ಗೃಹ ಸಚಿವ ಆರಗ ಜ್ಞಾನೇಂದ್ರ ಸಿ.ಟಿ ರವಿ ವಿರುದ್ಧ ಪೊಲೀಸರಿಗೆ ದೂರು

1
17

ಸುರಪುರ: ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಸುರಪುರ ಪೊಲೀಸ್‌ಗೆ ದೂರು ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕಳೆದ ೬ನೇ ತಾರೀಖು ಬೆಂಗಳೂರಿನ ಜೆ.ಪಿ ನಗರದಲ್ಲಿ ಚಂದ್ರು ಎನ್ನುವವನು ಗಲಾಟೆಯಲ್ಲಿ ಸಾವಿಗೀಡಾಗಿದ್ದಾನೆ.ಆದರೆ ಅಲ್ಲಿ ಏನು ನಡೆದಿದೆ ಎನ್ನುವುದನ್ನು ತಿಳಿದುಕೊಳ್ಳದ ಗೃಹ ಸಚಿವರು ಚಂದ್ರು ಉರ್ದು ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಹತ್ಯೆ ಮಾಡಿದ್ಧಾರೆ ಎಂದು ಸುಳ್ಳು ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ನೀಡಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಸುರಪುರ ಎಪಿಎಮ್‌ಸಿ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ

ಅಲ್ಲದೆ ಇದಕ್ಕೆ ಬೆಂಬಲಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಚಂದ್ರು ಹತ್ಯೆಯ ಕುರಿತು ಕನ್ನಡ ಮಾತನಾಡಿದ್ದಕ್ಕೆ ಒಬ್ಬ ದಲಿತ ಸಮುದಾಯದ ಯುವಕನನ್ನು ಕೊಲೆ ಮಾಡಲಾಗಿದೆ.ಇದಕ್ಕೆ ಕನ್ನಡ ಹೋರಾಟಗಾರರು ಮತ್ತು ಬುದ್ಧಿ ಜೀವಿಗಳು ಏನು ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ.ಆದ್ದರಿಂದ ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಂತರ ಠಾಣಾ ಅಧಿಕಾರಿಗೆ ಬರೆದ ಮನವಿಯನ್ನು ಪೊಲೀಸ್ ಇನ್ಸ್ಪೇಕ್ಟರ್ ಸುನೀಲಕುಮಾರ ಮೂಲಿಮನಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ದೊರೆ ಆಲ್ದಾಳ,ಭಂಡಾರೆಪ್ಪ ನಾಟೇಕಾರ್,ವೆಂಕಟೇಶ ಬೇಟೆಗಾರ,ಮಾರ್ಥಂಡಪ್ಪ ದೇವರಗೋನಾಲ,ಹಣಮಂತ್ರಾಯ ಮಕಾಶಿ ಸೇರಿದಂತೆ ಅನೇಕರಿದ್ದರು.

ಇದನ್ನೂ ಓದಿ: ಅಂಬೇಡ್ಕರ್ ಸೇನೆ ಕೆಕೆ ಪ್ರಧಾನ ಕಾರ್ಯದರ್ಶಿ ರಾಜು ಕಟ್ಟಿಮನಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here