅವಕಾಶ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ, ಯಾರಿಗೆ ಸಿಕ್ಕಿದೆ ಅವರು ಅದನ್ನು ಸದುಪಯೋಗ ಪಡೆದು ಕೊಳ್ಳಬೇಕು, ಮನುಷ್ಯನಿಗೆ ಇಚ್ಛಾಶಕ್ತಿ ಬೇಕು, ಬೆಟ್ಟವನ್ನು ಪುಡಿ ಪುಡಿ ಮಾಡುವ ಸಮುದ್ರದ ನೀರೆಲ್ಲ ಆಪೋಶನ ಮಾಡುವ ಅದಮ್ಯ ಇಚ್ಛಾಶಕ್ತಿ -ಕ್ರಿಯಾಶಕ್ತಿ ಈ ಮೂರು ಶಕ್ತಿ ಮನುಷ್ಯನಿಗೆ ಬೇಕು, ವಿವೇಕಾನಂದ ಹೇಳುವಂತೆ ಈ ದೇವನ್ನು ಕಟ್ಟಲು ನನಗೆ ಉಕ್ಕಿನ ಶಕ್ತಿ ಹೊಂದಿದ ಯುವಕರು ಬೇಕು- ಎಂಬಂತೆ ಮನುಷ್ಯ ಕನಸು ಕಾಣಬೇಕು ಗುರಿ ಇಟ್ಟುಕೊಳ್ಳಬೇಕು.
ಸೂರ್ಯನನ್ನು ಗುರಿಯಾಗಿಸಿದರೆ ತಾರೆಗಳಾದರೂ ಪಡೆದುಕೊಳ್ಳಬಹುದು,ಬ್ರಹ್ಮಶ್ಚರ್ಯ ಓದುವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯ. ಸಧೃಡ ವಾದ ದೇಹದಲ್ಲಿ ಸದೃಡವಾದ ಮನಸ್ಸನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ದಿನಕ್ಕೆ ಒಂದು ಗಂಟೆಯಾದರು ವಿದ್ಯಾರ್ಥಿಗಳು ದೈಹಿಕ ವ್ಯಾಯಮದಲ್ಲಿ ಕಳೆಯಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಈ ಕ್ಷಣದಿಂದಲೆ ನಾವು ಸನ್ಮಾರ್ಗದೆಡೆಗೆ ಜೀವನದ ಪಯಣ ಹೊರಡಿಸಬೇಕು,