ಕಲಬುರಗಿ: ತಾಲೂಕಿನ ಸಾವಳಗಿ (ಬಿ) ಗ್ರಾಮದಲ್ಲಿ ಅಶ್ವತ ಮೇಲ್ಟಿಸ್ಪೆಷಾಲಿಟಿ ಆಸ್ವತ್ರೆ, ಗ್ರಾಮ ವಿಕಾಸ ಸಮಿತಿ ಸಾವಳಗಿ (ಬಿ) ಆರೋಗ್ಯ ಭಾರತಿ ಹಾಗೂ ಕುಸುಮ ಸಮಗ್ರ ಅಭಿವೃದ್ಧಿ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿ ಉತ್ತರ ಪ್ರಾಂತ ಮುಖ್ಯಸ್ಥ ಸಂಜೀವ್ ಬಾಸ್ಗಿಕರ್, ಶ್ರೀದೇವಿ ಅಲಿಪೂರ, ವೈದ್ಯರಾದ ಡಾ. ಶೇಖ ಸಜೀದ್, ಡಾ.ವಿಶ್ವರಾಜ ತಡಕಲ್, ಡಾ.ಸುರೇಶಕುಮಾರ, ಡಾ.ಅಶ್ಪಿಯಾ, ಡಾ.ಅಶ್ವಿನಿ ನಾಯಕ, ನಿರ್ವಾಹಕ ಕರಣಸಿಂಗ್ ಹಾಗೂ ಗ್ರಾಮಸ್ಥರು ಇದ್ದರು.