ಕಲಬುರಗಿ : ಅಫಜಲಪುರ ಕ್ಷೇತ್ರ ವ್ಯಾಪ್ತಿಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ೨೦೨೧-೨೨ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ೧೮ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮಾಡದೆ ಬಜೆಟ್ ನುಂಗಿ ಹಾಕಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡು ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಡಿಪಿ ಮಾಜಿ ಸದಸ್ಯ ಡಾ. ಕೇಶವ ಕಾಬಾ ಅವರು ಜಿಲ್ಲಾಧಿಕಾರಿಗಳಾದ ಯಶವಂತ ಗುರುಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಗ್ರಾಮದ ಶಂಕರ ಡೋರ ಮನೆಯಿಂದ ಸರಕಾರಿ ಪ್ರಾಥಮಿಕ ಶಾಲೆ ವರೆಗೆ ರಸ್ತೆ ಕಾಮಗಾರಿ ಮತ್ತು ಚರಂಡಿ ನಿರ್ಮಾಣ ಮಾಡಲಾಗಿತ್ತು. ಆದರೂ ಕೆಲ ರಾಜಕೀಯ ವ್ಯಕ್ತಿಗಳು ಸುಳ್ಳು ದಾಖಲೆ ಸೃಷ್ಟಿಸಿ ೧೮ ಲಕ್ಷ ರೂ.ಗಳ ಯಾವುದೇ ಕಾರ್ಯನಿವಹಿಸದೆ ಹಣ ಪಡೆದುಕೊಂಡಿರುತ್ತಾರೆ.
ಎಸ್‌ಸಿಪಿ ಅನುದಾನವಿದ್ದು ಇದನ್ನು ದುರುಪಯೋಗವಾಗಿದೆ. ಅಧಿಕಾರಿಗಳು ಪರಿಶೀಲಿಸಿ ಅನುದಾನವನ್ನು ಪುನರ ಬಳಸಿ ಕನಕದಾಸ ಕಟ್ಟೆಯಿಂದ ಮರಗಮ್ಮ ದೇವಿ ದೇವಸ್ಥಾನ ಹೋಗುವ ಹಳ್ಳದ ವರೆಗೆ ರಸ್ತೆ ನಿರ್ಮಾಣ ಹಾಗೂ ಚರಂಡಿ ನಿರ್ಮಿಸಬೇಕು.
ಅಲ್ಲದೆ ಸಮಗ್ರ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಟೆಂಡರ್ ಪಡೆದ ಗುತ್ತಿಗೆದಾರರಿಗೆ ಬಜೆಟ್ ತಡೆಯುವುದಲ್ಲದೆ, ಅವರ ಪರವಾನಗಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸ್ಥಳೀಯರಾದ ವಿಶ್ವನಾಥ ಹಿರೇಮಠ, ಶಿವಕುಮಾರ ಜುಲ್ಪಿ, ಜಟ್ಟೆಪ್ಪ ಪೂಜಾರಿ, ರವಿ ಪಣ್ಣದಿ, ವಿಶ್ವನಾಥ ಕೋಟಿ, ರಾಜು ಇಟಗಿ ಇವರು ಆಗ್ರಹಿಸಿದ್ದಾರೆ.