ಕಲಬುರಗಿ: ಗುಡುಗು, ಗಾಳಿ, ಆಣೆಕಲ್ಲು ಸಹಿತ ಮಳೆ

0
106

ಶಹಾಬಾದ: ನಗರದಲ್ಲಿ ಸೋಮವಾರ ಸಾಯಂಕಾಲ ಹಠಾತನೇ ಗುಡುಗು, ಗಾಳಿ ಹಾಗೂ ಆಣೆಕಲ್ಲು ಸಹಿತ ಮಳೆಯಾದ ಪರಿಣಾಮ ವಾವಾವರಣ ತಂಪಾಗಿಸಿದೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

Contact Your\'s Advertisement; 9902492681

ಬಿಸಿಲಿನಿಂದ ಬಸವಳಿದ ನಗರದ ಜನತೆಗೆ ಸೋಮವಾರ ಸಂಜೆ ಅನಿರೀಕ್ಷಿತವಾಗಿ ಸುರಿದ ಮಳೆ ತಂಪೆರೆದು ಸಂತಸ ನೀಡಿದೆ. ಬೆಳಗ್ಗೆಯಿಂದ ಬಿಸಿಲಧಗೆಗೆ ಒಳಗಾಗಿದ್ದ ಜನರು ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಜನಜೀವನ, ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತ್ತು. ಅಲ್ಲದೇ ಆಣೆಕಲ್ಲು ಬಿದ್ದಿದನ್ನು ಕಂಡ ಜನರು ಆಣೆಕಲ್ಲು ಆರಿಸಿಕೊಳ್ಳುವುದು ಸಾಮನ್ಯವಾಗಿತ್ತು. ಬಿಸಿಲ ಧಗೆಯಿಂದ ಬಸವಳಿದ ಜನ ಮಳೆಯಲ್ಲಿ ತೊಯ್ದು, ಕುಣಿದು ಕುಪ್ಪಳಿಸಿದರು.

ನಂತರ ರಾತ್ರಿಯೆಲ್ಲಾ ತಂಪಾದ ಗಾಳಿ ಬೀಸಿದ್ದರಿಂದ ಜನರು ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ.ನಗರದ ಕೆಲವು ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದವು.ಆಣೆಕಲ್ಲಿನ ಹೊಡೆತಕ್ಕೆ ನಲುಗಿದ ಜನರು ಅಂಗಡಿಯೊಳಗೆ ಆಸರೆ ಪಡೆದರು. ನಗರದಲ್ಲಿ ಮಳೆಯಾದರೂ ನಗರದಿಂದ ಎರಡು ಕಿಮೀ ದೂರದಲ್ಲಿರುವ ದೇವನತೆಗನೂರ ಸಮೀಪದಲ್ಲಿ ಒಂದು ಹನಿ ಮಳೆಯಾಗದಿರುವುದು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೃಷಿಕರ ನೂರೆಂಟು ಸಮಸ್ಯೆಗಳ ಪರಿಹಾರಕ್ಕೆ ‘ರೈತ ನ್ಯಾಯ ಮಂಡಳಿ’ ರಚನೆಯ ಅತ್ಯವಶ್ಯಕತೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here