ಎಲ್ಲಮ್ಮನ ಹೆಸರನಲ್ಲಿಯ ಕೆಲವು ಅವಾಸ್ತವಿಕ, ವಿಶಿಷ್ಟ ಹರಕೆಗಳು ಮತ್ತು ನಂಬಿಕೆ

# ಕೆ.ಶಿವು.ಲಕ್ಕಣ್ಣವರ

ವಿಶಿಷ್ಟ ಹರಕೆಯಾಗಲಿ ಮತ್ತು ನಂಬಿಕೆಯಾಗಲಿ ಮೂಢಾಚರಣೆ ಆಗಬಾರದು. ನಮ್ಮಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿಯ ಹರಕೆಗಳು ಮತ್ತು ನಂಬಿಕೆಗಳು ಬಹುತೇಕ ಮೂಢಾಚರಣೆಯಾಗಿವೆ. ಇಂತಹ ಮೂಢಾಚರಣೆಯ ಭಾಗವಾದ ಒಂದು ವಿಶಿಷ್ಟ ಕತೆಯನ್ನು ಓದಿ.
ದೇವರಿಗೆ ಬೇಕಾಗಿದ್ದು ಪರಿಶುದ್ಧ ಭಕ್ತಿ. ಈ ಭಕ್ತಿ ಅರ್ಪಣೆಯಲ್ಲಿ, ಪರಿಶುದ್ಧ ಕಾಯಕವಾದ ಏಕೈಕ ಮಾರ್ಗವಾದ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತಿನಂತೆ ನೇರ ನಡೆ, ನುಡಿ ಮತ್ತು ಆಚರಣೆವೊಂದು ಆ ದೇವರು ಮತ್ತು ದೇವತೆಗಳಿಗೆ ಬಹು ಇಷ್ಟವಾದ ಹಾಗೂ ಪರಿಪೂರ್ಣವಾದ ಸತ್ಯವಾಗಿದೆ. ಆದರೆ ನಮ್ಮ ದೇವರ ಹೆಸರಿನ ಕಲ್ಲನೆ ಮಾತ್ರ ಬಹುಮೂಢ ನಂಬಿಕೆಯಿಂದ ಕೂಡಿದ್ದವು ಆಗಿವೆ. ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದರೂ ದೇವರ ಹೆಸರಿನಲ್ಲಿ ನಾವು ಸಾಕಷ್ಟು ಕಂಧಾಚರಣೆಯಲ್ಲಿ ತೊಡಗಿದ್ದೇವೆ. ದೇವರ ಇಷ್ಟಪಡುವ ಪರಿಶುದ್ಧ ಭಕ್ತಿಯನ್ನು ಹಾಗೇ ಕೆಸರಿಗೆ ಎಸದಿದ್ದೇವೆ.

# ಇದಕ್ಕೆ ಒಂದು ಉದಾಹರಣೆ ನೋಡೋಣ ಈಗ..! ಅದು ಸವದತ್ತಿ ಎಲ್ಲಮ್ಮನ ಹೆಸರಲ್ಲಿ ನಾವು ಆಚರಿಸುತ್ತಿರುವ ಕಂದಾಚರಣೆ ಕತೆ. ಅದು ಹೀಗಿದೆ ನೋಡಿ..!

  • # ಎಲ್ಲಮ್ಮನ ಹೆಸರಲ್ಲಿಯ ವಿಶಿಷ್ಟ ಹರಕೆಗಳು ಮತ್ತು ನಂಬಿಕೆಗಳು —
  • # ಮಾನಸಿಕ ಶಿಕ್ಷೆಯ ಹರಕೆಗಳು —

ದೈಹಿಕ ಶಿಕ್ಷೆಯ ಹರಕೆಯಲ್ಲಿ ನೋಡಿದ ಶಿಕ್ಷೆಗಳು ಮಾನಸಿಕವಾಗಿ ಪರಿಣಾಮ ಬೀರುವಿದಲ್ಲವೆಂದಲ್ಲ. ಆದರೂ ಅದಕ್ಕಿಂತ ಹೆಚ್ಚು ಅಂಶಗಳನ್ನೊಳಗೊಂಡ ಮಾನಸಿಕ ಹರಕೆಯನ್ನು ಇಲ್ಲಿ ಪ್ರತ್ಯೇಕಿಸಿ ನೋಡಲಾಗಿದೆ. ಉಟಗಿ, ಮುತ್ತು ಕಟ್ಟಿಸಿಕೊಳ್ಳುವುದು, ಬಸವಿಯಾಗುವುದು, (ಮುತ್ತು ಕಟ್ಟಿಸಿಕೊಂಡವರೆಲ್ಲ ಬಸವೆಯರಲ್ಲ) ಗರ್ಧಾನಿ ಮುಂತಾದವುಗಳು. ಇವುಗಳಲ್ಲಿ ಕೆಲವು ಅಲ್ಪಾವಧಿಯವುಗಳಾದರೆ ಇನ್ನುಳಿದವು ದೀರ್ಘಾವಧಿಯವುಗಳು.

ಶಿಕ್ಷಕರ ಪ್ರಕ್ರಿಯೆ ತಾತ್ಕಾಲಿಕ ಕೈಬಿಡುವಂತೆ ಸಚಿವರಿಗೆ ಮನವಿ| Teacher appointment process

ಬೆತ್ತಲೆಯಾಗಿ ಅಥವಾ ಬೆತ್ತಲೆಯಾದ ದೇಹಕ್ಕೆ ಬೇವಿನ ಸೊಪ್ಪಿನಿಂದ ದೇಹದ ಕೆಲವು ಅಂಗಾಂಗಳನ್ನು ಮುಚ್ಚಿಕೊಂಡು ಭಕ್ತಿಯಿಂದ ದೇವರಿಗೆ ಒಪ್ಪಿಸುವ ಹರಕೆಯಿದು. ಎಲ್ಲಮ್ಮನ ಕಥೆಯಲ್ಲಿ ಈ ಹರಕೆಗೆ ಒಂದು ವಿಶಿಷ್ಟವಾದ ಹೇಳಿಕೆಯಿದೆಯಂತೆ. ಪರಶುರಾಮ ಕ್ಷತ್ರಿಯ ವೀರರನ್ನು ಮಾತ್ರ ಕೊಂದು ಅವರ ಸ್ತ್ರೀಯರನ್ನು ಮತ್ತು ಮಕ್ಕಳನ್ನು ಜೀವಂತ ಬಿಟ್ಟಾಗ ಅವರೆಲ್ಲರೂ ಬೆತ್ತಲೆಯಾಗಿಯೇ ರೇಣುಕಾ (ಎಲ್ಲಮ್ಮ) ದೇವಿಯ ಆಶ್ರಯ ಪಡೆಯಲು ಬರುತ್ತಾರೆ. ಆಗ ಪರಶುರಾಮನು ಬೇವಿನ ಎಲೆಯನ್ನು ಕೊಟ್ಟು ಅದರಿಂದ ದೇಹ ಮುಚ್ಚಿಕೊಂಡು ತಾಯಿಯನ್ನು ಕಾಣಲು ಹೋಗುವಂತೆ ತಿಳಿಸುತ್ತಾನೆ. ಹೀಗೆಯೇ ರೇಣುಕಾದೇವಿಯಿಂದ ರಕ್ಷಣೆ ಪಡೆಯಲು ಅವರು ಅವಳನ್ನು ಕುರಿತು ಹಾಡುವದು, ಕುಣಿಯುವದು ಮಾಡುತ್ತಾರೆ. ಅದೇ ಮುಂದೆ ಡಾಂಭಿಕವಾದ ಆಚರಣೆ ಆಯಿತು. ಪರಶುರಾಮನ ಮತ್ತು ರೇಣುಕಾ ದೇವಿಯ ಮೂಲ ಉದ್ದೇಶವು ಮರೆತುಹೊಯಿತು.
ಆ ಡಾಂಭಿಕವಾದ ಆಚರಣೆಗಳು ಕೆಳಗಿನಂತೆ ಇವೆ ನೋಡಿ…

  • # ಉಟಗಿಯ ಹರಕೆಗಳಲ್ಲಿ ಪ್ರಮುಖವಾಗಿ ನಾಲ್ಕು ರೀತಿಗಳಿವೆ —
  • ೧) ಬೆತ್ತಲೆ ಉಟಗಿ.
  • ೨) ಗಂಧದ ಉಟಗಿ.
  • ೩) ಬೇವಿನ ಉಟಗಿ.
  • ೪) ವಸ್ತ್ರಬೇವಿನ ಉಟಗಿ.
  • # ಈ ಉಟಗಿಗಳ ವಿವರ ಹೀಗಿವೆ. —

೧) ಹರಕೆ ಹೊತ್ತವರು ಬೆತ್ತಲೆಯಾಗಿ ತಾವು ಬೇಡಿಕೊಂಡ ಸ್ಥಳದಿಂದ ನಡೆದುಬಂದು ದೇವಿಯ ಗುಡಿಗೆ ಪ್ರದಕ್ಷಿಣೆ ಹಾಕಿ ಹರಕೆ ಒಪ್ಪಿಸುವದು ಬೆತ್ತಲೆ ಉಟಗಿ. ಈ ದಿಗಂಬರ ಹರಕೆ ನಡೆಯುವದು ನಸುಕಿನಲ್ಲಿ. ಹಗಲಿನಲ್ಲಿ ಆಚರಿಸುವುದಿಲ್ಲ. ಜೋಗುಳ ಬಾವಿಯಲ್ಲಿಯೇ ಇದು ಜರುಗುವುದು ಅಧಿಕ. ಇದು ಬೆತ್ತಲೆ ಉಟಗಿ. ಹಾಗೆಯೇ ಡಾಂಭಿಕವಾದ ನಂಬಿಕೆ ನಮ್ಮದಾಗಿದೆ ಈಗ.

ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಜನ್ಮದಿನಾಚರಣೆ

೨) ಹೆಸರು ಗಂಧದ ಉಟಗಿಯಾದರೂ ಇಲ್ಲಿ ಗಂಧದ ಯಾವುದೇ ವಸ್ತು ಬಳಸಲಾಗುವದಿಲ್ಲ. ಬೇವಿನ ಕಡ್ಡಿಗಳಿಗೆ ಗಂಧದ ಕಡ್ಡಿಯೆಂದು ಕರೆಯುತ್ತಾರೆ. ಬೇವಿನ ಕಡ್ಡಿ ಎಂದು ಕರೆಯಬಾರದೆಂಬ ನಂಬಿಕೆಯೂ ಈಗ ನಮ್ಮದಾಗಿದೆ. ಬೇವಿನ ಎಲೆಯನ್ನು ಸವರಿ ತೆಗೆದಾಗ ಉಳಿಯುವ ಕಡ್ಡಿಗಳನ್ನು ಒಟ್ಟಾಗಿ ಜೋಡಿಸಿ ದಾರದಿಂದ ಕಟ್ಟಲಾಗುತ್ತದೆ. ಇದನ್ನು ಸ್ತ್ರೀಯರ ಮತ್ತು ಪುರುಷರ ಸೊಂಟದ ಭಾಗಕ್ಕೆ ಮಾತ್ರ ಕಟ್ಟುತ್ತಾರೆ. ಇತ್ತಿತ್ತಲಾಗಿ ಸ್ತ್ರೀಯರ ಎದೆಗೂ ಕಟ್ಟಲಾಗುತ್ತದೆ. ಇಲ್ಲವೆ ಅವರು ಕೈಗಳಿಂದಲೇ ಎದೆ ಮುಚ್ಚಿಕೊಳ್ಳುತ್ತಾರೆ. ಇದು ಗಂಧದ ಉಟಗಿಯಂತೆ.

೩) ಬೇವಿನ ತಪ್ಪಲಿನ ಸಣ್ಣ ಸಣ್ಣ ಟೊಂಗೆಗಳನ್ನು ದಾರದಿಂದ ಅಥವಾ ಕುಪ್ಪಸದ ಅರಿವೆಯಿಂದ ಕಟ್ಟಿ, ‘ತಟ್ಟು’ (ಚಾಪೆ ಆಕಾರ ಮಾಡಿದ್ದು) ತಯಾರಿಸುತ್ತಾರೆ. ಸೊಂಟ-ಎದೆಯ; ಎರಡೂ ಭಾಗಗಳನ್ನು ಈ ಬೇವಿನ ತಟ್ಟಿನಿಂದ ಕಟ್ಟಿಕೊಂಡು ದೇವಿಯ ಗುಡಿಗೆ ನಡೆದು ಹರಕೆಯನ್ನು ಒಪ್ಪಿಸುತ್ತಾರೆ. ಇಲ್ಲಿ ಬೇವಿನ ತೊಪ್ಪಲು ಬಳಕೆಯಾಗಿರುವುದರಿಂದ ಈ ಹರಕೆಯನ್ನು ‘ಬೇವುಡುವದು’ ಎಂದೂ ಕರೆಯುತ್ತಾರೆ. ಇದು ಬೇವಿನ ಉಟಗಿಯಾಗಿದೆ.

೪) ಮೇಲೆ ಹೇಳಲಾದ ಉಟಗಿಗೆ ಇದು ತೀರ ಭಿನ್ನವಾದದ್ದೇನಲ್ಲ. ಅಲ್ಲಿ ಬಳಸಲಾಗುವ ಬೇವಿನ ತಟ್ಟನ್ನೇ ಇಲ್ಲಿ ಬಳಸಲಾಗುತ್ತದೆ. ಹೆಚ್ಚಿನ ವಿಶೇಷತೆ ಎಂದರೆ ಉಟಗಿ ದೇಹಕ್ಕೆ ಕಟ್ಟಿಕೊಂಡ ಮೇಲೆ ಹೊಸ ಅರಿವೆಯನ್ನು ಹೊದ್ದು ಹೋಗುವದಿದೆ. ಇದರಲ್ಲಿ ಶರೀರದ ಅರ್ಧ ಭಾಗವನ್ನು ಮರೆಮಾಡಿಕೊಂಡು ಹರಕೆ ಒಪ್ಪಿಸುವುದನ್ನು ಕಾಣುತ್ತೇವೆ. ಕೆಲವು ಸಲ ಹೊಸ ಕುಪ್ಪಸಗಳನ್ನು ತೊಡುತ್ತಾರೆ. ಆದರೆ ಆ ಕುಪ್ಪಸಕ್ಕೆ ಕಂಕುಳ ಅರಿವೆ (ಬಗಲಲ್ಲಿ ಹಚ್ಚಿ ಹೊಲೆಯುವ ತ್ರಿಕೋನಾಕಾರದ ಹೆಚ್ಚಿನ ಅರಿವೆ) ಹಚ್ಚದೆ ತೊಡಬೇಕೆನ್ನುವ ನಂಬಿಕೆಯಿದ್ದು, ಅದನ್ನು ಚಾಚೂ ತಪ್ಪದೆ ಆಚರಿಸುತ್ತಾರೆ ನಮ್ಮ ಮೂಢಭಾವದ ಜನರು. ಇದು ವಸ್ತ್ರಬೇವಿನ ಉಟಗಿ.

ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಜನ್ಮದಿನಾಚರಣೆ

ಮೇಲೆ ಹೇಳಿದ ಹರಕೆಗಳಲ್ಲಿ ಬೆತ್ತಲೆ ಹರಕೆಯನ್ನು ನಸುಕಿನಲ್ಲಿ ಮಾಡಿ ಮುಗಿಸಿದರೆ ಉಳಿದ ಹರಕೆಗಳನ್ನು ಮುಂಜಾನೆ ಅಥವಾ ಸಾಯಂಕಾಲ ಸಲ್ಲಿಸುತ್ತಾರೆ. ಆದರೆ ಈ ಹರಕೆಗಳು ನಸುಕಿನಲ್ಲಿ ಸಲ್ಲಿಸಬಾರದೆಂಬುದೇನಿಲ್ಲ. ದೇವಿಯ ವಾರಗಳಾದ ಮಂಗಳವಾರ, ಶುಕ್ರವಾರಗಳಂದು ಇವು ನಡೆಯುತ್ತಿದ್ದು, ಮುತ್ತೈದೆ ಹುಣ್ಣಿಮೆಯಲ್ಲಿ ಜರುಗುವುದು ಅಧಿಕವಾಗಿದೆ.

ಈ ಆಚರಣೆಗಳಿಗೆ ಬಂಧು-ಬಳಗದವರು ಹರಕೆ ಹೊತ್ತವರಿಗೆ ಉಡುಗೊರೆಗಳನ್ನು ತಂದಿರುತ್ತಾರೆ. ವಾದ್ಯ, ಹಾಡುಗಳೊಂದಿಗೆ ಜೋಗುಳಬಾವಿ ಸತ್ಯವ್ವ ಎಂಬ ಮತ್ತೊಬ್ಬ ದೇವಿಯ ಸಮ್ಮುಖದಲ್ಲಿ ಅಥವಾ ಹರಕೆ ಹೊತ್ತವರು ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ಜರುಗುತ್ತದೆ. ಬೆತ್ತಲೆಯಾಗುವಾಗ, ಉಟಗಿ ತೊಡುವಾಗ, ತಟ್ಟು ಬಿಚ್ಚುವಾಗ ಮಾತಂಗಿಯರು ಇರಲೇಬೇಕು. ಮಾತಂಗಿಯರೇ ಉಟಗಿ ಉಡಿಸುವ ಮುನ್ನ ಅವರ ಮುಖವನ್ನು ತೊಳೆದು ಮುಖ ಕೈಗಳಿಗೆ ಭಂಡಾರ ಹಚ್ಚಿ ಪೂಜೆ ಮುಗಿಯುವವರೆಗೆ ಮಾತಂಗಿ ಇರಲೇಬೇಕೆಂಬ ನಿಯಮವಿದೆ . ನಂತರದಲ್ಲಿ ಇವಳಿಗೆ ‘ಚಾಜ’ವೆಂದು ಹಣ ಅಥವಾ ಉಡುಗೊರೆ ಕೊಡುತ್ತಾರೆ. ಚಾಜ ಕೊಡದೇ ಹೋದಲ್ಲಿ ಉಟಗಿ ಬಿಡಗೊಡುವುದಿಲ್ಲ.

# ಯಾವುದೇ ಬಗೆಯ ಉಟಗಿಯಾದರೂ ಆಚರಣೆಯಲ್ಲಿ ಬೆತ್ತಲೆಯ ಆಶಯಕ್ಕಿಂತ ಬೇರೇನೂ ಕಾಣುವುದಿಲ್ಲ. ಬೇವಿನ ತಟ್ಟು ಮಾತಂಗಿಯರೇ ಮಾಡಿಟ್ಟಿರುತ್ತಾರೆ. ಹರಕೆ ಹೊತ್ತವರು ಅವರಿಗೆ ಸೂಚನೆಯನ್ನು ಕೊಟ್ಟರೆ ಸಾಕು ತಟ್ಟು ಕಟ್ಟುವದು, ಬಿಚ್ಚುವದು, ಬಿಚ್ಚಿದ್ದನ್ನು ಹೊಳೆಗೆ ಕಾಣಿಸುವದು — ಈ ಎಲ್ಲಾ ಕೆಲಸ ಅವರೇ ನಿರ್ವಹಿಸುತ್ತಾರೆ. ಪ್ರಧಾನವಾಗಿ ಇಲ್ಲಿ ಬೇವು ಬಳಕೆಯಾಗುತ್ತದೆ. ಬೆತ್ತಲೆ ಉಡುಗೆಯಲ್ಲಿಯೂ ಕೆಲವರು ಬಾಯಿಯಲ್ಲಿ ಬೇವಿನ ತೊಪ್ಪಲನ್ನು ಹಿಡಿಯುತ್ತಾರೆ. ಆದರೆ ಉಳಿದೆಲ್ಲ ಉಟಗಿಗಳಲ್ಲಿ ತಲೆಯ ಮೇಲೆ ಕೈಯಲ್ಲಿ ಬಾಯಿಯಲ್ಲಿ ಬೇವು ಹಿಡಿಯಲೇ ಬೇಕು ಎನ್ನುವ ನಿಯಮವಿದೆ. ಇಲ್ಲಿ ಹೆಣ್ಣು ಗಂಡು ಎಂಬ ಭೇದ-ಭಾವವಿಲ್ಲದೇ ಹರಕೆಗಳು ಜರುಗುತ್ತವೆ. ಹೆಣ್ಣು ಮಕ್ಕಳು ಉಟ್ಟರೆ ‘ಹೆಣ್ಣುಟಗಿ’ ಎಂದೂ ಗಂಡು ಉಟ್ಟರೆ ‘ಗಂಡುಟಿ’ ಎಂದು ಹೆಸರಿಸುತ್ತಾರೆ.

ಈ ಬಗೆಯ ಹರಕೆಗಳನ್ನು ಎರಡು-ಮೂರು-ಐದು ವರ್ಷಗಳವರೆಗೆ ಒಪ್ಪಿಸುವೆ ಎಂದು ಬೇಡಿಕೊಂಡು ಪ್ರತಿ ವರ್ಷ ಒಪ್ಪಿಸುವುದು ಕಂಡು ಬರುತ್ತದೆ. ಈ ಬೇವುಡುವ ಸಂಪ್ರದಾಯ ಕೆಲವು ಮನೆಗಳಲ್ಲಿ ತಲೆತಲಾಂತರವಾಗಿ ನಡೆದುಕೊಂಡು ಬಂದಿರುವುದನ್ನು ಕಾಣುತ್ತೇವೆ. ಭಾರತ ಹಾಗೂ ಬನದ ಹುಣ್ಣಿಮೆಗಳಲ್ಲಿ ದೇವಿ ಮತ್ತೈದೆಯಾಗಿರುತ್ತಾಳೆ ಎಂಬ ನಂಬಿಕೆ ಮತ್ತು ಭಾವನೆಯಿಂದ ಈ ಹರಕೆ ಒಪ್ಪಿಸಲಾಗುತ್ತದೆ. ಆಗ ಜೋಗತಿಯರು ಛತ್ತು ಹೊಡೆದು (ಜೋಗುಳ ಬಾವಿಯಲ್ಲಿ) ಬೇವಿನ ತಟ್ಟನ್ನು ಇಡುವದಾಗಿ ಹೇಳುತ್ತಾರೆ. ಇತ್ತೀಚೆಗೆ ಉಟಗಿ ಕಡಿಮೆಯಾಗುತ್ತಾ ಬರುತ್ತಿದೆ.

ಇದೂ ಒಳ್ಳೆಯ ಬೆಳವಣಿಗೆಯೇ ಆಗಿದೆ. ಏಕೆಂದರೆ ದೇವರಿಗೆ ಮತ್ತು ದೇವತೆ ಎಂಬ ನಮ್ಮ ನಂಬಿಕೆಗೆ ಬೇಕಾದದ್ದು ಪರಿಶುದ್ಧ ಮನಸ್ಸಿನ ಆಂತರಿಕ ಪೂಜೆ. ಅಂದರೆ ಒಳಮನಸ್ಸಿನ ಭಾವ ಹಾಗೂ ಮನಸ್ಸು.

ಕಲಬುರಗಿ ಪೇಟೆ ಧಾರಣೆ

ಈ ಬಗೆಯ ಹರಕೆ ಎಲ್ಲಮ್ಮನಿಗಷ್ಟೇ ಮೀಸಲಿಲ್ಲ. ದ್ಯಾಮವ್ವ, ದುರಗವ್ವ, ಮಾರಮ್ಮ ಮುಂತಾದ ಕುಲದೇವತೆಗಳಿಗೂ ಅವುಗಳನ್ನು ಅರ್ಪಿಸುವದು ಕಂಡು ಬರುತ್ತದೆ. ಮಲೆನಾಡಿನಲ್ಲಿ ಈ ಸಂಪ್ರದಾಯವಿದ್ದು ಅಲ್ಲಿ ಲಕ್ಕಿಯಸೊಪ್ಪುಬಳಸುವದು ಕಂಡುಬರುತ್ತಿದ್ದು ಅದಕ್ಕೆ ದೇವಕಾರ್ಯ(ದೇಕಾರ್ಯ)ವೆಂದೂ ಬೇವುಡವದೆಂದೂ ಕರೆಯಲಾಗುತ್ತಿದೆ.

ಪ್ರಾಚೀನ ಕಾಲದಲ್ಲಿ ಆದಿಮಾನವ ತನ್ನ ಮಾನ ಮುಚ್ಚಿಕೊಳ್ಳುವುದಕ್ಕೆ ಪಟ್ಟ ಪ್ರಯತ್ನಗಳ ಪಳೆಯುಳಿಕೆಯೇ ಇಂದಿನ ದಿನದಲ್ಲಿ ಬೇವುಡುವ ಪದ್ದತಿಯಾಗಿ ಉಳಿದುಕೊಂಡು ಬಂದ್ದಿದೆಂದು ತೋರುತ್ತದೆ. ಎಲ್ಲಮ್ಮನ ಗುಡಿಯ ಮೂರ್ತಿಯ ಹಿಂಭಾಗದಲ್ಲಿ ‘ಕಾರಿಕಂಟಿ’ ಇದೆಯೆಂದು ಹೇಳಲಾಗುತ್ತದೆ. ಬೆತ್ತಲೆಯಾಗಿ ಬೇವಿನ ಎಲೆಗಳಿಂದ ಉಟಗಿ ಉಡುವ ಸಂಪ್ರದಾಯ ವೃಕ್ಷದೇವತೆಯ ಮೂಲವನ್ನಲ್ಲದೇ ಬೇರೇನೂ ಹೇಳಲಾರದು. ಹೀಗೆ ಎಲ್ಲಮ್ಮನ ಒಂದು ಸ್ವರೂಪ ‘ಮರದಮ್ಮ’ವೂ ಹೌದೆಂದು ಕೆಲವರ ಅಭಿಪ್ರಾಯ.

ಅನುಕ್ರಮವಾಗಿ ನೋಡಲಾದ ಉಟಗಿಯ ನಾಲ್ಕು ಬಗೆಗಳು ನಾಗರಿಕತೆಯ ಬೆಳವಣಿಗೆಯ ಘಟ್ಟಗಳನ್ನು ಸೂಚಿಸುತ್ತವೆ. ಇವು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತ ಬಂದುದರಿಂದ ಅಂದಿನಿಂದ ಇಂದಿನವರೆಗೆ ಜೀವಂತವಾಗಿ ಉಳಿದುಕೊಂಡು ಬಂದಿವೆ. ಈ ಹರಕೆ ಮೂಲತಃ ಸಂತಾನ ಫಲಕ್ಕಾಗಿಯೇ ಹುಟ್ಟಿಕೊಂಡಿವೆಯೆಂದೂ ಹೇಳುತ್ತಾರೆ. ಮಲೆನಾಡಿನಲ್ಲಿ ಮಕ್ಕಳಾಗದೆ ಹೋದಾಗ ದಂಪತಿಗಳೀರ್ವರು ಉಟಗಿಯುಟ್ಟು ಹರಕೆ ಒಪ್ಪಿಸಿ ನಂತರ ನಾಗಪ್ಪನ ಹುತ್ತಕ್ಕೆ ಹಾಲೆರೆದು ಬರುವ ಸಂಪ್ರದಾಯವಿದೆ.

ಬೆಂಗಳೂರಿನ ಸೌಲಭ್ಯವಂಚಿತ ಮಕ್ಕಳ ಡಿಜಿಟಲ್ ಕನಸುಗಳ ಸಾಕಾರಕ್ಕೆ ಅಪ್ಪಾರಿಯೊ ರಿಟೇಲ್ ಪ್ರೈವೇಟ್ ಲಿಮಿಟೆಡ್ ಸಾರಥ್ಯ

ಗಂಡು ಹೆಣ್ಣಾಗುವುದು, ಹೆಣ್ಣು ಗಂಡಾಗುವದು ಗರ್ಧಾನಿ ಹರಕೆಯ ಮೂಲ ಆಶಯವಾಗಿದೆ ಮೂಢವಾದ ಆಚರಣೆಯಾಗಿದೆ. ಅಂದರೆ ಗಂಡಸು ಬಿಳಿಸೀರೆ, ಕುಪ್ಪಸ, ಬಳೆ, ಹೆಣ್ಣಿನ ಲಕ್ಷಣಕ್ಕೆ ಅನ್ವಯಿಸುವ ಎಲ್ಲ ವಸ್ತುಗಳನ್ನು ಧರಿಸುವುದು. ಅದೇ ರೀತಿ ಹೆಂಗಸಾದವಳು ಬಿಳಿ ಧೋತರ (ಪಂಚೆ) ಅಂಗಿ ಧರಿಸುವುದು. ಇದಕ್ಕೆ ‘ಬಿಳಿ ಉಟಗಿ’ ಎಂದು ಕರೆಯುತ್ತಾರೆ. ಆಚರಣೆಯ ಬಗೆಯು ಪೂರ್ತಿಯಾಗಿ ಉಟಗಿಯನ್ನೇ ಹೋಲುತ್ತದೆ.

ವಸ್ತ್ರ ಬೇವುಟಗಿಯಲ್ಲಿ ಅರ್ಧವಸ್ತ್ರ ಧರಿಸುತ್ತಿದ್ದರೆ ಇಲ್ಲಿ ಪೂರ್ತಿಯಾಗಿ ವಸ್ತ್ರ ಧರಿಸುತ್ತಾರೆ. ಉಟಗಿಗಳ ಹಿನ್ನೆಲೆಯಲ್ಲಿಯೇ ಇದನ್ನು ಗಮನಿಸಿದಾಗ ಇದು ಉಟಗಿಯ ಕೊನೆಯ ಬೆಳವಣಿಗೆ ಘಟ್ಟವೇನೋ ಎನಿಸುತ್ತದೆ. ಆದರೆ ವಿಶೇಷ ಬದಲಾವಣೆ ಎಂದರೆ ಗಂಡು-ಹೆಣ್ಣಾಗುವದು, ಹೆಣ್ಣು-ಗಂಡಾಗುವದು ಹಾಗೂ ಬೇವಿನ ಬಳಕೆ ಇಲ್ಲದಿರುವದು. ಇವೆಲ್ಲ ಎಲ್ಲಮ್ಮನಿಗೆ ಜರೆದು, ಅವಳಿಂದ ಹಣ್ಣುಗಾಯಿ-ನೀರುಗಾಯಿ ಮಾಡಿಸಿಕೊಂಡು ಸೀರೆಯುಟ್ಟು ದೇವಿಯಲ್ಲಿಗೆ ಬಂದ ಕಥೆಗೆ ಹೋಲಿಸುತ್ತಾರೆ.

ಮುತ್ತು ಕಟ್ಟುವುದು ಒಂದು ಮದುವೆ ಮಾಡಿದಂತೆಯೇ ಸರಿ. ಪೂಜಾ ವಿಧಾನಗಳೆಲ್ಲಾ ಐದು ಜನ ಜೋಗತಿಯರನ್ನು ಒಳಗೊಂಡಿದ್ದು, ಉಟಗಿಯಲ್ಲಿಯಂತೆ ಜರಗುತ್ತವೆ. ಹೆಚ್ಚಿನ ಅಂಶವೆಂದರೆ ಹೆಣ್ಣು ಋತುಮತಿಯಾಗುವುದಕ್ಕಿಂತ ಪೂರ್ವದಲ್ಲಿಯೇ ಈ ಕಾರ್ಯ ನಡೆಯಬೇಕು. ಹೆಚ್ಚಾಗಿ ನಡೆಯುವದು 5-9 ನೇ ವರ್ಷಗಳಲ್ಲಿ. ಎಲ್ಲಮ್ಮನ ವಂಶಜನೆಂದು ಹೇಳುವ ಸ್ಥಾನಿಕನು (ತಾನಿಕ) ದರ್ಶನ ಮಣಿ ಅಥವಾ ಮುತ್ತು ಎಂದು ಹೇಳುವ ಐದು ಹಾಲು (ಬಿಳಿ) ಮಣಿಗಳನ್ನು, ಐದು ಕೆಂಪು ಮಣಿಗಳನ್ನು ದೇವಿಯ ಮುಖ, ಅರಸನಪಾದ(ಚರ್ಮದಿಂದ ಮಾಡಿದ್ದು) ಎಲ್ಲವನ್ನು ದಾರದಲ್ಲಿ ಪೋಣಿಸಿ ಕೊರಳಲ್ಲಿ ಕಟ್ಟುತ್ತಾನೆ. ಈ ಸಂದರ್ಭದಲ್ಲಿ ಸಾಸೀ ಹುಯ್ಯುವುದು, ಉಡಿ ತುಂಬುವದು ಎಲ್ಲವೂ ಮದುವೆಯ ಸಂದರ್ಭದಲ್ಲಿ ನಡೆಯುವಂತೆ ನಡೆಯುತ್ತದೆ. ಆಕೆಯ ಅಕ್ಕ-ಪಕ್ಕದಲ್ಲಿ ಪಡಲಗಿ (ಹಡ್ಲಗಿ, ಹಡಲಗಿ) ಇದ್ದು ಅದರಲ್ಲಿ ಹೋಳಿಗೆ. ಕಡಬು, ಬದನೆಕಾಯಿ, ಗಜ್ಜರಿ, ಉಳ್ಳಾಗಡ್ಡಿ, ಗುಗ್ಗರಿ ಮುಂತಾಗಿ ಹಾಕಿರುತ್ತಾರೆ.

ಮಂಗಿಹಾಳ: ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ನೂತನ ಗ್ರಾಮ ಶಾಖೆ ರಚನೆ

ಕೊನೆಗೆ ಐದು ಜನ ಜೋಗತಿಯರು ಸೇರಿ ಕನಕದಾರತಿ ಮಾಡಿ ತಟ್ಟೆಯಲ್ಲಿಟ್ಟು ಅವಳ ತಲೆಯ ಮೇಲೆ ಹೊರಿಸಿ ಅವಳಿಂದ ಪ್ರಮಾಣವನ್ನು ತೆಗೆದುಕೊಳ್ಳುತ್ತಾರೆ. ಉದಾ: (೧) ಹಸಿದಿರುವೆನೆಂದರೆ ಊಟಕ್ಕೆ ಕೊಡಬೇಕು. (೨) ಬಿಸಿಲಲ್ಲಿ ಇದ್ದರೆ ನೆರಳಿಗೆ ಕರೆಯಬೇಕು. (೩) ಗಂಡ ಹೆಂಡತಿಯ ಭೋಗದೃಶ್ಯ ನೋಡಬಾರದು. ನೋಡಿದರೂ ಯಾರಿಗೂ ಹೇಳಬಾರದು. (೪) ಸುಳ್ಳು ಹೇಳಬಾರದು. (೫) ಬರಿಗಾಲಿನಿಂದ ನಡೆಯಬೇಕು. (೬) ಸತ್ತ ಸುದ್ದಿ ಕೇಳಿದರೆ ಊಟ ಮಾಡಬಾರದು. (೭) ಸಿಳ್ಳು ಹಾಕಿದರೆ ಕೊಳಲು ಊದಿದರೆ ಊಟ ಮಾಡಬಾರದು. (೮) ಎಂಜಲು ತಿನ್ನಬಾರದು. (೯) ಸೇಡು ತೀರಿಸಿಕೊಳ್ಳಬಾರದು. (೧೦) ಯಾರಿಂದಲೂ ಒದಿಸಿಕೊಳ್ಳಬಾರದು. ಹೀಗೆಯೇ ಕೆಲವು ಸೂಕ್ತವಾದ ಮತ್ತು ಕೆಲವು ಅಸೂಕ್ತವಾದ ಆಚರಣೆಗಳಿವೆ..!

ಈ ನಿಯಮಗಳಲ್ಲಿ ಯಾವುದಾದರೊಂದನ್ನು ಮೀರಿದರೆ ಕೊರಳ ಮುತ್ತುಗಳನ್ನೆಲ್ಲಾ ಹರಿದೊಗೆದು ಆರಂಭದಲ್ಲಿಯಂತೆ ಮತ್ತೆ ಪೂಜೆ ಸಲ್ಲಿಸಿ ಮುತ್ತನ್ನು ಪುನಃ ಕಟ್ಟಿಕೊಳ್ಳಬೇಕಾಗುತ್ತದೆ.

ಮುತ್ತು ಕಟ್ಟಿಕೊಂಡವರೆಲ್ಲ ಬಸವಿಯರಲ್ಲ. ಬಸವಿಯರಿಗೆ ಈ ಮುತ್ತು ಕಟ್ಟುವ ಕಾರ್ಯ ಮುಗಿದ ನಂತರದಲ್ಲಿ ಬರುತ್ತದೆ. ‘ಹೆಣ್ಣು ಮಾಡುವದು’ ಅಥವಾ ‘ಕೈ ಹಿಡಿಯುವದು’. ಇದು ಪ್ರತ್ಯೇಕ ವಿಧಿಯೇ ಆಗಿರುತ್ತದೆ. ಯಾರಾದರೊಬ್ಬನ ಜೊತೆಗೆ ಕೂಡಿಕೆಯಾಗುತ್ತಿದ್ದು, ಆ ಸಂದರ್ಭದಲ್ಲಿ ಕೆಲವು ಸಾಮಾನ್ಯ ಪೂಜಾ ವಿಧಿಗಳು ಹಡ್ಲಿಗಿಯೊಂದಿಗೆ ಜರಗುತ್ತವೆ. ಇದು ಮುಗಿದ ನಂತರ ಆಕೆ ಬಸವಿಯಾದಂತೆ. ಮೊದಲು ಕೂಡಿದ ವ್ಯಕ್ತಿ ಗಂಡನೆಂದು ತಿಳಿದು ಅವನಿಂದ ಯಾವುದೇ ಬಗೆಯ ಸಂಭಾವನೆ ಬಯಸಬಾರದೆಂಬ ನಂಬಿಕೆಯಿದೆ.

ಹರಕೆ ಹೊತ್ತು ಮುತ್ತು ಕಟ್ಟಿಸಿಕೊಂಡವರ ಮನೆತನದಲ್ಲಿಯ ದೇವಿಯ ಪಾದಗಳು ವಂಶಪಾರಂಪರ್ಯವಾಗಿ ಒಬ್ಬರ ಕೊರಳಿಂದ ಇನ್ನೊಬ್ಬರ ಕೊರಳಿಗೆ ಸಾಗುತ್ತ ಮನೆತನೆದ ಆಸ್ತಿಯಂತೆ ಉಳಿದುಕೊಂಡು ಬರುತ್ತದೆ. ಆದರೆ ಅವರ ಮನೆಯಲ್ಲಿ ಯಾರೂ ಯಾವುದಕ್ಕಾಗಿ ಹರಕೆ ಹೊತ್ತು ಪಾದಗಳನ್ನು ಕಟ್ಟಿಸಿಕೊಂಡರು ಎಂಬ ವಿಷಯವೇ ಗೊತ್ತಿರುವದಿಲ್ಲ. ಅಷ್ಟು ತಲೆಮಾರುಗಳು ಕಳೆದಿರುತ್ತವೆ. ಆದರೂ ಮಣಿಗಳು ಉಳಿದುಕೊಂಡು ಬಂದಿರುತ್ತವೆ. ಮನೆಯಲ್ಲಿ ಮುತ್ತು ಕಟ್ಟಿಕೊಳ್ಳಲು ವಂಶದವರು ಇಲ್ಲದೇ ಹೋದಾಗ ಜಗಲಿಯ ಮೇಲೆ ಇಡುತ್ತಾರೆ. ಮುತ್ತು ಕಟ್ಟಿಕೊಂಡವರೆಲ್ಲ ಜೋಗಾಡಬೇಕು. ಆದರೆ ಹರಕೆ ಹೊತ್ತು ಬಸವಿತನಕ್ಕೆ ನಿಲ್ಲಿಸಿದ್ದರೆ ಒಂದೇ ತಲೆಗೆ ನಿಂತು ಹೋಗುತ್ತದೆ. ಇನ್ನು ಕೆಲವರು ಇದನ್ನು ಸಂಪ್ರದಾಯ ಎಂದು ನಡೆಸಿಕೊಂಡು ಬಂದಿರುವುದು ಕಂಡುಬರುತ್ತದೆ. ಹೀಗೆಯೇ ಅಸ್ವಸ್ಥತೆ ಮನಸ್ಸಿನ ಆಚರಣೆಗಳು ಇವೆ ಎಂದೇ ನನ್ನ ನಂಬಿಕೆ.

ವಿಶ್ವಾರಾದ್ಯರು ಅಷ್ಟಸಿದ್ಧಿಗಳನ್ನು ಕಟ್ಟಿ ಆಳಿದ ದಿಟ್ಟ ಯೋಗಿಯಾಗಿದ್ದರು: ಗಂಗಾಧರ ಶ್ರೀ

ಮುತ್ತು ಕಟ್ಟುವ ಅಥವಾ ದೀಕ್ಷೆ ನೀಡುವ ಸಮಯದಲ್ಲಿ ಮಾಡುವ ಕನಕದಾರತಿಯೇ ತನಾರ್ತಿ ಹರಕೆ. ಗೋದಿ ಹಿಟ್ಟಿನಿಂದ ಮಾಡಲಾದ ಹಣತೆಯಲ್ಲಿ ದೀಪ ಉರಿಸುವದು ಇದರ ಸ್ವರೂಪ. ಇಲ್ಲಿ ಇಪ್ಪತ್ತೈದು ದೀಪಗಳಿದ್ದು ತಲೆಯ ಮೇಲೆ ಏರಿಸುವದು ಇಳಿಸುವದು ನಡೆಯತ್ತದೆ. ಆಗ ದೀಪ ಆರಬಾರದೆಂಬ ನಂಬಿಕೆ ಉಂಟು. ಇದೇ ಬಗೆಯಲ್ಲಿ ಇತರ ದೇವತೆಗಳಿಗೆ ತಲೆಯ ಮೇಲೆ ಬೆಂಕಿಯನ್ನು ಹೊತ್ತು ಸೇವೆ ಸಲ್ಲಿಸುವದು ಕಂಡುಬರುತ್ತಿದ್ದು ಅದಕ್ಕೆ ‘ಕರಗ’ ಎಂದೂ ಕರೆಯಲಾಗುತ್ತಿದೆ. ಇವೆಲ್ಲ ದಿವ್ಯದ ಅನುಕರಣೆಯಿಂದ ಬಂದುವೇನೋ ಎನಿಸುತ್ತದೆ.

ಬೆಂಡು ತೊಟ್ಟಿಲು, ಜೋಳದ ದಂಟಿನಿಂದ ಕಟ್ಟಿ ತಯಾರಿಸಿದ ಮಣಿ. ಇದರ ಗಾತ್ರ ಅಗಲ ಎಲ್ಲವೂ ತೊಟ್ಟಿಲಲ್ಲಿರುವ ಗಾದಿಯ ಮೀರುತ್ತದೆ. ಮಕ್ಕಳಾದ ಮೇಲೆ ತಾಯಿಯಾದವಳು ಹೆತ್ತ ಕೂಸನ್ನು ಬೆಂಡು ತೊಟ್ಟಿಲಲ್ಲಿ ಮಲಗಿಸಿ ನೀರಲ್ಲಿ ತೇಲು ಬಿಡುತ್ತಾಳೆ. ಈಜು ಬಲ್ಲವರಿಬ್ಬರೂ (ಈ ಕೆಲಸಕ್ಕಾಗಿಯೇ ಈಜುಗಾರರು ಅಲ್ಲಿ ಇರುತ್ತಾರೆ) ನೀರಿಗಿಳಿದು ಈ ಬೆಂಡು ತೊಟ್ಟಿಲನ್ನು ತೇಲಿಸಿಕೊಳ್ಳುತ್ತ ಐದು ಬಾರಿ ಪ್ರದಕ್ಷಿಣೆ ಹಾಕಬೇಕು. ಇದು ಜೋಗುಳ ಬಾವಿಯಲ್ಲಿ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಈಗ ವಿಜ್ಞಾನ ಮತ್ತು ಮನವರಿಕೆ ಬೆಳೆದಂತೆ ಇದು ಕಣ್ಮರೆಯಾಗಿ ಹೋಗಿದೆ. ಇನ್ನೂ ವಿಚಿತ್ರವೆಂದರೆ ತೇರಿನ ಎರಡೂ ಗಾಲಿಗಳ ಮಧ್ಯದಲ್ಲಿ ಕೂಸನ್ನು ಮಲಗಿಸಿ ತೆಗೆಯುವದು ಕೆಲವೆಡೆ ರೂಢಿಯಲ್ಲೂ ಇದೆ..!

ಬಲಿಕೊಡುವ ಹರಕೆಗಳು‌: ಪ್ರಾಚೀನ ಕಾಲದಲ್ಲಿ ನರಬಲಿಯಂತಹ ಹರಕೆಗಳು ಇದ್ದವು ಎಂಬುದಕ್ಕೆ ಈ ಹಿಂದೆ ವಿವರಿಸಲಾಗಿದೆ. ಈ ಬಗೆಯ ನರಬಲಿಯ ಉದಾಹರಣೆಗಳು ಎಲ್ಲಮ್ಮನ ಆಚರಣೆಗಳಲ್ಲಿ ಸಿಗುವುದಿಲ್ಲ. ಆದರೆ ಬಲಿ ಪದ್ಧತಿಯೇ ಇಲ್ಲ ಎಂದು ಹೇಳಲಾಗುವುದಿಲ್ಲ. ಬಲಿ ಕೊಡುವ ಪದ್ಧತಿ ಎಲ್ಲಮ್ಮನಿಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಒಂದೊಂದು ರೀತಿಯದು. ಎಲ್ಲಮ್ಮನಿಗೆ ಬಲಿ ಸಲ್ಲುತ್ತದೆ ಎಂದು ಕೆಲವರು. ಸಲ್ಲುವದಿಲ್ಲ ಎಂದು ಇನ್ನು ಕೆಲವರು ಹೇಳುತ್ತಾರೆ. ಮೊದಲು ಜಾರಿಯಲ್ಲಿತ್ತು ಸರಕಾರಿ ಕಾನೂನಿಂದ ದೂರವಾಗಿದೆ ಎಂದು ಇನ್ನು ಕೆಲವರು ಹೇಳುತ್ತಾರೆ.

ಜನಸಾಮಾನ್ಯರಲ್ಲಿ ವಾದವಿವಾದಗಳು ಏನೇ ಇದ್ದರೂ ಪರಸಗಡದ ಮೇಲು ಭಾಗಕ್ಕೆ ಹೋದರೆ ‘ಬ್ಯಾಟಿ ಮಾಡುವದು’ ಎಂಬ ಹೆಸರಿನಲ್ಲಿ ಹೋತುಗಳನ್ನು ಬಲಿ ಕೊಡುವದು ಕಂಡುಬರುತ್ತದೆ. ಬಲಿ ನೀಡುವದು ಹರಿಜನರಲ್ಲಿ ಅಧಿಕವಾಗಿದೆ. ಬಲಿಕೊಡುವ ಪ್ರಾಣಿಯ ಕೋಡು ಮುಕ್ಕಗಿರಬಾರದು, ಹಲ್ಲು ಬಿದ್ದಿರಬಾರದು, ಗಡಬು ಹಾಕಿರಬಾರದು, ಅಂಗವಿಕಲವಾಗಿರಬಾರದು ಎಂದು ಇನ್ನೂ ಏನೇನೂ ಮುಂತಾಗಿ ಪರೀಕ್ಷಿಸುತ್ತಾರೆ.

ಹೆಣ್ಣು ಜನಿಸಿದರೆ ಸಂತೋಷ ಪಡಬೇಕು: ತರನಳ್ಳಿ

ಬಲಿ ಎನ್ನುವದು ರಕ್ತವನ್ನು ಚಲ್ಲಾಡುವ ಆಶಯ ಹೊಂದಿದ್ದು ದೇವಿಯ ಕೆಂಪು ಬಣ್ಣದ ಮುಖ ಕೂಡಾ ರಕ್ತ ಲೇಪನವೆಂದೇ ಭಾವಿಸಲಾಗುತ್ತಿದೆ. ಸಾಮೂಹಿಕ ಅಥವಾ ವೈಯಕ್ತಿಕ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಇನ್ನೊಂದು ಜೀವದ ಅಥವಾ ತಮ್ಮ ಜೀವ ಸಾಯುವ ಮುನ್ನವೇ ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಶಕ್ತಿಗೆ ಪ್ರಾಣಹತ್ಯೆ ಮಾಡುವ ಅಥವಾ ಮಾಡಿಕೊಳ್ಳುವ ಬಗೆಗೆ ಬಲಿಯೆಂದು ಗುರುತಿಸಬಹುದು. ಎಲ್ಲಮ್ಮನಲ್ಲಿ ಪ್ರಾಣಿಗಳನ್ನು ಬಲಿಕೊಡುವುದಲ್ಲದೇ ಪ್ರಾಣಿಗಳನ್ನು ಪೂಜಾರಿಗೆ ನೀಡುವ ಸಂಪ್ರದಾಯವೊಂದು ಜಾರಿಯಲ್ಲಿದೆ.

ಬಲಿ ಪದ್ಧತಿಯ ಕುರಿತು ಸರಕಾರ ನಿಷೇಧಾಜ್ಞೆಯನ್ನು ಜಾರಿಗೆಯಲ್ಲಿ ತಂದಾಗ ಇದು ಹುಟ್ಟಿಕೊಂಡಿರಬಹುದು. ಪೂಜಾರಿಗೆ ನೀಡುವ ಪ್ರಾಣಿಹರಕೆ ದೇವಿಯ ಹೆಸರಿನಲ್ಲಿ ಬಿಟ್ಟಿರುವುದೇ ಆಗಿರುತ್ತದೆ. ಬಲಿ ‘ಜನಪದ’ರಲ್ಲಿ ವಾದವಿವಾದದಿಂದ ಕೂಡಿದ್ದು, ದೇವಿ ಮಡಿವಂತೆ ಅವಳಿಗೆ ಕೇವಲ ಹಣ್ಣು-ಕಾಯಿಯೇ ಎಡೆ ಸಲ್ಲುತ್ತದೆ ಎಂದು ಹೇಳುವಂತೆ ಮಲೆನಾಡಿನಲ್ಲಿನ ‘ಅಮ್ಮ’ ಮತ್ತು ‘ಮಾತಂಗಿ’ ದೇವತೆಗಳಲ್ಲಿ ಎಲ್ಲಮ್ಮನ ಪೂಜೆ ಅಮ್ಮನಿಗೆ ಸಲ್ಲುತ್ತದೆ. ರಕ್ತಹಾರ ಎನ್ನುವುದು ಮಾತಂಗಿಗೆ ಮಾತ್ರ ಸಲ್ಲುತ್ತದೆಂದು ತಿಳಿದು ಬರುತ್ತದೆ. ಇದನ್ನು ಗಮನಿಸಿದಾಗ ಇಲ್ಲಿಯ ಬಲಿಯೂ ಮೂಲತಃ ಮಾತಂಗಿಗೆ ಸಲ್ಲುತ್ತಿತ್ತು ಎನಿಸುತ್ತದೆ.

ಬೇಡಿಕೆಯನ್ನು ಸಂಕಲ್ಪ ಮಾಡಿಕೊಂಡು ಕಲ್ಲಿನ ಚಿಪ್ಪುಗಳಿಂದ ನಾನಾ ಆಕಾರದ ರಚನೆಗಳನ್ನು ದೇವಿಯ ಪ್ರದೇಶದಲ್ಲಿ ಕಟ್ಟಿಹೋಗುತ್ತಾರೆ. ಬೇಡಿಕೆ ಈಡೇರಿದ ನಂತರದಲ್ಲಿ ಬಂದು ಆ ರಚನೆಯನ್ನು ಕೆಡಿಸಿ ಹೋಗುತ್ತಾರೆ. ಇದು ಒಂದು ಬಗೆಯ ಹರಕೆಯಾಗಿದೆ.

ಬೇಡಿಕೊಳ್ಳುವ ಬೇಡಿಕೆಗೆ ತಕ್ಕಂತೆ ಕಲ್ಲಿನಲ್ಲಿ ಆಕೃತಿಗಳನ್ನು ಕಟ್ಟಲಾಗುತ್ತದೆ. ಉದಾ: ಮಗ ಬೇಕಾದರೆ ಮೂರು ಕಲ್ಲುಗಳು ಒಲೆಗುಂಡಿನಂತೆ ಇಟ್ಟು ಅದರ ಮೇಲೆ ಒಂದರ ಮೇಲೊಂದರಂತೆ ಮತ್ತೆ ಮೂರು ಕಲ್ಲುಗಳನ್ನಿಡುವರು. ಮನೆ ಬೇಕಿದ್ದರೆ ಮೂರು ಕಲ್ಲುಗಳನ್ನು ಮನೆ ಕಟ್ಟಿದ ಹಾಗೆ ಒಟ್ಟುವದು. ಮನೆಯಲ್ಲಿ ದನಗಳು ಬೇಕಿದ್ದರೆ ಆಯಾತಾಕಾರದಲ್ಲಿ ಗೋದಲಿಗೆ ಕಲ್ಲುಗಳು ಇಟ್ಟಂತೆ ಇಡುವದು. ಹೀಗೆಯೇ ಬೇಡಿಕೆಗೆ ತಕ್ಕಂತೆ ಕಲ್ಲಿನಲ್ಲಿ ರೂಪಗಳನ್ನು ಮಾಡಿ ತಮ್ಮ ಬೇಡಿಕೆಗಳನ್ನು ಸಂಕೇತದ ರೂಪದಲ್ಲಿ ವ್ಯಕ್ತಪಡಿಸುತ್ತಾರೆ.

ಜಾತಿ ಹೆಸರಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡಿಸುವುದು ಸಲ್ಲದು: ನಾಡೋಜ ಕೃಷ್ಣ

ಸೌದತ್ತಿಯಿಂದ ಉಗುರಗೊಳ್ಳದವರೆಗೆ ಇಂಥವುಗಳನ್ನು ಕಾಣಬಹುದು. ಆದರೆ ಅಧಿಕೃತವಾಗಿ ಸಿಗುವುದು ಪರಸಗಡದಲ್ಲಿ. ಸಂಕೇತಗಳನ್ನು ಕಟ್ಟುವಾಗ ಹೆಣ್ಣು-ಗಂಡೆಂಬ ಭೇದವಿರುವುದಿಲ್ಲ. ಕೈಗೂಡಿದಾಗ ಪತಿ-ಪತ್ನಿಯರೀರ್ವರು ಅಥವಾ ಹರಕೆ ಕಟ್ಟಿದವರು ಬಂದು ಆ ರೂಪವನ್ನು ಇಳಿಸುತ್ತಾರೆ. ತಾವು ಯಾವುದನ್ನು ಕಟ್ಟಿದ್ದರೋ ಅದನ್ನೇ ಕೆಡಿಸಬೇಕೆಂಬುದೇನಿಲ್ಲ. ಅದೇ ರೂಪದ ಬೇರೊಂದನ್ನು ಇಳಿಸಿದರಾಯಿತು..!

ಅಲ್ಲಿರುವ ಅವರ ದೃಢವಾದ ನಂಬಿಕೆಯೆಂದರೆ ಗುಡ್ಡದ ಮೂಲೆಮೂಲೆಯಲ್ಲಿ ಬಿದ್ದಿರುವ ಕಲ್ಲುಗಳೆಲ್ಲ ಪರಶುರಾಮ ಕಡಿದ ಎಲ್ಲಮ್ಮನ ರುಂಡಗಳು. ಈ ಗುಂಡು ಕಲ್ಲುಗಳಿಂದ ಗೂಡು ಕಟ್ಟಿದರೆ ತಮಗೆ ಮನೆ ಕಟ್ಟುವ ಸಾಮರ್ಥ್ಯ ಬರುವದೆಂಬ ನಂಬಿಕೆ. ಅದೇ ರೀತಿ ಇನ್ನುಳಿದ ಬೇಡಿಕೆಗಳು. ಇಲ್ಲಿ ನಿರ್ಮಾಣ ಮಾಡುವದು ನಿರ್ಮೂಲ ಮಾಡುವದು ಎಂಬ ಎರಡು ಅಂಶಗಳನ್ನು ಕಾಣುತ್ತೇವೆ..!

ನಿರ್ಮಾಣದಲ್ಲಿ ಜೀವ ತುಂಬಿ, ನಿರ್ಮೂಲನದಲ್ಲಿ ಜೀವವನ್ನು ಕಳೆಯುವ ಆಶಯ ಸೇರಿಕೊಂಡಂತಿದೆ. ದೇವಿಗೆ ವರಿಸಿ ಬಂದ ಸಂಕೇತಗಳು ಹೊರೆಗಳಿದ್ದಂತೆ (ಭಾರವಿದ್ದಂತೆ). ಅವು ದೇವಿ ಬಹಳ ಕಾಲದವರೆಗೆ ಹೊತ್ತುಕೊಳ್ಳದೆ ಗುಡ್ಡ (ಹೊರೆ-ಭಾರ) ಬೇಗನೆ ಇಳಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆಯೂ ಕಾಣದಿರಲಾರವು. ಈ ಬಗೆಯು ಮಕ್ಕಳಾದಲ್ಲಿ ಗುಡ್ಡ ಏರಿಸುವದು ಇಳಿಸುವದು ಕಾಣಬಹುದು.

ಹರಕೆ ಹೊತ್ತವರು ಸಾಮಾನ್ಯವಾಗಿ ಆಚರಿಸುವ ಕೆಲವೊಂದು ಕಟ್ಟುಪಾಡುಗಳಿವೆ. ಇವು ಎಲ್ಲ ಹರಕೆಗಳಿಗೂ ಅನ್ವಯಿಸುತ್ತವೆ. ಆದ್ದರಿಂದ ಅವುಗಳನ್ನು ಪ್ರತ್ಯೇಕವಾಗಿ ಒಂದೆಡೆಗೆ ಸಂಗ್ರಹಿಸಿ ಪರಿಶೀಲಿಸಲಾಗಿದೆ.

ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ: ತೋಟದ್

ಹೊತ್ತ ಹರಕೆಯಲ್ಲಿ ಯಶಸ್ಸು ಪಡೆದವರು ಹರಕೆ ಒಪ್ಪಿಸುವ ಮುನ್ನ ಮನೆಗಳನ್ನು ಶುಚಿಗೊಳಿಸುವುದು, ಬಟ್ಟೆಬರೆಗಳನ್ನು ತೊಳೆಯುವುದು, ಹೆಣ್ಣು-ಗಂಡು ಯಾರೇ ಇದ್ದರೂ ಮಡಿಯಾಗಿರುವುದು ಮತ್ತು ಹರಕೆ ಒಪ್ಪಿಸುವ ದಿನ ಉಪವಾಸ ಮಾಡುವುದು ಕಂಡುಬರುತ್ತದೆ. ಕೆಲಭಾಗದಲ್ಲಿ ಇದಕ್ಕೆ ‘ಬಾಯಿ ಬೀಗದ ಹರಕೆ’ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಹರಕೆ ಒಪ್ಪಿಸುವವರೆಲ್ಲ ಜೋಗುಳಬಾವಿ ಸತ್ಯವ್ವನ ಅಥವಾ ಎಲ್ಲಮ್ಮನ ಹೊಂಡಗಳಲ್ಲಿ ಸ್ನಾನ ಮಾಡುತ್ತಾರೆ. ಯಾವದೇ ಬಗೆಯ ಹರಕೆ ಒಪ್ಪಿಸಿದರೂ ಜೋಗತಿಯರು ಬೇಕೆಬೇಕು. ಇವರಿಲ್ಲದಿದ್ದರೆ ದೇವಿಗೆ ಹರಕೆ ಸಲ್ಲುವುದಿಲ್ಲ ಎಂಬ ಅಸ್ತವಾದ ನಂಬಿಕೆ ಇದೆ. ಈ ಹಿಂದೆ ‘ಚಂಬಳಿಕೆ ಹರಕೆ’ಯಲ್ಲಿ ನೋಡಲಾದ ಎಲ್ಲಮ್ಮನಿಗೆ ಮಾತಂಗಿ ನೀಡಿದ ಆಶ್ರಮದ ಕಥೆಗಳೇ ಈ ನಂಬಿಕೆಗೆ ಕಾರಣವಾಗಿವೆ. ತಪ್ಪು ಎಲ್ಲಮ್ಮನದಿದ್ದಾಗಲೂ ತಿಂದುದ್ದರಿಂದ ಎಲ್ಲಮ್ಮ ಮಾತಂಗಿಗೆ ದಯಪಾಲಿಸಿದ್ದು ‘ನನಗೆ ಬರುವ ಅಗಲು ಮೊದಲು ನಿನಗೆ ಸಲ್ಲಲಿ’ ಎಂದು.

ಆದ್ದರಿಂದ ಎಲ್ಲಮ್ಮನ ಜಾತ್ರೆಯಲ್ಲಿ ಜೋಗತಿಯರು ಇಲ್ಲದೇ ಎಲ್ಲಮ್ಮನ ಆಟ ನಡೆಯದು ಎಂದು ಹೇಳುತ್ತಾರೆ. ಹರಕೆಯ ಆಚರಣೆಯಲ್ಲಿ ಮೆರವಣಿಗೆ ಜೊತೆಗೆ ಹಾಡು ವಾದ್ಯಗಳು ಮೊಳಗುತ್ತವೆ. ಹರಕೆ ಹೊತ್ತವರ ಸಂಬಂಧಿಕರಾದವರು ಉಡುಗೊರೆ ತಂದು ನೀಡುವ ಸಂಪ್ರದಾಯವಿದೆ. ವರ್ಷದ ಹನ್ನೆರಡು ತಿಂಗಳು ಎಲ್ಲಮ್ಮನ ಸಂಭ್ರಮವೆನ್ನುವಂತೆ ಹರಕೆಗಳು ಎಲ್ಲ ಕಾಲಕ್ಕೂ ಜರುಗುತ್ತವೆ. ವಿಶೇಷವಾಗಿ ದೇವಿಯ ಮುತ್ತೈದೆ ಹುಣ್ಣಿವೆಯಾದ ಭಾರತ ಹುಣ್ಣಿಮೆಯಲ್ಲಿ ಹೇರಳವಾಗಿ ಹರಕೆಗಳನ್ನು ಅರ್ಪಿಸಲಾಗುತ್ತದೆ. ಹೊಸ್ತಿಲದ ಹುಣ್ಣಿಮೆ ರಂಡಿ ಹುಣ್ಣಿಮೆಯಾದರೂ ಈ ಹುಣ್ಣಿಮೆಗೆ ಮೀಸಲಾದ ಹರಕೆಗಳೂ ಇವೆ. ಅವುಗಳಲ್ಲಿ ಅರಿಷಿಣ ಪೂಜೆಯ ಹರಕೆಯೇ ಪ್ರಮುಖ.

ಕಂಡದೆಲ್ಲಕ್ಕೂ ದೇವತ್ವವನ್ನು ಆರೋಪಿಸುವದು ಜಾನಪದೀಯರ ಮುಗ್ಧ ಮನಸ್ಸಿನ ಪ್ರತಿಬಿಂಬವಾಗಿದೆ. ತಮಗೆ ಕಷ್ಟ-ಕಾರ್ಪಣ್ಯಗಳೆಲ್ಲ ದೇವಿಯಿಂದಲೇ ಬರುವವೆಂದು ಅವರು ತಿಳಿಯುತ್ತಾರೆ. ಮೊದಲು ಸಿರಿ-ಸಂಪತ್ತನ್ನು ಇಟ್ಟು ನೋಡುತ್ತಾಳೆ, ಕೊಟ್ಟು ನೋಡುತ್ತಾಳೆ. ಹೀಗಿದ್ದಾಗಲೂ ತನ್ನನ್ನು ನೆನೆಯದಿದ್ರೆ ಕಾಡಾಟ ಪ್ರಾರಂಭಿಸುತ್ತಾಳೆ ಎಂಬುದು ಅವರ ದೃಢವಾದ ನಂಬಿಕೆ ಜಾನಪದಿಯರದು. ಪರೀಕ್ಷೆಯಲ್ಲಿ ಸಿಲುಕಿಕೊಂಡು ಒದ್ದಾಡುವಾಗ ದುರ್ಬಲವಾದ ಮನಸ್ಸಿಗೆ ಧೈರ್ಯವನ್ನು ತಂದು ಕೊಳ್ಳಲು ಹರಕೆಗೆ ಮೊರೆ ಹೋಗುತ್ತಾರೆ.

ದೇವದುರ್ಗ: 16ಕ್ಕೆ ರಂಗನಾಥ ರಥೋತ್ಸವ

ಹರಕೆ ಹೊರುವ ಭಕ್ತಾದಿಗಳು ಕೇವಲ ಒಳ್ಳೆಯ ಕಾರಣಕ್ಕಾಗಿಯೇನಲ್ಲ, ಕೆಟ್ಟದ್ದಕ್ಕೂ ಹರಕೆ ಹೊರುತ್ತಾರೆ. ಒಬ್ಬರಿಗೆ ಕೆಟ್ಟದ್ದಾದರೂ ಅದರ ಇನ್ನೊಂದು ಮುಖ ಇನ್ನೊಬ್ಬನಿಗೆ ಒಳ್ಳೆಯದಿರುತ್ತದೆ ಎಂಬುದು ನಿಜವಾದರೂ ಈ ಬಗೆಯ ಹರಕೆ ಹೊರುವದು ವಿರಳ. ಒಬ್ಬಳು ನನ್ನ ಅಕ್ಕ ಸಾಯಲಿ. ಅವಳ ಗಂಡನನ್ನು ತಾನು ಮದುವೆಯಾಗಲಿ ಹಾಗೆ ಆದರೆ ಸಿಡಿಯಾಡುವುದಕ್ಕೆ ಬರುವ ಎಂಬುದಾಗಿ ಹರಕೆ ಹೊತ್ತಿದ್ದಳಂತೆ. ಅವಳ ಆಸೆ ಕೈಗೂಡಿದಾಗ ಗಂಡನೊಂದಿಗೆ ಬಂದು ಹರಕೆ ಒಪ್ಪಿಸಿದ್ದು ಎಲ್ಲರ ನಾಲಿಗೆಯ ಮೇಲಿದೆ. ಮನೆ ಮೇಲೇರಲಿ, ಭೂಮಿ ಬೆನ್ನಿಗೆ ಬೀಳಲಿ, ಮಗನಿಗೆ ನೌಕರಿ ಸಿಗಲಿ, ಮುಂತಾಗಿ ಒಳ್ಳೆಯ ಆಶಯಗಳಿಗೆ ಹರಕೆ ಹೊರುವುದು ಸರ್ವೇಸಾಮಾನ್ಯ.

ಮುಂಬರುವ ಕಷ್ಟಗಳು ನಮಗೆ ತಾಗದೆ ಹೋಗಲಿ ಎನ್ನುವ ವಿಚಾರದಿಂದ ಹೊರುವ ಹರಕೆ ಮತ್ತೊಂದು ಬಗೆಯದು. ಭಾವೀಕಷ್ಟಗಳು ಎಂಥವು ಕಾದಿವೆ ಎನ್ನುವುದನ್ನು ತಾವೇ ಕಂಡುಕೊಳ್ಳುವುದಲ್ಲದೆ, ಜೋಗಮ್ಮ, ಜೋಗಪ್ಪರಿಂದ ಕೇಳಿ ತಿಳಿದುಕೊಳ್ಳುವ ವಾಡಿಕೆಯಿದೆ.

ಸಂಯಮಶೀಲ ಮನಸ್ಸಿಲ್ಲದವನಿಗೆ ಆಸೆ ಆಕಾಂಕ್ಷೆಗಳು ಅಡಕಲಂತೆ ನಿಟ್ಟೀಟ್ಟಿ ನಿಲ್ಲುತ್ತವೆ. ಇಂಥಲ್ಲಿ ಕಣ್ಣೆದುರಿನಲ್ಲಿ ತಾಂಡವನೃತ್ಯಗೈಯುವ ಆಸೆಗಳು ಯಾವ ತೊಂದರೆಯಿಲ್ಲದೆ ಈಡೇರಲಿ ಎನ್ನುವ ಅಭಿಲಾಷೆಯಿಂದ ಹರಕೆ ಕೈಗೆತ್ತಿಕೊಳ್ಳುವುದು ಕಂಡುಬರುತ್ತದೆ. ಬಂದ ಕಷ್ಟಗಳು ದೂರಾಗಲಿ ಎಂಬುದು ಮತ್ತೊಂದು ಕಾರಣ. ಪ್ರಸವವೇದನೆ ಅನುಭವಿಸುತ್ತಿದ್ದು, ಸಾವಿನ ಅಂಚಿನಲ್ಲಿದ್ದಾಗ, ಮೊಲೆ ಹಾಲು ಇಂಗಿ ಹೋದಾಗ, ರೋಗದಿಂದ ಬಳಲುವಾಗ ಹಣ್ಣಾದ ಮನಸ್ಸು ಎಂತಹದಕ್ಕೂ ಮೊರೆ ಹೋಗಲು ಹಿಂದು ಮುಂದೆ ನೋಡುವುದಿಲ್ಲ. ಹೇಗಾದರೂ ಮಾಡಿ ಒಳಿತಾದರೆ ಸಾಕು, ಬದುಕಿದರೆ ಸಾಕು ಎನ್ನುವ ಮನೋಭಾವನೆ ಇರುತ್ತದೆ.

ಹೊತ್ತ ಹರಕೆ ಈಡೇರಿದ ಮೇಲೆ ದೇವಿಯನ್ನು ಮರೆಯುವದೇ ಹೆಚ್ಚು. ಆದರೆ ದೇವಿ ಅವರನ್ನೆಂದೂ ಮರೆಯುವುದಿಲ್ಲ. ನೂರು ವರ್ಷದ ಹಿಂದಿನ ಹರಕೆ ಇದ್ದರೂ ನೆನಪಿಸಿಕೊಟ್ಟು ಮಾಡಿಸಿಕೊಳ್ಳುತ್ತಾಳೆ ಎನ್ನುವ ಮಾತಂತೂ ಸರ್ವೇಸಾಮಾನ್ಯವಾಗಿ ಕೇಳಿಬರುತ್ತದೆ. ಇಂಥ ಭಾವನೆ ಅವರ ಹಾಡುಗಳಲ್ಲಿಯೂ ವ್ಯಕ್ತವಾಗಿರುವುದು ಕಾಣುತ್ತೇವೆ.

“ಆಡುವ ಕೂಸಿನ ಆಮಾತ ನುಂಗ್ಯಾಳು
ಮರ್ತೋದ ಹರಕಿ ನೆನಸ್ಯಾಳು| ಹಡದವ್ವಗ
ಬೆತ್ತಲೆ ಮಾಡಿ ಕುಣಿಸ್ಯಾಳು||”

ದೇವಿಗೆ ಹರಕೆ ಹೊತ್ತು ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಮರೆತು ಮಲಗಿದರೆ ಹುಟ್ಟಿಸಿದ ಕೂಸನ್ನೇ ನುಂಗುತ್ತಾಳೆ. ಕಟ್ಟಿಸಿದ ಮನೆಯನ್ನೇ ನೆಲಸಮ ಮಾಡುತ್ತಾಳೆ. ಕೈ, ಕಾಲು, ತಲೆ, ಬಾಯಿ, ಮೂಗು ದೇಹದ ಎಲ್ಲ ಅಂಗಗಳಿಗೂ ಒಂದೊಂದು ಬಗೆಯ ಹುಣ್ಣನ್ನು ತುಂಬುತ್ತಾಳೆ. ಕೆಮ್ಮು, ದಮ್ಮು, ಜ್ವರ, ಕುಷ್ಟ ನಾನಾ ಬಗೆಯ ಬೇನೆಯನ್ನು ತಂದೊಡ್ಡುತ್ತಾಳೆ. ನೀರು ಕೂಳಿಲ್ಲದ ಹಾಗೆ ಮಾಡುವದು, ಇದ್ದರೂ ತಿನ್ನದ ಹಾಗೆ ಮಾಡುವದು. ಕಾರ್ಯ ಕಲಾಪಗಳು ಸುರಕ್ಷಿತವಾಗಿ ಜರುಗದ ಹಾಗೆ ಅಡೆತಡೆ ತಂದೊಡ್ಡುವದು. ಈ ಶಕ್ತಿ ಅವಳಲ್ಲಿದೆ ಎಂದೂ ಹೇಳುವುದಲ್ಲದೇ, ಆಕೆಯ ಮಹಿಮೆ ಹಾಡುಗಳಲ್ಲಂತೂ ವಿಪರೀತವಾಗಿ ಮೂಡಿಬಂದಿದೆ.

ಶಹಾಬಾದ ನಗರಸಭೆಯಲ್ಲಿ 34.17 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ಸ್ವಪ್ನದ ಕುರಿತಾಗಿ ಪುರಾಣ, ಕಾವ್ಯಗಳಲ್ಲಿ ಬರುವಂತೆ ಎಲ್ಲಮ್ಮನಲ್ಲಿಯೂ ಅನೇಕ ಘಟನೆಗಳು ಬರುತ್ತವೆ. ಕನಸಿನಲ್ಲಿ ಸ್ವತಃ ತಾನಾಗಿಯೇ ಬುದು ಪ್ರತ್ಯಕ್ಷವಾಗುವದು. ಇಲ್ಲವೆ ಕನಸಿನಲ್ಲಿ ಗುಡಿಯ ಕಳಸವನ್ನು ತೋರಿಸುವದು. ಹಾವು ತೋರಿಸುವದು ಈ ರೀತಿ ವಿವಿಧ ರೂಪದಲ್ಲಿ ಕಾಣಿಸಿಕೊಂಡು ಮರೆತ ಹರಕೆಯನ್ನು ನೆನಪಿಸಿಕೊಡುವಳು. ಈ ರೀತಿ ಏನಾದರೊಂದು ಕಂಡರೆ ಸಾಕು ಕುತ್ತು ಕಾದಿದೆ ಎನ್ನುವದು ಭಕ್ತಾದಿಗಳ ತೀರ್ಮಾನ. ಎಷ್ಟೋ ಸಾರಿ ಹರಕೆ ಪೂರೈಸದೆ ಸತ್ತು ಹೋಗಿದ್ದರೂ ಅವರ ಹರಕೆಯನ್ನು ಮಗ ತಂದೆಯ ಸಾಲ ತೀರಿಸುವಂತೆ ತೀರಿಸಲೇ ಬೇಕು, ಎನ್ನುವ ನಂಬಿಕೆಯಿದೆ.

ಹರಕೆ ಮರೆತವರಿಂದ ದೇವಿ ದುಪ್ಪಟ್ಟು ಹರಕೆಯನ್ನು ಕೇಳುವಳೆಂದೂ ಹೇಳುತ್ತಾರೆ. ಉದಾ: ಮೊದಲ ಹೈನದ ಒಂದು ವಾರದ ಮೀಸಲು ತುಪ್ಪ ಕೂಡುವುದಾಗಿ ಬೇಡಿಕೊಂಡಿದ್ದು ಆ ವರ್ಷ ಕೊಡದೇ ಹೋದರೆ ಮುಂದಿನ ಸೂಲಿನಲ್ಲಿ ಆಕಳು (ಎಮ್ಮೆ) ಈದಾಗ ಎರಡು ವಾರದ ಮೀಸಲು ತುಪ್ಪ ಹಿಡಿದು ಒಪ್ಪಿಸುವೆ, ಎಂದು ಬೇಡಿಕೊಳ್ಳುವುದು ಕಂಡು ಬರುತ್ತದೆ. ಈ ಪದ್ಧತಿ ಇನ್ನುಳಿದ ಹರಕೆಗಳಲ್ಲಿಯೂ ಇದೆ. ಮೊದಲಬಾರಿ ‘ಬಿಳಿ ಉಟಗಿ’ ಉಡಲು ಬೇಡಿಕೊಂಡಿದ್ದು ತಪ್ಪಿದಾಗ ‘ಬೇವಿನ ಉಟಗಿ’ ಉಡುವೆ ಎನ್ನುವದು, ದೀಡ ನಮಸ್ಕಾರದ ಬದಲಾಗಿ ದಿಂಡರಿಕೆ ಉರುಳುವದು ಮುಂತಾಗಿ ಕೇಳಿಕೊಂಡು ಒಪ್ಪಿಸುವದು ವಾಡಿಕೆಯಾಗಿದೆ. ತಪ್ಪಿದಕ್ಕಾಗಿ ದಂಡ ಸೇರಿಸಬೇಕೆಂಬುದೇ ಅವರ ಉತ್ತರ.

ಹರಕೆಯನ್ನು ಬದಲಾಯಿಸುವ ಸಂಧರ್ಭಗಳೂ ಒಡೆದು ಕಾಣುತ್ತವೆ. ಇಷ್ಟಾರ್ಥ ಪೂರ್ತಿಯಾದ ಮೇಲೆ ಬೇಡಿಕೊಂಡ ವಸ್ತು ನೀಡಲು ಸಾಮರ್ಥ್ಯ ಇಲ್ಲದಿದ್ದರೆ ಕಡಿಮೆ ಪ್ರಮಾಣದಲ್ಲಿ ಕೂಡಬಹುದು. ಉದಾ: ಬೆಳ್ಳಿಯ ಮುಖ ಬೇಡಿಕೊಂಡಿದ್ದರೆ ಅದರ ಬದಲಿಗೆ ಸಾದಾ ತಗಡಿನ ಮುಖ ಮಾಡಿಸಿಕೊಡಬಹುದು. ಬೆಳ್ಳಿಯ ತೊಟ್ಟಿಲು ಬೇಡಿಕೊಂಡಿದ್ದರೆ ಸಾದಾ ತೊಟ್ಟಿಲು ಮಾಡಿಸಿಕೊಡಬಹುದು. ವಸ್ತುಗಳಲ್ಲಿ ಈ ರೀತಿ ಬದಲಾವಣೆ ಕಂಡಂತೆ ಶಿಕ್ಷೆಗಳಲ್ಲಿಯೂ ಕಾಣಬಹುದು. ಗುಡಿಗೆ ಹತ್ತು ಸುತ್ತು ದೀರ್ಘದಂಡ ನಮಸ್ಕಾರ ಹಾಕುವುದಾಗಿ ಬೇಡಿಕೊಂಡಿದ್ದರೆ ಅಶಕ್ತರಾಗಿದ್ದಾಗ ಮೂರೇ ಸುತ್ತು ಹಾಕಿ ಮುಗಿಸಬಹುದು. ‘ಎಲೆ ಕೊಡದಿದ್ದರೆ ಎಲೆಯ ತುಂಬಾದರೂ (ಕಡ್ಡಿ) ಕೊಡಬೇಕು’ ಎಂಬ ನೀತಿಯಿದು.

ಹರಕೆ ಸಂಕ್ಷಿಪ್ತವಾಗಿ ಕೊಡುವುದು, ಬದಲಾಯಿಸುವುದು, ದುಪ್ಪಟ್ಟ ನೀಡುವುದು ಅಥವಾ ಹೆಚ್ಚಳ ಮಾಡುವುದು ಆದರೆ ಮುರಿಯಲು ಬರುವುದಿಲ್ಲ. ‘ಹರಕೆ ಹನ್ನೆರಡು ವರ್ಷವಾದ್ರೂ ನಡೀತೈತಿ, ಮುಡುಪು ಮೂವತ್ತು ವರ್ಷವಾದ್ರೂ ನಡೀತೈತಿ ಅದು ಮಾಡಲೇಬೇಕು ಎಂಬ ನಂಬಿಕೆ ಬೇರೂರಿಬಿಟ್ಟಿದೆ. ‘ದೊರಕಿದರೆ ಹರಕೆ ಕೊಡಬಹುದು ಎಂಬ ಗಾದೆ ಇದಕ್ಕೆ ಪೂರಕವಾಗಿ ನಿಲ್ಲುತ್ತದೆ. ‘ಹರಕೆ ಕೊಟ್ಟರೂ ಹಸಿಯೋದು ನಿಲ್ಲುವುದಿಲ್ಲ’ ‘ಹಂಗ ಹರದು ಹರಕಿ ಕೊಟ್ರಂತ’ ಎನ್ನುವ ಗಾದೆಗಳನ್ನು ಕಾಣುತ್ತೇವೆ. ಇದರಿಂದ ಜನಪದದಲ್ಲಿಯ ಹರಕೆಯಲ್ಲಿರುವ ನಂಬಿಕೆಯ ಕುರಿತಾಗಿ ಭಿನ್ನಾಭಿಪ್ರಾಯಗಳಿವೆ ಎಂಬುದು ಮನನವಾಗುತ್ತದೆ.

“ಹರಸಿ ಮಾಡುವುದು ಹರಕೆಯ ದಂಡ;
ನೆರಹಿ ಮಾಡುವುದು ಡಂಬಿನ ಭಕ್ತಿ;
ಹರಸಬೇಡ, ನೆರಹಬೇಡ…”

ಎನ್ನುವ ಬಸವಣ್ಣನವರ ವಚನದಲ್ಲಿ ಹರಕೆಗೆ ನಿಂದನೆಯಿದೆ. ಸಮಾಜಕ್ಕೆ ಘಾತಕವಾದ ಪದ್ಧತಿಗಳು ಯಾವಾಗಲೂ ಸ್ಪಷ್ಟವಾಗಿ ತ್ಯಾಜ್ಯವಾದವು ಎಂದು ಹೇಳಲೇಬೇಕು.ದೇವಿಯ ಕಾಡಾಟದಿಂದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವ ‘ಜನಪದ’ರಿಗೆ ಪ್ರತಿಯೊಂದು ಸಮಸ್ಯೆಗೆ ನಿಗದಿತವಾದ ಹರಕೆಯಿದೆಯೋ? ಎಂದು ಪ್ರಶ್ನಿಸಿದರೆ ಸಾಮಾನ್ಯವಾಗಿ ದೊರೆಯುವ ಉತ್ತರ ‘ಇಲ್ಲ’ ಎಂದು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದೊಂದು ಸಮಸ್ಯೆಗೆ ಒಂದೊಂದು ನಿಗದಿತವದ ಹರಕೆಗಳಿದ್ದು, ಕಾಲಾಂತರದಲ್ಲಿ ಅಸ್ತವ್ಯಸ್ತವಾಗಿ ಹೋಗಿವೆ ಏನೋ ಎನಿಸುತ್ತದೆ. ಈಗಿನ ದಿನಗಳಲ್ಲಿಯೂ ಕೂಡ ಸ್ಪಷ್ಟವಾಗಿ ಒಂದೊಂದು ಸಮಸ್ಯೆಗೂ ನಿಗದಿತವಾದ ಹರಕೆಗಳಿರುವುದು ಕೆಲವೊಂದು ಅಂಶಗಳಲ್ಲಿ ಕಾಣಬಹುದಾಗಿದೆ.

ಕೊರೊನಾ ಕಾಲದ ‘ರಕ್ಷಕ’ ಸಮಾಜಕ್ಕೆ ದಾರಿದೀಪ

ಉದಾ: ಕಣ್ಣಿನಲ್ಲಿ ಹೂ ಬಿದ್ದರೆ ಇಲ್ಲವೆ ಯಾವುದೇ ಬಗೆಯ ನೋವು ಬಂದರೆ “ನನ್ನ ಕಣ್ಣು ಮೊದಲಿರುವಂತೆ ಮಾಡು, ನಿನಗೆ ಕಣ್ಣಬೊಟ್ಟು ಮಾಡಿಸುವೆ.” ಅದೇ ರೀತಿ ಕಾಲಿನ ತೊಂದರೆಗಳಿಗೆ ಪಾದರಕ್ಷೆ (ಪಾದುಕೆ), ಕೈ ತೊಂದರೆಗಳಿಗೆ ಹಸ್ತ, ಹೀಗೆ ನೋವಿನ ಅಂಗಕ್ಕೆ ನೇರವಾಗಿ ಹೋಲುವ ಉಡುಗೊರೆಯನ್ನು ನೀಡುವುದು ಕಂಡು ಬರುತ್ತದೆ. ಮೇಲಿನವುಗಳಲ್ಲಿ ಕಾಣುವಂತೆ, ಇನ್ನುಳಿದ ಹರಕೆ ಬಗೆಗಳು ನಿಗದಿತವಾಗಿ ಯಾವುದಕ್ಕೆ ಬಂದಿವೆ ಎಂದು ಗುರುತಿಸುವುದು ತುಂಬಾ ಕಷ್ಟವಾದದ್ದು. ಆದರೆ ಅಧಿಕೃತವಾಗಿ ಬಳಕೆಯಲ್ಲಿರುವ ಹರಕೆಯ ಬಗೆಯನ್ನು ಗಮನಿಸಿ ಹೀಗೆ ಗುರುತಿಸುವ ಸಾಧ್ಯತೆಗಳು ಇವೆ.

ಬಸವಿ ಬಿಡುವದು ಸಂತಾನ ಫಲಕ್ಕಾಗಿಯೇ. ಮಕ್ಕಳು ಅದರಲ್ಲಿಯೂ ಗಂಡು ಮಕ್ಕಳಾಗದಿದ್ದಾಗ, ಹುಟ್ಟಿದ ಮಕ್ಕಳು ಬದುಕದೆ ಹೋದಾಗ, ಬರಿ ಹೆಣ್ಣು ಮಕ್ಕಳೇ ಹುಟ್ಟುತ್ತಿದ್ದಾಗ, ಹುಟ್ಟಿದ ಹೆಣ್ಣಿಗೆ ಮುತ್ತು ಕಟ್ಟುವೆ, ನಿನ್ನ ಸೇವೆಗೆ ಬಿಡುವೆ, ಬಸವಿತನಕ್ಕೆ ನಿಲ್ಲಿಸುವೆ ಎಂದು ಬೇಡಿಕೊಳ್ಳುತ್ತಾರೆ. ರೋಗ ಪೀಡಿತರಾದಾಗ, ಹುರುಕು, ಕಜ್ಜಿ ಆದಾಗ ‘ಉಪ್ಪು ಉದರಿದಂಗ ಉದರಲಿ, ಉಪ್ಪಿನ ಗಂಟು ಹೊತ್ತ ತರ್ತಿನಿ’ ಅಥವಾ ಉಪ್ಪಿನ ಗಂಟ ಏರಸ್ತೀನಿ ಎಂದು ಹರಕೆ ಹೊರುತ್ತಾರೆ. ಕುಷ್ಟರೋಗ, ಬಿಳುಪು, ಹಡಪು, (ಅಡಪು) ಹತ್ತಿದಾಗ ‘ತಲೆ ಮೇಲಿನ ಪೀಡಾ ಹೋಗಲಿ’ ಉಟಗಿ ಅಥವಾ ಬಿಳಿ ಉಟಗಿ ತೊಡುವೆ ಎಂದು ಕೇಳಿಕೊಳ್ಳುತ್ತಾರೆ. ದನ ಜಿನಗಿ ಬಿಡುವುದು, ಮೀಸಲು ತುಪ್ಪ ಸಲ್ಲಿಸುವದು, ಕಳಸ ಏರಿಸುವದು , ಗಂಟಿ ಕಟ್ಟಿಸುವದು, ಕುದುರೆ, ಚೌರಿ ಛತ್ತರಿ ಕೊಡುವದು, ಕಲ್ಲೇರಿಸುವದು ( ಮನೆಯ ಆಕಾರದಲ್ಲಿ) ಸಂಪತ್ತು ಬಯಸಿ ಮಾಡುವ ಹರಕೆಗಳಾಗಿವೆ.

ಸಾಮಾನ್ಯವಾಗಿ ಎಲ್ಲವಕ್ಕೂ ಅನ್ವಯವಾಗುವ ಹರಕೆಗಳೂ ಇವೆ. ಉದಾ: ದೀಡನಮಸ್ಕಾರ ಹಾಕುವದು, ವಾರ ಮಾಡುವದು, ದಿಂಡರಿಕೆ ಉಳ್ಳುವುದು, ಅರಿಷಿಣ-ಕುಂಕುಮ ಪೂಜೆ, ಎಲೆಚಟ್ಟ ಮುಂತಾದವುಗಳು.ಈ ರೀತಿ ಕೆಲವು ಹರಕೆಗಳು ನಿಗದಿತವಾದ ಸಮಸ್ಯೆಗೆ ಸೀಮಿತವಗಿರುವುದನ್ನು ಕಾಣುತ್ತೇವೆ. ಸಂತಾನ ಫಲದ ಹರಕೆಗಳು ರೋಗ ಪರಿಹಾರಕ್ಕೆ ಸಲ್ಲುವುದಿಲ್ಲವೆ? ಎಂದು ಕೇಳಿದರೆ ಸಲ್ಲುವುದಿಲ್ಲ ಎಂದು ಹೇಳಲಾಗದು. ಆದರೆ ಮೂಲದಲ್ಲಿ ಮಾತ್ರ ವಿಶಿಷ್ಟ ಸಮಸ್ಯೆಗೆ ವಿಶಿಷ್ಟ ಹರಕೆಗಳಿರಬೇಕೆನಿಸುತ್ತದೆಯಂತೆ..!

ಆದರೆ ನನ್ನ ಪ್ರಕಾರ ಬಸವಣ್ಣನವರ ಕಾಯಕವೇ ಕೈಲಾಸ ಎಂಬುದೇ ನಿಜ ಅರ್ಥದಲ್ಲಿ ಪರಮಸತ್ಯ. ಉಳಿದ ಆಚರಣೆಗಳೆಲ್ಲಾ ಕೇವಲ ಕಪೋಲ ಕಲ್ಪಿತ. ಮತ್ತು ಅವೈಜ್ಞಾನಿಕವಾದವು ಎಂಬುದೇ ಸತ್ಯ. ಇದಕ್ಕೆ ನೀವೇನೆನ್ನುತ್ತೀರಿ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago