ವಿದ್ಯುತ್ ದರ ಹೆಚ್ಚಳ ಜನ ವಿರೋಧಿ ಕ್ರಮ: ಕೆಪಿಸಿಸ ಸದಸ್ಯ ಭೂನಸೂರ್ ಕಿಡಿ

0
23

ಕಲಬುರಗಿ: ಒಂದೇ ಸಮನೆ ಏರುತ್ತಿರುವ ಪೆಟ್ರೋಲ್, ಡೀಸೆಲ್, ವಾಣಿಜ್ಯ ಬಳಕೆ ಸಿಲೆಂಡರ್, ಒಳ್ಳೆಣ್ಣೆ ದರಗಳ ನುವೆಯೇ ಇದೀಗ ವಿದ್ಯುತ್ ದರ ಹೆಚ್ಚಳವಾಗಿರೋದು ಬಡವರು, ಮಧ್ಯಮ ವರ್ಗದವರ ಹೊಟ್ಟೆ ಮೇಲೆ ಬರೆ ಹಾಕಿದಂತಾಗಿದೆ ಎಂದು ವಿದ್ಯುತ್ ದರ ಹೆಚ್ಚಳವನ್ನು ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್ ಉಗ್ರವಾಗಿ ಖಂಡಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲೀಗ ವಿದ್ಯುತ್ ದರ ಹಾಗೂ ಹೋಟಲ್ ಆಹಾರ ಪದಾರ್ಥಗಳ ದರ ಹೆಚ್ಚಳದ ಆಗಾತ ಏಕಕಾಲಕ್ಕೇ ಗ್ರಾಹಕರು ನುಭವಿಸಬೇಕಾಗಿದೆ. ಇದರಿಂದಾಗಿ ಜನ ಸಾಮಾನ್ಯರ ಬದುಕೇ ದುರ್ಭರವಾಗಲಿದೆ. ವಿದ್ಯುತ್ ದರ ಹೆಚ್ಚಳ ಕೃಷಿ ಕಾಯಕಕ್ಕೂ ಹೊಡೆತ ನೀಡಲಿದೆ. ಕೋವಿಡ್ ಹೊಎತದಲ್ಲೇ ರೈತರು ತೊಂದರೆ ಎದುರಿಸಿದ್ದರು. ಅದರಿಂದ ಚೇತರಿಸಿಕೊಂಡಿಲ್ಲ. ಇದೀಗ ಸರ್ಕಾರ ದರ ಹೆಚ್ಚಳದ ಚಾಯಿ ಬೀಸಿದೆ. ಇದು ಬಿಜೆಪಿ ಸರ್ಕಾರದ ಅತ್ಯಂತ ಜನ ವಿರೋಧಿ ಕ್ರಮವೆಂದು ಭೂಸನೂರ್ ದೂರಿದ್ದಾರೆ.

Contact Your\'s Advertisement; 9902492681

ಎಲ್ಲಾ ಎಸ್ಕಾಂಗಳು ದೊಡ್ಡ ಗ್ರಾಹಕರಿಂದ ಬರಬೇಕಾದ ಬಿಲ್ ಬಾಕಿ ಸಾವಿರಾರು ಓಟಿ ಹಾಗೇ ಉಳಿಸಿಕೊಂಡಿವೆ. ವಿದ್ಯುತ್ ಪ್ರಸರಣದಲ್ಲಿಯೂ ಸಾಕಷ್ಟು ನಷ್ಟವಾಗುತ್ತಿದೆ, ಇದಲ್ಲದೆ ಆರ್ಡಿಪಿಆರ್ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯಿಂದಲೂ ಸಾವಿರಾರು ಕೋಟಿ ರು ಬೀದಿ ದೀಪದ ಬಿಲ್ ಬಾಕಿ ಇದೆ. ಇದೆಲ್ಲದರ ಹೊರೆ ದರ ಹೆಚ್ಚಳ ಮಾಡುವ ಮೂಲಕ ಬಡಪಾಯಿ ಗ್ರಾಹಕರ ಮೇಲೆ ಹೊರಿಸಲಾಗುತ್ತಿದೆ. ಇದು ಅನ್ಯಾಯವಲ್ಲದೆ ಮತ್ತೇನು? ಬಿಜೆಪಿ ಸರ್ಕಾರ ಇಂತಹ ಅನ್ಯಾಯ ಮಾಡುವ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಭೂಸನೂರ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here