ವೀರ ವೀರಾಗಿಣಿ ಅಕ್ಕಮಹಾದೇವಿ ಜಯಂತಿ ಆಚರಣೆ

0
14

ಭಾಲ್ಕಿ: ಪಟ್ಟಣ ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ವೀರ ವೀರಾಗಿಣಿ ಅಕ್ಕಮಹಾದೇವಿ ಜಯಂತಿ ಆಚರಣೆ ಮಾಡಲಾಯಿತು.

ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯಸನ್ನಿಧಾನ ವಹಿಸಿ, ಅಕ್ಕಮಹಾದೇವಿಯ ಜೀವನ ಸಂದೇಶ ಮಾನವಕುಲಕ್ಕೆ ದಾರಿದೀಪವಾಗಿವೆ. ೧೨ನೇ ಶತಮಾನದಲ್ಲಿ ಒಬ್ಬ ಮಹಿಳೆ ಉಡುತಡಿಯಿಂದ ಕಲ್ಯಾಣದವರೆಗೆ ನಡೆದುಕೊಂಡು ಬಂದಿರುವುದು ಸಾಹಸವೆ ಸರಿ. ಕಲ್ಯಾಣದ ಅನುಭವಮಂಟಪದಲ್ಲಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಇವರ ಸಂವಾದ ಅಧ್ಯಾತ್ಮ ಜಗತ್ತಿನಲ್ಲಿಯೆ ಅಪರೂಪದ್ದು. ಅಕ್ಕಮಹಾದೇವಿ ಶ್ರೇಷ್ಠ ವಚನಕಾರ್ತಿ. ಅವರ ವಚನಗಳು ನಮ್ಮ ಬದಕನ್ನು ಹಸನಗೊಳಿಸುತ್ತದೆ. ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ದಾಳದೆ ಸಮಾಧಾನಿಯಾಗಿರಬೇಕು ಎಂಬ ವಚನದ ಸಾಲು ಸುಖಿ ಜೀವನದ ಪಾಠವನ್ನು ಮಾಡುತ್ತದೆ. ಅಕ್ಕಮಹಾದೇವಿಯವರು ೪೩೪ ವಚಗನಳನ್ನು ಬರೆದು ಕನ್ನಡ ಸಾಹಿತ್ಯದಲ್ಲಿ ಮೊದಲ ಕವಿಯತ್ರಿ ಎಂದೇ ಪ್ರಸಿದ್ಧರಾಗಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಹನುಮಾನ ದೇವಸ್ಥಾನದಲ್ಲಿ ತೋಟಿಲು ಕಾರ್ಯಕ್ರಮ

ತಮ್ಮ ವಚನಗಳಲ್ಲಿ ಬಸವಾದಿ ಶರಣರ ಸ್ಮರಣೆ, ಕಲ್ಯಾಣದ ಮಹಿಮೆ, ಭಕ್ತಿ, ಕಾಯಕ, ದಾಸೋಹ, ಶರಣರ ಸಂಗ ಹಾಗೂ ಚನ್ನಮಲ್ಲಿಕಾರ್ಜುನನ ದರ್ಶನಕ್ಕಾಗಿ ಹಂಬಲ ಎದ್ದು ಕಾಣುತ್ತದೆ. ಅಕ್ಕಮಹಾದೇವಿಯ ದೃಷ್ಟಿಯಿಲ್ಲಿ ಈ ಸೃಷ್ಟಿಯೇ ಶಿವಸ್ವರೂಪಿಯಾಗಿ ಕಾಣುತ್ತಿತ್ತು. ಅದಕ್ಕಾಗಿ ಅವಳು ಗಿಡಮರಗಳಿಗೆ, ಪಕ್ಷಿಪ್ರಾಣಿಗಳಿಗೆ ಚೆನ್ನಮಲ್ಲಿಕಾರ್ಜುನ ಬಗ್ಗೆ ಕೇಳುತ್ತಿದ್ದಳು. ಸಾಹಿತ್ಯ ದೃಷ್ಟಿಯಲ್ಲಿ ಅತ್ಯೋನ್ನವಾದ ವಚನಗಳು ಭಕ್ತಿ ಭಾವಪುರಿತವಾಗಿವೆ. ಹೆಣ್ಣುಮಕ್ಕಳಿಗೆ ಅಕ್ಕಮಹಾದೇವಿ ಒಬ್ಬ ಆದರ್ಶವಾಗಿ ನಿಲ್ಲುತ್ತಾಳೆ. ಎಂತಹ ಪ್ರಸಂಗದಲ್ಲಿಯೂ ಧೈರ್ಯಗೆಡದೆ ಸಮಚಿತ್ತದಿಂದ ತಮ್ಮ ಗುರಿಯ ಕಡೆ ಸಾಗುವ ಆಕೆಯ ಪಯಣ ನಾವು ಅರ್ಥಮಾಡಿಕೊಳ್ಳಬೇಕು. ಮತ್ತು ಆ ದಿಶೆಯಲ್ಲಿ ನಮ್ಮ ಜೀವನವನ್ನು ಸಾಗಿಸುವ ಪ್ರಯತ್ನ ಮಾಡಬೇಕು ಎಂದು ನುಡಿದರು.

ಸಮಾರಂಭದ ಮೊಲಿಗೆ ಅಕ್ಕನ ಬಳಗದ ತಾಯಿಂದಿರಿಂದ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿತು. ಶ್ರೀದೇವಿ ಶಾಂತಯ್ಯ ಸ್ವಾಮಿ, ರಾಮಚಂದ್ರ ಯರನಾಳೆ, ಪ್ರೇಮಲಾ ತೊಂಡಾರೆ ಇವರು ತೊಟ್ಟಿಲು ಹಾಡು ಹಾಡಿದರು. ಶರಣೆ ರೇಖಾಬಾಯಿ ಅಷ್ಟೂರೆ, ತಾರಾಮತಿ ಕರಕಾಳೆ, ಪುಷ್ಪಾ ಗಂಗೆ, ಶ್ರೀದೇವಿ ಪಟ್ನೆ, ತೇಜಮ್ಮ ಕಾರಾಮುಂಗೆ, ರೇಖಾ ತೊಂಡಾರೆ, ನಾಗಮ್ಮ ಕೊಡಗೆ, ಲಲಿತಾಬಾಯಿ ಮೀನಕೆರೆ, ಆಶಾ ರಕ್ಷೆ, ಬಸಮ್ಮತಾಯಿ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: 40% ಕಮಿಷನ್ ಭ್ರಷ್ಟಾಚಾರ: ಸ್ವತಂತ್ರ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎಡ ಪಕ್ಷಗಳಿಂದ ಪ್ರತಿಭಟನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here