ಜೇವರ್ಗಿ: ಬಸವೇಶ್ವರ ವೃತ್ತದಿಂದ ಹಳೇ ತಹಸೀಲ್ದಾರ್ ಕಚೇರಿ ಆವರಣದವರೆಗೆ ನೂರಾರು ಕುಂಭ ಕಳಸದೊಂದಿಗೆ ಶೋಭಾಯಾತ್ರೆ ಮೆರವಣಿಗೆ ಮೂಲಕ ಜೇವರ್ಗಿ ತಾಲೂಕಿನ ಹಳೇ ತಹಸೀಲ್ದಾರ್ ಆವರಣದಲ್ಲಿ ಭೋವಿ ವಡ್ಡರ ಸಮಾಜ ಜೇವರ್ಗಿ ವತಿಯಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ 850 ನೇ ಜಯಂತೋತ್ಸವ ಹಾಗೂ ಜನಜಾಗೃತಿ ಸಮಾವೇಶ ಜರುಗಿತು.
ಸಮಾರಂಭವನ್ನು ಉದ್ಘಾಟಿಸಿ ಉದ್ದೇಶಿಸಿ ಮಾತನಾಡಿದ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯಸಿಂಗ ಬೋವಿ ಸಮಾಜದ ಅಭಿವೃದ್ಧಿಗೆ ನಾವು ಸದಾ ಸಿದ್ದರಿದ್ದೇವೆ ಈಗಾಗಲೇ ತಾಲೂಕಿನಲ್ಲಿ ಭವನ ನಿರ್ಮಾಣಕ್ಕೆ 25 ಲಕ್ಷ ರೂಪಾಯಿಗಳು ಮಂಜೂರು ಆಗಿದೆ ಇನ್ನು ಹೆಚ್ಚುವರಿಯಾಗಿ ಸುಂದರವಾದ ಭವನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿಗಳು ನೀಡುವುದಾಗಿ ಹೇಳಿದರು.
ಇದನ್ನೂ ಓದಿ :ಉರ್ದು ಪತ್ರಿಕೆಗಳಿಗೆ ಇನ್ನೂರು ವರ್ಷ ಪುರೈಕೆ: ನಯಾ ಸವೇರಾದಿಂದ ಪತ್ರಕರ್ತರಿಗೆ ಸನ್ಮಾನ
ನಮ್ಮ ಜೇವರ್ಗಿ ಎಲ್ಲ ಜಾತಿ ಜನಾಂಗದ ಜನರ ನೆಲೆವೀಡಾಗಿದ್ದು ಶಾಂತಿ ಮತ್ತು ಮಾತೃತ್ವಕ್ಕೆ ಹೆಸರು ವಾಸಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದ ಮಾಜಿ ಶಾಸಕರು ದೊಡ್ಡಪ್ಪಗೌಡ ಪಾಟೀಲ ನರಿಬೋಳ್ ಭೋವಿ ಭೋವಿ ಸಮಾಜದ ಜನಾಂಗ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಬೇಕೆಂದು ಭೋವಿ ಅಭಿವೃದ್ಧಿ ನಿಗಮ ಮಂಡಳಿಯನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಮುರುಗೇಂದ್ರ ವಿರಕ್ತಮಠ ಯಡ್ರಾಮಿ ಶ್ರೀ ಪರಮಪೂಜ್ಯ ಮಹಾಸ್ವಾಮಿಗಳು ಪೀಠಾಧಿಪತಿಗಳು ಶ್ರೀ ಕರುಣೇಶ್ವರ ಸಂಸ್ಥಾನಮಠ ಆಂದೋಲ ಸಾನಿಧ್ಯ ವಹಿಸಿಕೊಂಡಿದ್ದರು.
ಸಮಾರಂಭದಲ್ಲಿ ರಾಜಶೇಖರ್ ಸಿರಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಶಿವರಾಜ ಪಾಟೀಲ ರದ್ದೇವಾಡಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ, ಅಶೋಕ ಸಾಹುಕಾರ ಗೋಗಿ ,ಬಿಜೆಪಿ ಉಪಾಧ್ಯಕ್ಷ, ಶಾಂತಪ್ಪ ಕೂಡಲಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮರೆಪ್ಪ ಬಡಿಗೇರ್ ಬಿಜೆಪಿ ಮುಖಂಡರು ,ಹಾಗೂ ಧರ್ಮಣ್ಣ ದೊಡ್ಡಮನಿ ಬಿಜೆಪಿ ಮುಖಂಡರು ಸಿದ್ದಲಿಂಗ ರೆಡ್ಡಿ ಇಟಗಿ ಅಧ್ಯಕ್ಷರು ಕಾಂಗ್ರೆಸ್ ಜೇವರ್ಗಿ ,ಕಾಸಿಂಪಟೇಲ್ ಮುದ್ದಬಾಳ ಕಾಂಗ್ರೆಸ್ ಹಿರಿಯ ಮುಖಂಡರು, ಚಂದ್ರಶೇಖರ ಹರನಾಳ ಕಾಂಗ್ರೆಸ್ ಮುಖಂಡರು ಮತ್ತು ಸಮಾಜದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಕುಸ್ತಿ ಶರಣು ಗುತ್ತೇದಾರ ,ಗುಂಡು ಗುತ್ತೇದಾರ ಸೇರಿದಂತೆ ಸಮಾಜದ ಹಿರಿಯ ಕಿರಿಯ ಮುಖಂಡರು ಸೇರಿದಂತೆ ಸಾವಿರಾರು ಜನ ಸಮಾರಂಭದಲ್ಲಿ ಭಾಗವಹಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನೇತೃತ್ವ ಮತ್ತು ಪ್ರಾಸ್ತಾವಿಕವಾಗಿ ರವಿಚಂದ್ರ ಗುತ್ತೇದಾರ ಮಾತನಾಡಿದರು ಗುಂಡು ಗುತ್ತೇದಾರ ಸ್ವಾಗತ ಕೋರಿದರು ಆನಂದ ಕುಸ್ತಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು ಲಕ್ಷ್ಮಣ ಅರಳಗುಂಡಗಿ ವಂದನಾರ್ಪಣೆ ಮಾಡಿದರು.