ಕಲಬುರಗಿ; ವಾರ್ಡ್ ನಂ.೬.ರ. ರಾಜು ಗಾಂಧಿ ನಗರದಲ್ಲಿ ವಿಶ್ವ ಬ್ಯಾಂಕ್ ನೇರವಿನ ೨೪x೭ ನಿರಂತರ ನೀರು ಸರಬರಾಜು ಯೋಜನೆ ಅಡಿಯಲ್ಲಿ ೧೫.ಲಕ್ಷ ಲೀಟರ್ ನೀರಿನ ಮೇಲುಸ್ಥರದ ನೀರು ಸಂಗ್ರಹಣ ಘಟಕದ ನಿರ್ಮಾಣ ಕಾಮಗಾರಿಗೆ ಶಾಸಕಿ ಖನೀಜ್ ಫಾತಿಮಾ ಅವರು ಭೂಮಿ ಪೂಜೆ ನೇರವರಿಸಿದರು.
ಈ ಸಂದರ್ಭದಲ್ಲಿ ಎಲ್ ಮತ್ತು ಟಿ ಜನರಲ್ ಮ್ಯಾನೇಜರ್ ಸಂಜಯಕುಮಾರ, ಸಮ್ಯಕ್ ಸಂಸ್ಥೆಯ ತಂಡದ ನಾಯಕ ಅಶೋತೋಷ ಪಟನಾಯಕ, ಚನ್ನವೀರ ಲಿಂಗನವಾಡಿ, ಬಸವರಾಜ ಮುನ್ನಳ್ಳಿ, ಆದಿಲ್ ಸೇಠ್ ಸುಲೆಮಾನ್ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.