ಶಹಾಬಾದ: ನಗರದಲ್ಲಿ ಶನಿವಾರ ಮಹಾದಾಸೋಹಿ ಶರಣಬಸವೇಶ್ವರ ೪೪ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಅತ್ಯಂತ ವೈಭವ ಮತ್ತು ಶ್ರದ್ಧಾ ಭಕ್ತಿಯಿಂದ ನಡೆಯಿತು.ಈ ಅಮೂಲ್ಯ ಕ್ಷಣಕ್ಕೆ ಶರಣನ ಸಾವಿರಾರು ಭಕ್ತರು ಸಾಕ್ಷಿಯಾದರು.
ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ರಥೋತ್ಸವವನ್ನು ನಡೆಸಲು ಬೆಳಿಗ್ಗೆಯಿಂದಲೇ ಭರದ ತಯಾರಿ ಮಾಡಲಾಗಿತ್ತು. ತೇರಿಗೆ ಹೂವು-ತಳಿರು ತೋರಣ, ಬಣ್ಣ ಬಣ್ಣದ ಪರಾರಿಗಳಿಂದ ಅಲಂಕಾರ ಮಾಡಲಾಗಿತ್ತು.ಬೆಳಗ್ಗೆ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ,ಸಹಸ್ರ ಬಿಲ್ವಾರ್ಚನೆ ವಿಶೇಷ ಪೂಜೆ ನೇರವೇರಿದವು. ಮಧ್ಯಾಹ್ನ ಅಡವಿತಾತರ ಗದ್ದುಗೆಯಿಂದ ಶರಣಬಸವೇಶ್ವರ ದೇವಾಲಯದವರೆಗೆ ನಂದಿಕೋಲು ಉತ್ಸವ ಜರುಗಿತು.
ಇದನ್ನೂ ಓದಿ: ಕಂಬವೇರಿ ವಿದ್ಯುತ್ ದುರಸ್ಥಿತಿ ವೇಳೆ ವಿದ್ಯುತ್ ಸ್ಪರ್ಷಿಸಿ ಲೈನ್ ಮ್ಯಾನ್ ಸಾವು
ನಂತರ ಸಕಲ ವಾಧ್ಯಗಳೊಂದಿಗೆ ಪಲ್ಲಕ್ಕಿ ಉತ್ವಸ ನಡೆಯುತು.ನಂತರ ರಥದ ಮುಂಭಾಗದಲ್ಲಿ ಪುರುವಂತರ ಸೇವೆ ಸಲ್ಲಿಸಿ, ರಥಕ್ಕೆ ಪೂಜೆ ಸಲ್ಲಿಸಿದರು.
ಸಾಯಂಕಾಲ ಅಪಾರ ಭಕ್ತಾಧಿಗಳು ಭಕ್ತಿ ಭಾವದಿಂದ ರಥವನ್ನು ಎಳೆದರು. ರಥ ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತಾಧಿಗಳು ಶರಣಬಸವೇಶ್ವರ ಮಹಾರಾಜ ಕಿ ಜೈ ಎಂದು ಜೈಕಾರ ಕೂಗುತ್ತಾ ತೇರಿಗೆ ಬಾಳೆಹಣ್ಣು, ಉತ್ತತ್ತಿಯನ್ನು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾತ್ರಿ ವಿಜಯಪುರದ ಲಚ್ಚಾಣದ ಕಲಾವಿದರಿಂದ ಶ್ರೀ ರೇಣುಕಾ ಯಲ್ಲಮ್ಮದೇವಿ ಪೌರಾಣಿಕ ಪ್ರದರ್ಶನ ನಡೆಯಿತು.
ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ನಾಳೆ ಪದಗ್ರಹಣ
ಇದೇ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ವೀರಶೈವ ಯುವಕ ಮಂಡಳಿ ದಾಸೋಹ ಸೇವೆ ಸಲ್ಲಿಸಿದರು. ನಗರ ಪೊಲೀಸ್ ಠಾಣೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಸರ್ವ ಪದಾಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಪುರಾಣ-ಪ್ರವಚನಗಳು ಆಲಿಸುವುದರಿಂದ ಬದುಕಿಗೆ ನೆಮ್ಮದಿ: ಶಾಸಕ ಮತ್ತಿಮಡು